ಅಮೆರಿಕಾದಲ್ಲಿ ಮೋದಿ ಜನಪ್ರಿಯತೆ: ಪಾಕ್ ಪತ್ರಿಕೆ ಒಪ್ಪಿಕೊಂಡ ಸತ್ಯ
ಇಸ್ಲಾಮಾಬಾದ್, ಸೆ 29: ಭಾರತದ ಪ್ರಧಾನಿಗೆ ಅಮೆರಿಕಾದಲ್ಲಿ ಸಿಕ್ಕ ಅಭೂತಪೂರ್ವ ಸ್ವಾಗತಕ್ಕೆ ಪಾಕಿಸ್ತಾನದ ಮಿಡಿಯಾಗಳು, ಮೋದಿಯವರನ್ನು ಅಮೆರಿಕಾ 'ದೊಡ್ಡ ಸ್ಟಾರ್' ನಂತೆ ಸ್ವಾಗತಿಸಿದೆ ಎಂದು ಹೇಳಿದೆ.
ಅಮೆರಿಕಾ ಪ್ರವಾಸದ ವೇಳೆ ಸಮಯವನ್ನು ಹಾಳು ಮಾಡದೇ, ಹಲವಾರು ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸಿ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆಂದು ಪಾಕಿಸ್ತಾನದ ಪತ್ರಿಕೆಗಳು ಹೇಳಿವೆ.
ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅಮೆರಿಕಾದಲ್ಲಿ ಇದ್ದರೂ, ಪಾಕ್ ಮೂಲದ ನಾಗರೀಕರನ್ನು ಭೇಟಿ ಮಾಡುವ ಯಾವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಿಲ್ಲ. ಪಾಕಿಸ್ತಾನಕ್ಕೆ ಹೊಸ ಉದ್ಯಮಗಳನ್ನು ಸೆಳೆಯುವ ಪ್ರಯತ್ನವನ್ನೂ ಮಾಡಲಿಲ್ಲ ಎಂದು ಪಾಕ್ ಪತ್ರಿಕೆಗಳು ತಮ್ಮ ಪ್ರಧಾನಿಗಳಿಗೆ ಬಿಸಿ ಮುಟ್ಟಿಸಿವೆ.
ತನ್ನ ಅಮೆರಿಕಾ ಪ್ರವಾಸವನ್ನು ಬರೀ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವುದಕ್ಕೆ ಮಾತ್ರ ನವಾಬ್ ಷರೀಫ್ ಮೀಸಲಿಟ್ಟಿದ್ದಾರೆ. ಇತ್ತ ಮೋದಿ, ಅಮೆರಿಕಾದ ಭಾರತೀಯರನ್ನು ಭೇಟಿ ಮಾಡಿ ತನ್ನ ಜನಪ್ರಿಯತೆಯನ್ನು ಉತ್ತುಂಗಕ್ಕೇರಿಸಿ ಕೊಳ್ಳುತ್ತಿದ್ದಾರೆಂದು ಪಾಕ್ ಪತ್ರಿಕೆಗಳು ಅಭಿಪ್ರಾಯ ಪಟ್ಟಿವೆ.
ಮೋದಿ ವಿಶಿಷ್ಟ ವ್ಯಕ್ತಿತ್ವನ್ನು ಹೊಂದಿರುವ ರಾಜಕಾರಣಿಯಾಗಿದ್ದು, ರಾಜಕೀಯ ಮತ್ತು ತಮಗಿರುವ ಮಿಲಿಟರಿ ಶಕ್ತಿಯನ್ನು ವಿರೋಧಿಗಳಿಗೆ ಮನದಟ್ಟು ಮಾಡುವ ಶಕ್ತಿಯನ್ನು ಹೊಂದಿದ್ದಾರೆಂದು ಪಾಕ್ ದೈನಿಕಗಳು ವರ್ಣಿಸಿವೆ.

