Imran Khan Arrest: ಇಮ್ರಾನ್ ಬಂಧನ ಕಾನೂನು ಬಾಹೀರ!

ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ಕುರಿತು ಪಾಕ್ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಮ್ರಾನ್ ಬಂಧನ ಕಾನೂನು ಬಾಹೀರ ಎನ್ನುವ ಮೂಲಕ ಪಾಕಿಸ್ತಾನ ಸೇನೆಗೆ ಪರೋಕ್ಷವಾಗಿ ಬೆವರಿಳಿಸಿದೆ. ಅಲ್ಲದೆ 1 ಗಂಟೆ ಒಳಗೆ ಸುಪ್ರೀಂಕೋರ್ಟ್ ಎದುರು ಇಮ್ರಾನ್ ಹಾಜರುಪಡಿಸಲು ಆದೇಶ ನೀಡಿದೆ.

ಈಗಾಗಲೇ ಪಾಕಿಸ್ತಾನದಲ್ಲಿ ಇಮ್ರಾನ್ ಬೆಂಬಲಿಗರು ಉಗ್ರ ಪ್ರತಿಭಟನೆ ಆರಂಭಿಸಿ ಹಿಂಸೆಗೆ ಇಳಿದಿದ್ದಾರೆ. ಆದರೆ ಹಿಂಸೆ ನಿಯಂತ್ರಿಸಲು ಆಗದ ಪಾಕ್ ಸೇನೆ ಪರದಾಡುತ್ತಿದೆ. ಈ ಕಾರಣಕ್ಕೆ ಕಂಡಲ್ಲಿ ಗುಂಡು ಹೊಡೆಯುತ್ತಿದೆ. ಭೀಕರ ಹಿಂಸಾಚಾರದಲ್ಲಿ 10 ಜನ ಮೃತಪಟ್ಟರೂ ಪ್ರತಿಭಟನೆ ಹಿಡಿತಕ್ಕೆ ಸಿಗುತ್ತಿಲ್ಲ. ಇದೇ ಸಂದರ್ಭದಲ್ಲಿ ಇಮ್ರಾನ್ ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ, ಮಹತ್ವದ ತೀರ್ಪು ನೀಡಿದೆ. ಇಮ್ರಾನ್ ಖಾನ್ ಬಿಡುಗಡೆಗೆ ಕೌಂಟ್‌ಡೌನ್ ಶುರುವಾದಂತಾಗಿದೆ.

Pakistan Supreme court says that Imran khan arrest is illegal

ಪಾಕಿಸ್ತಾನ ಸುಪ್ರೀಂಕೋರ್ಟ್ ಹೇಳಿದ್ದೇನು?

2 ದಿನದ ಹಿಂದೆ ವಿಚಾರಣೆಗೆ ಅಂತಾ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಹಾಜರಾಗಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಬಂಧನವಾಗಿತ್ತು. ಪಾಕಿಸ್ತಾನಿ ಅರೆಸೈನಿಕ ಪಡೆ ಇಮ್ರಾನ್ ಖಾನ್ ಅವರನ್ನ ಅರೆಸ್ಟ್ ಮಾಡಿತ್ತು. ಇದು ಪಾಕಿಸ್ತಾನದ ನೆಮ್ಮದಿ ಕೆಡಿಸಿತ್ತು. ಅದರಲ್ಲೂ ಇಮ್ರಾನ್ ಅವರನ್ನ ಬಂಧಿಸಿದ್ದ ರೀತಿ ಎಲ್ಲರನ್ನೂ ರೊಚ್ಚಿಗೆಬ್ಬಿಸಿದೆ. ಮತ್ತೊಂದ್ಕಡೆ ಇಮ್ರಾನ್ ಬಂಧನದ ಬಗ್ಗೆ ನಿನ್ನೆ ಇಸ್ಲಾಮಾಬಾದ್‌ ಹೈಕೋರ್ಟ್‌ ತೀರ್ಪು ನೀಡಿ ಇಮ್ರಾನ್ ಬಂಧನ ಸರಿಯಾಗಿದೆ ಎಂದಿತ್ತು. ಆದರೆ ಈಗ ಪಾಕಿಸ್ತಾನ ಸುಪ್ರೀಂಕೋರ್ಟ್ ಉಲ್ಟಾ ತೀರ್ಪು ನೀಡಿ, ಬಂಧನ ಕಾನೂನು ಬಾಹೀರ ಎಂದಿದೆ.

ಇಮ್ರಾನ್ 8 ದಿನ ಕಸ್ಟಡಿಗೆ!

ಪಾಕಿಸ್ತಾನದ ಮಾಜಿ ಪಿಎಂ ಇಮ್ರಾನ್ ಖಾನ್‌ರನ್ನ 8 ದಿನ ಬಂಧನದಲ್ಲಿಡಬಹುದು ಎಂದು ನಿನ್ನೆಯಷ್ಟೇ ತೀರ್ಪು ನೀಡಿತ್ತು ಇಸ್ಲಾಮಾಬಾದ್‌ ಹೈಕೋರ್ಟ್‌. ಇಮ್ರಾನ್ ಅರೆಸ್ಟ್ ಆದ 1 ದಿನದ ನಂತರವೇ ತೀರ್ಪು ಹೊರಬಿದ್ದಿತ್ತು. ಹೀಗಾಗಿ ಇಮ್ರಾನ್ ಖಾನ್ ಪರ ವಕೀಲರು ಪಾಕಿಸ್ತಾನದ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರ. ಇದೀಗ ಅರ್ಜಿಯ ವಿಚಾರಣೆ ನಡೆಸಿರುವ ಪಾಕಿಸ್ತಾನ ಸುಪ್ರೀಂಕೋರ್ಟ್ ಮಖ್ಯ ನ್ಯಾಯಮೂರ್ತಿ, ಇಮ್ರಾನ್ ಬಂಧನ ಕಾನೂನು ಬಾಹೀರ ಎಂದಿದ್ದಾರೆ. ಅಲ್ಲದೆ 1 ಗಂಟೆ ಒಳಗೆ ಇಮ್ರಾನ್ ಖಾನ್ ಕೋರ್ಟ್ ಎದುರು ಇರಬೇಕು ಎಂದಿದ್ದಾರೆ.

