ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆಗೆ ಫಿಕ್ಸ್!
ಇಸ್ಲಾಮಾಬಾದ್: ಇಮ್ರಾನ್ ಖಾನ್ ಬಂಧನ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ ಪಾಕಿಸ್ತಾನದ ಸುಪ್ರೀಂ ಕೋರ್ಟ್. ಇಂದು ಸುಪ್ರೀಂ ಎದುರು ಹಾಜರಾದ ಇಮ್ರಾನ್ ಖಾನ್ (Imran Khan Kannada)ಗೆ ಬಿಗ್ ರಿಲೀಫ್ ಸಿಕ್ಕಿದೆ. ನಿಮ್ಮ ಬಂಧನ ಕಾನೂನು ಬದ್ಧವಾಗಿಲ್ಲ, ಹೀಗಾಗಿ ಇನ್ನೋಂದು ಅವಕಾಶ ನೀಡುತ್ತಿದ್ದೇವೆ ಎಂದು ಸುಪ್ರೀಂ ಸಿಜೆಐ ಇಮ್ರಾನ್‌ಗೆ ಹೇಳಿದ್ದಾರೆ.
ಅಷ್ಟಕ್ಕೂ ಜೈಲು ಸೇರಿರುವ ಇಮ್ರಾನ್ ಖಾನ್‌ನ 1 ಗಂಟೆ ಒಳಗೆ ಸುಪ್ರೀಂಕೋರ್ಟ್‌ಗೆ ಕರೆತನ್ನಿ ಎಂದು ಆದೇಶ ನೀಡಿದ್ದರೂ, ಪಾಕಿ ಸೇನೆ ಮತ್ತು ಪೊಲೀಸರು ತಡ ಮಾಡಿದ್ದರು. ಸುಪ್ರೀಂ ಡೆಡ್‌ಲೈನ್ ಮುಗಿದು 3 ಗಂಟೆಯ ಬಳಿಕ ಇಮ್ರಾನ್ ಖಾನ್ ಸುಪ್ರೀಂಕೋರ್ಟ್ ಎದುರು ಹಾಜರಾದರು. ಹೀಗೆ ನ್ಯಾಯಮೂರ್ತಿ ಎದುರು ಬಂದ ಇಮ್ರಾನ್ ಖಾನ್ ಅವರನ್ನ ಕಂಡು, ಖುದ್ದು ಮುಖ್ಯನ್ಯಾಯಮೂರ್ತಿ ಖುಷಿಪಟ್ಟಿದ್ದಾರೆ. ಅಲ್ಲದೆ ನಿಮ್ಮನ್ನು ನೋಡುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ. ಹಾಗೇ ಪಾಕಿಸ್ತಾನ ಮಿಲಿಟರಿಗೆ ಪರೋಕ್ಷ ಎಚ್ಚರಿಕೆ ಸಿಕ್ಕಿದೆ.

ಯಾವಾಗ ಬಿಡುಗಡೆ ಆಗ್ತಾರೆ ಇಮ್ರಾನ್?
ಹೌದು, ಪಾಕಿಸ್ತಾನ ಮಿಲಿಟರಿ ಹಾಗೂ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಸೇರಿ ಇಮ್ರಾನ್ ಖಾನ್‌ಗೆ ಖೆಡ್ಡ ತೋಡಿ, ಪಾಕಿಸ್ತಾನ ಮಾಜಿ ಪ್ರಧಾನಿಯನ್ನ ಜೈಲಿಗೆ ಕಳಿಸಿದ್ದ ಆರೋಪ ಇತ್ತು. ಭ್ರಷ್ಟಾಚಾರ ನಿಗ್ರಹದಳ ಬಳಸಿಕೊಂಡು ಈ ಕೆಲಸ ಮಾಡಿದ್ದಾರೆ ಎಂಬ ಆರೋಪವನ್ನ ಇಮ್ರಾನ್ ಬೆಂಬಲಿಗರು ಮಾಡುತ್ತಿದ್ದರು. ಇದೇ ಕಾರಣಕ್ಕಾಗಿ ಪಾಕಿಸ್ತಾನದ ಅತ್ಯುನ್ನತ ಕೋರ್ಟ್ ಸುಪ್ರೀಂಗೆ ಮನವಿ ಮಾಡಲಾಗಿತ್ತು. ಇದೀಗ ಇಮ್ರಾನ್ ಖಾನ್ ಬಂಧವೇ ಕಾನೂನುಬದ್ಧ ಅಲ್ಲ ಎಂಬ ಹೇಳಿಕೆಯನ್ನ ಪಾಕಿಸ್ತಾನ ಸುಪ್ರೀಂಕೋರ್ಟ್ ಹೇಳಿದೆ.
ಇಮ್ರಾನ್ ರಿಲೀಸ್‌ಗೆ ಕೌಂಟ್‌ಡೌನ್!
ಇನ್ನು ಸುಪ್ರೀಂಕೋರ್ಟ್ ಇಮ್ರಾನ್ ಬಂಧನ ಕಾನೂನು ಬದ್ಧವಲ್ಲ ಎಂದು ಹೇಳಿದ ಬಳಿಕ ಇಮ್ರಾನ್ ರಿಲೀಸ್ ಆಗಲೇಬೇಕು. ಆದ್ರೆ ಇಮ್ರಾನ್ ರಿಲೀಸ್ ಆಗೋದು ಯಾವಾಗ? ಎಂಬ ಪ್ರಶ್ನೆ ಅವರ ಬೆಂಬಲಿಗರನ್ನ ಕಾಡ್ತಿದೆ. ಇಲ್ಲಿಯ ತನಕ ಆ ಬಗ್ಗೆ ಯಾವುದೇ ಅಪ್‌ಡೇಟ್ ಸಿಗದೇ ಇದ್ದರೂ, ಶೀಘ್ರದಲ್ಲೇ ಇಮ್ರಾನ್ ಹೊರಗೆ ಬರುವ ನಿರೀಕ್ಷೆ ಇದೆ. ಇಮ್ರಾನ್ ಖಾನ್ ಸುಪ್ರೀಂಕೋರ್ಟ್ ತಲುಪಿದ ಹಿನ್ನೆಲೆ ಪಾಕಿಸ್ತಾನದಲ್ಲಿ ಬಿಗಿ ಭದ್ರತೆಯನ್ನ ಕೈಗೊಳ್ಳಲಾಗಿದೆ. ಹಾಗೇ ಖಾನ್ ಬೆಂಬಲಿಗರು ಕೂಡ ಒಂದಷ್ಟು ಸೈಲೆಂಟ್ ಆಗಿದ್ದಾರೆ.