ಮೋದಿ ಸ್ಟಾರ್
ಭಾರತದ ಪ್ರಧಾನಿ ಮೋದಿಯವರನ್ನು ಸ್ಟಾರ್ ನಂತೆ ಸ್ವಾಗತಿಸಲಾಗುತ್ತಿದೆ. ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ನಮ್ಮ ಪ್ರಧಾನಿ ಷರೀಫ್ ಬರೀ ವಿಶ್ವಸಂಸ್ಥೆಯ ಭಾಷಣಕ್ಕೆ ಸೀಮಿತವಾಗಿದ್ದಾರೆ - ಪಾಕ್ ಪ್ರಮುಖ ದೈನಿಕ ದಿ ನೇಶನ್.(ಚಿತ್ರ: ಪಿಟಿಐ)

ನವಾಬ್ ಷರೀಫ್ ಅಮೆರಿಕಾದಲ್ಲಿ
ನವಾಬ್ ಷರೀಫ್ ಮತ್ತು ಮೋದಿ ಇಬ್ಬರೂ ಅಮೆರಿಕಾದಲ್ಲಿದ್ದಾರೆ. ಆದರೆ ಅಮೆರಿಕಾದ ಸೆಕ್ರೆಟರಿ ಜನರಲ್ ಬಾನ್ ಕಿ ಮೂನ್ ಇಬ್ಬರು ನಾಯಕರಿಗೆ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಬಹಳ ವ್ಯತ್ಯಾಸ ಇರುವುದನ್ನು ಕಾಣಬಹುದಾಗಿದೆ - ದಿ ನೇಶನ್ ಸಂಪಾದಕೀಯ.

ಸಿಲಿಕಾನ್ ವ್ಯಾಲಿ
ಸಿಲಿಕಾನ್ ವ್ಯಾಲಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಜೊತೆ ಮಾತ್ರ ಮೋದಿ ಸಂವಾದ ನಡೆಸದೆ, ಫೇಸ್ ಬುಕ್ ಚಂದಾದಾರರ ಕೋಟ್ಯಾಂತರ ಜನರಲ್ಲಿನ ಆಯ್ದ ಪ್ರಶ್ನೆಗೆ ಉತ್ತರಿಸುತ್ತಾರೆ. ಇದು ಮೋದಿಯವರ ವಿಶಿಷ್ಟ ಕಾರ್ಯವೈಖರಿ ಎಂದು ಪಾಕ್ ಪತ್ರಿಕೆಗಳು ಮೋದಿಯವರನ್ನು ಹೊಗಳಿವೆ.(ಚಿತ್ರ: ಪಿಟಿಐ)

ದೊಡ್ಡ ಜೋಕ್
ಮೋದಿ ತನ್ನ ಅಮೆರಿಕಾ ಪ್ರವಾಸದ ಒಂದು ಕ್ಷಣವನ್ನೂ ಹಾಳಾಗದಂತೆ ಕಾರ್ಯಕ್ರಮ ಆಯೋಜಿಸಿಕೊಂಡಿದ್ದರೆ, ನಮ್ಮ ಪ್ರಧಾನಿ ಅಮೆರಿಕಾ ಅಧ್ಯಕ್ಷರ ಜೊತೆ ಉರ್ದುವಿನಲ್ಲಿ ಮಾತನಾಡಿ, ಪಾಕ್ ಜನರ ಮತಗಿಟ್ಟಿಸಲು ಮುಂದಾಗಿರುವುದು ದೊಡ್ಡ ಜೋಕ್ ಎಂದು ಪಾಕ್ ದೈನಿಕ ದಿ ನೇಶನ್ ಲೇವಡಿ ಮಾಡಿದೆ.

ಪಾಕ್ ಕಲಿಯಬೇಕಿದೆ
ಮೋದಿಯವರನ್ನು ನೋಡಿ ನಮ್ಮ ರಾಜಕೀಯ ಮುಖಂಡರು ಕಲಿಯಬೇಕಿದೆ. ದೇಶವನ್ನು ಅಭಿವೃದ್ದಿಯ ಪಥದತ್ತ ಮುನ್ನಡೆಸಲು ಮೋದಿ ಅಸಾಧಾರಣ ಯೋಜನೆಯನ್ನು ಹೊಂದಿದ್ದಾರೆ. ಪಾಕಿಸ್ತಾನದ ಮುಖಂಡರು ಅಭಿವೃದ್ದಿ ಬಗ್ಗೆ ಚಿಂತನೆ ನಡೆಸುವುದು ಯಾವಾಗ ಎಂದು ದಿ ನೇಶನ್ ದೈನಿಕ ಕಿಡಿಕಾರಿದೆ.












Click it and Unblock the Notifications