ಏನಿದು ಇಮ್ರಾನ್ ವಿರುದ್ಧದ ಕೇಸ್?

ಅಷ್ಟಕ್ಕೂ ಪಾಕಿಸ್ತಾನ್‌ ತೆಹ್ರೀಕ್‌-ಇ-ಇನ್ಸಾಫ್‌ ಪಕ್ಷದ ಅಧ್ಯಕ್ಷ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿಯೂ ಆದ ಇಮ್ರಾನ್ ಖಾನ್ ವಿರುದ್ಧ ಸುಮಾರು 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲಿಂಗ್ ಹಗರಣವಿದೆ. ಈ ಕೇಸ್ ಸಂಬಂಧ ಈಗ ಇಮ್ರಾನ್ ಖಾನ್ ಜೈಲು ಹಕ್ಕಿಯಾಗಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ವಶದಲ್ಲಿರುವ ಇಮ್ರಾನ್ ಖಾನ್‌ ವಿಚಾರಣೆ ಕೂಡ ಆರಂಭವಾಗಿದೆ. ಆದರೆ ಇಮ್ರಾನ್ ಬೆಂಬಲಿಗರು ಈ ಆರೋಪ ಅಲ್ಲಗಳೆಯುತ್ತಿದ್ದಾರೆ.

Pakistan Supreme court says that Imran khan arrest is illegal

ಇಮ್ರಾನ್ ಜೀವಕ್ಕೆ ಅಪಾಯ?

ಜೈಲು ಸೇರಿರುವ ಇಮ್ರಾನ್ ಖಾನ್ ಜೀವಂತವಾಗಿ ಹೊರಗೆ ಬರ್ತಾರಾ? ಇಮ್ರಾನ್ ಖಾನ್ ಕಥೆ ಮುಂದೇನು? ಹೀಗೆ ಪಾಕಿಸ್ತಾನ ಮಾಜಿ ಪಿಎಂ ಇಮ್ರಾನ್ ಖಾನ್ ಅವರ ಅಭಿಮಾನಿಗಳು ಬೆಂಬಲಿಗರು ಭಯದಲ್ಲೇ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಉತ್ತರ ಹೇಳುವ ಮುಖಗಳು ಮಾತ್ರ ಕಾಣುತ್ತಲೇ ಇಲ್ಲ. ಈ ನಡುವೆ ವಿಚಾರಣೆಗೆ ಬಂದ ಇಮ್ರಾನ್ ಖಾನ್ ಅವರನ್ನ ಪಾಕಿಸ್ತಾನದ ಅರೆಸೇನಾ ಪಡೆ ಬಂಧಿಸಿದ್ದು ಯಾಕೆ? ಇದು ಹೇಗೆ ಸಾಧ್ಯ? ಎಂಬ ಪ್ರಶ್ನೆ ತೀವ್ರವಾಗಿದೆ.

Pakistan Supreme court says that Imran khan arrest is illegal

ಕೊಲೆ ಆರೋಪವೇ ಮುಳುವಾಯ್ತಾ?

ಪಾಕಿಸ್ತಾನ ಅಂದ್ರೆ ಅಲ್ಲಿ ಜೀವಕ್ಕೆ ಬೆಲೆ ಇಲ್ಲ. ಅದರಲ್ಲೂ ಸತ್ಯ ಮಾತನಾಡುವ ರಾಜಕಾರಣಿ, ಪತ್ರಕರ್ತರನ್ನ ಹೆಣ ಮಾಡದೆ ಬಿಡುವುದಿಲ್ಲ ಅಲ್ಲಿನ ವ್ಯವಸ್ಥೆ. ಹೀಗೆ ಪತ್ರಕರ್ತನೊಬ್ಬನ ಹತ್ಯೆ ಸಂಬಂಧ ಇಮ್ರಾನ್ ಖಾನ್ ISI ಸಂಸ್ಥೆ ವಿರುದ್ಧ ಗಂಭೀರ ಆರೋಪ ಮಾಡಿದ್ರು. ಇಮ್ರಾನ್ ಖಾನ್ ಆರೋಪ ಮಾಡುತ್ತಿದ್ದಂತೆ ಐಎಸ್‌ಐ ಜೊತೆ ಪಾಕಿಸ್ತಾನ ಮಿಲಿಟರಿ ಕೂಡ ರೊಚ್ಚಿಗೆದ್ದು ಮೈಕೊಡವಿ ನಿಂತಿತ್ತು. ಅದರ ಪರಿಣಾಮವನ್ನ ಈಗ ಇಮ್ರಾನ್ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಐಎಸ್‌ಐ ತೋಡಿದ ಬಲೆಗೆ ಬಿದ್ದು ಇಮ್ರಾನ್ ಅಂದರ್ ಆಗಿದ್ದಾರೆಂದು ಪಾಕಿಸ್ತಾನದ ಜನ ಆರೋಪಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+