ಸಂಕಷ್ಟದಲ್ಲೂ ಮಾಡಬಾರದ ಕೆಲಸ ಮಾಡುತ್ತಿರುವ ಪಾಕಿಸ್ತಾನ
ನ್ಯೂಯಾರ್ಕ್, ಏಪ್ರಿಲ್ 21: ವಿಶ್ವ ಹಣಕಾಸು ಸಂಸ್ಥೆಯಲ್ಲಿ ಸಾಲ ನೀಡುವಂತೆ ಗೋಗರೆಯುತ್ತಿರುವ ಪಾಕಿಸ್ತಾನ, ಇನ್ನೊಂದೆಡೆ, ಉಗ್ರರಿಗೆ ಬೆಂಬಲ ನೀಡುವ ಕೆಲಸವನ್ನು ಮುಂದುವರಿಸುತ್ತಿದೆ.
Recommended Video
ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಸುಮಾರು 3,800ಕ್ಕೂ ಹೆಚ್ಚು ಉಗ್ರರನ್ನು, ತನ್ನ ಭಯೋತ್ಪಾದನಾ ವೀಕ್ಷಣಾ ಪಟ್ಟಿಯಿಂದ ಪಾಕಿಸ್ತಾನ ಸರಕಾರ ತೆಗೆದುಹಾಕಿದೆ.
ಈ ನಿರ್ಧಾರಕ್ಕೆ ಯಾವುದೇ ಸಕಾರಣವನ್ನಾಗಲಿ ಅಥವಾ ಸಾರ್ವಜನಿಕ ವಿವರಣೆಯನ್ನಾಗಲಿ ಪಾಕಿಸ್ತಾನ ನೀಡಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಝೂಕಿ-ಉರ್-ರೆಹಮಾನ್-ನಕ್ವಿ ಸೇರಿದಂತೆ, ಸುಮಾರು 3,800 ಉಗ್ರರ ಹೆಸರನ್ನು ಕಣ್ಗಾವಲು ಪಟ್ಟಿಯಿಂದ ಪಾಕಿಸ್ತಾನ ತೆಗೆದುಹಾಕಿದೆ. ಕಳೆದ ನಲವತ್ತು ದಿನಗಳಿಂದ, ಉಗ್ರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ಕೆಲಸ ಮುಂದುವರಿಯುತ್ತಲೇ ಇದೆ.
ಇಮ್ರಾನ್ ಖಾನ್ ಸರಕಾರ ಅಧಿಕಾರಕ್ಕೆ ಬಂದ ನಂತರ, 1,070 ಉಗ್ರರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿದೆ ಎಂದು ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ವರದಿಯಲ್ಲಿ ಹೇಳಲಾಗಿದೆ.
ಉಗ್ರರಿಗೆ ಅಕ್ರಮವಾಗಿ ಹಣಕಾಸು ನೆರವು ನೀಡುತ್ತಿರುವುದಕ್ಕಾಗಿ ಪಾಕಿಸ್ತಾನವನ್ನು ಈಗಾಗಲೇ ಎಫ್.ಎ.ಟಿ.ಎಫ್ ಬೂದುಪಟ್ಟಿಯಲ್ಲಿ ಸೇರಿಸಿದೆ.












Click it and Unblock the Notifications