14 ವರ್ಷದ ಬಾಲಕಿ ಮದುವೆಯಾದ 50 ವರ್ಷದ ಪಾಕಿಸ್ತಾನ ಸಂಸದ

ಚಿತ್ರಾಲ್,ಫೆಬ್ರವರಿ 23: ಐವತ್ತು ವರ್ಷದ ಪಾಕಿಸ್ತಾನ ಸಂಸದ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ತನಿಖೆಗೆ ಆದೇಶದಿಸಲಾಗಿದೆ.

ಆ ಬಾಲಕಿ ಜುಗೂರ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು, ಶಾಲಾ ದಾಖಲಾತಿ ಪ್ರಕಾರ ಜನ್ಮ ದಿನ ಅಕ್ಟೋಬರ್ 28, 2006 ಆಗಿದೆ. ಆಕೆಗೆ ಮದುವೆಯ ವಯಸ್ಸಾಗಿಲ್ಲ ಎಂಬುದನ್ನು ತೋರಿಸುತ್ತಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.ಪಾಕ್ ಮಾಧ್ಯಮಗಳ ಪ್ರಕಾರ ನ್ಯಾಷನಲ್ ಆಸೆಂಬ್ಲಿ ಸದಸ್ಯ ಮೌಲಾನಾ ಸಲಾಹುದ್ದೀನ್ ಅಯುಬಿ ಅವರ ವಯಸ್ಸು 50ಕ್ಕೂ ಹೆಚ್ಚಾಗಿದೆ.

ಬಲೋಚಿಸ್ತಾನ್ ನಿಂದ ಚುನಾಯಿತರಾಗಿದ್ದ ನ್ಯಾಷನಲ್ ಆಸೆಂಬ್ಲಿಯ ಸದಸ್ಯ ಮತ್ತು ಉಲೇಮಾ-ಇ- ಇಸ್ಲಾಂ ಮುಖಂಡ ಮೌಲಾನಾ ಸಲಾಹುದ್ದೀನ್ ಅಯುಬಿ 14 ವರ್ಷದ ಬಾಲಕಿಯೊಂದಿಗೆ ಮದುವೆಯಾಗಿರುವ ಬಗ್ಗೆ ಪಾಕಿಸ್ತಾನದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 Pakistan MP Marries 14-Year-Old Girl From Balochistan, Probe Ordered

ಮಹಿಳೆಯರ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯೊಂದು ದೂರು ದಾಖಲಿಸಿದ ಬಳಿಕ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದ ಕಾನೂನು ಪ್ರಕಾರ 16 ವರ್ಷಕ್ಕಿಂತ ಕೆಳಗಿನ ಬಾಲಕಿಯರ ವಿವಾಹಕ್ಕೆ ಅವಕಾಶ ಇಲ್ಲ. ಆದಾಗ್ಯೂ, ಬಲವಂತದಿಂದ ಮದುವೆ ಮಾಡುವ ಪೋಷಕರಿಗೆ ಕಾನೂನು ಪ್ರಕಾರ ಶಿಕ್ಷೆ ನೀಡಲಾಗುತ್ತದೆ.

ಈ ಮಧ್ಯೆ ಆಕೆಗೆ 16 ವರ್ಷ ವಯಸ್ಸಾಗುವವರೆಗೂ ಮದುವೆ ಮಾಡುವುದಿಲ್ಲ ಎಂದು ಬಾಲಕಿಯ ತಂದೆ ಸಂಬಂಧಿತ ಪ್ರಾಧಿಕಾರಿಗಳಿಗೆ ತಿಳಿಸಿರುವುದಾಗಿ ಚಿತ್ರಾಲ್ ಡಿಪಿಒ ಹೇಳಿದ್ದಾರೆ.

ಸ್ವಯಂ ಸೇವಾ ಸಂಸ್ಥೆಯೊಂದು ಕೆಲವು ದಿನಗಳ ಹಿಂದೆ ದಾಖಲಿಸಿದ್ದ ದೂರಿನ ಅನ್ವಯ ಪೊಲೀಸರು ಬಾಲಕಿ ಮನೆಗೆ ತೆರಳಿ, ವಿಚಾರಣೆ ನಡೆಸಿದ್ದಾರೆ. ಆದರೆ, ಆಕೆಯ ತಂದೆ ಮದುವೆ ಆಗಿಲ್ಲ ಎಂದಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ವೊಂದನ್ನು ನೀಡಲಾಗಿದೆ ಎಂದು ಚಿತ್ರಾಲ್ ಪೊಲೀಸ್ ಠಾಣೆ ಎಸ್ ಎಚ್ ಒ ಇನ್ಸ್ ಪೆಕ್ಟರ್ ಸಜ್ಜಾದ್ ಅಹ್ಮದ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+