ಪಾಕಿಸ್ತಾನ ಸುಪ್ರೀಂಕೋರ್ಟ್ ಹೇಳಿದ್ದೇನು?
2 ದಿನದ ಹಿಂದೆ ವಿಚಾರಣೆಗೆ ಅಂತಾ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಹಾಜರಾಗಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಬಂಧನವಾಗಿತ್ತು. ಪಾಕಿಸ್ತಾನಿ ಅರೆಸೈನಿಕ ಪಡೆ ಇಮ್ರಾನ್ ಖಾನ್ ಅವರನ್ನ ಅರೆಸ್ಟ್ ಮಾಡಿತ್ತು. ಇದು ಪಾಕಿಸ್ತಾನದ ನೆಮ್ಮದಿ ಕೆಡಿಸಿತ್ತು. ಅದರಲ್ಲೂ ಇಮ್ರಾನ್ ಅವರನ್ನ ಬಂಧಿಸಿದ್ದ ರೀತಿ ಎಲ್ಲರನ್ನೂ ರೊಚ್ಚಿಗೆಬ್ಬಿಸಿದೆ. ಮತ್ತೊಂದ್ಕಡೆ ಇಮ್ರಾನ್ ಬಂಧನದ ಬಗ್ಗೆ ನಿನ್ನೆ ಇಸ್ಲಾಮಾಬಾದ್ ಹೈಕೋರ್ಟ್ ತೀರ್ಪು ನೀಡಿ ಇಮ್ರಾನ್ ಬಂಧನ ಸರಿಯಾಗಿದೆ ಎಂದಿತ್ತು. ಆದರೆ ಈಗ ಪಾಕಿಸ್ತಾನ ಸುಪ್ರೀಂಕೋರ್ಟ್ ಉಲ್ಟಾ ತೀರ್ಪು ನೀಡಿ, ಬಂಧನ ಕಾನೂನು ಬಾಹೀರ ಎಂದಿದೆ.
ಏನಿದು ಇಮ್ರಾನ್ ವಿರುದ್ಧದ ಕೇಸ್?
ಅಷ್ಟಕ್ಕೂ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಅಧ್ಯಕ್ಷ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿಯೂ ಆದ ಇಮ್ರಾನ್ ಖಾನ್ ವಿರುದ್ಧ ಸುಮಾರು 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲಿಂಗ್ ಹಗರಣವಿದೆ. ಈ ಕೇಸ್ ಸಂಬಂಧ ಈಗ ಇಮ್ರಾನ್ ಖಾನ್ ಜೈಲು ಹಕ್ಕಿಯಾಗಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ವಶದಲ್ಲಿರುವ ಇಮ್ರಾನ್ ಖಾನ್ ವಿಚಾರಣೆ ಕೂಡ ಆರಂಭವಾಗಿದೆ. ಆದರೆ ಇಮ್ರಾನ್ ಬೆಂಬಲಿಗರು ಈ ಆರೋಪ ಅಲ್ಲಗಳೆಯುತ್ತಿದ್ದಾರೆ.
ಇದನ್ನೆಲ್ಲಾ ನೋಡಿ ಹೇಳುವುದಾದರೆ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಬಿಡುಗಡೆ ಸುದ್ದಿ ಸಂಚಲನ ಸೃಷ್ಟಿಸಿ ಬೆಂಬಲಿಗರಿಗೆ ಖುಷಿ ಕೊಟ್ಟಿದೆ. ಮತ್ತೊಂದ್ಕಡೆ ಪಾಕ್ ಸೇನೆ ಕೂಡ ಹಿಂಸಾಚಾರ ಕಂಡು ಬೆಚ್ಚಿಬಿದ್ದಿತ್ತು. ಈಗ ಖುದ್ದು ಪಾಕಿಸ್ತಾನ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿ ಇಮ್ರಾನ್ ಖಾನ್ ಬಂಧನ ಕಾನೂನು ಬದ್ಧವಲ್ಲ ಎಂದಿರುವುದು ವಿಶೇಷ.












Click it and Unblock the Notifications