ಭಾರತ ಮಾಡಬೇಕಿದ್ದನ್ನ ಪಾಕ್ ಮಾಡಿತು: ವಿಮಾನ ಸಂಚಾರ ರದ್ದು

ಪ್ರತೀ ಗುರುವಾರ ಕರಾಚಿ ಮತ್ತು ಮುಂಬೈ ನಡುವಿನ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ವಿಮಾನಯಾನವನ್ನು ಗುರುವಾರದಿಂದ (ಮೇ 11) ಅನ್ವಯವಾಗುವಂತೆ ರದ್ದುಗೊಳಿಸಲಾಗಿದೆ.

ಲಾಹೋರ್, ಮೇ 7(ಪಿಟಿಐ): ಮುಂಬೈ ಮತ್ತು ಕರಾಚಿ ನಡುವಿನ ವಿಮಾನ ಸಂಚಾರವನ್ನು ಪಾಕಿಸ್ತಾನ ಏರ್ಲೈನ್ಸ್ ರದ್ದುಗೊಳಿಸಿದೆ. ಆ ಮೂಲಕ, ಭಾರತ ಮಾಡಬೇಕಿದ್ದ ಕೆಲಸವನ್ನು ಪಾಕಿಸ್ತಾನ ಮಾಡಿದೆ.

ದೇಶದಲ್ಲಿನ ಉಗ್ರ ಚಟುವಟಿಕೆಗಳಿಗೆ ಪರೋಕ್ಷವಾಗಿ ಕುಮ್ಮುಕ್ಕು ನೀಡುತ್ತಿರುವ ಪಾಕಿಸ್ತಾನದ ಜೊತೆಗಿನ ಎಲ್ಲಾ ಸಂಬಂಧಗಳನ್ನು ಭಾರತ ಕಡಿದುಕೊಳ್ಳಬಹುದು ಎನ್ನುವ ಸುದ್ದಿಯ ನಡುವೆ, ಅದಕ್ಕೂ ಮೊದಲೇ ಪಾಕಿಸ್ತಾನ ನಾಗರೀಕ ವಿಮಾನಯಾನ ಸಚಿವಾಲಯ ವಿಮಾನ ಸಂಚಾರ ರದ್ದುಗೊಳಿಸುವ ನಿರ್ಧಾರಕ್ಕೆ ಬಂದಿದೆ.

 pakistan international airlines suspended mumbai karachi flight may11

ಪ್ರತೀ ಗುರುವಾರ ಕರಾಚಿ ಮತ್ತು ಮುಂಬೈ ನಡುವಿನ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ವಿಮಾನಯಾನವನ್ನು ಗುರುವಾರದಿಂದ (ಮೇ 11) ಅನ್ವಯವಾಗುವಂತೆ ರದ್ದುಗೊಳಿಸಲಾಗಿದೆ.

ಮೇ ನಾಲ್ಕರ ನಂತರ ಯಾವುದೇ ಬುಕ್ಕಿಂಗ್ ಸ್ವೀಕರಿಸಬಾರದೆಂದು ಸರಕಾರ ಏರ್ಲೈನ್ಸ್ ಸಂಸ್ಥೆಗಳಿಗೆ ಆದೇಶ ಹೊರಡಿಸಿತ್ತು ಎಂದು ಪಿಟಿಐ ವರದಿ ಮಾಡಿದೆ, ಹಾಗಾಗಿ ಮೇ 11ರಿಂದ ಆರಂಭವಾಗಿ ಎರಡು ನಗರಗಳ ನಡುವೆ ವಿಮಾನ ಸಂಚಾರವಿರುವುದಿಲ್ಲ.

ವಿಮಾನಯಾನ ರದ್ದು ಮಾಡಿರುವ ವಿಚಾರಕ್ಕೆ ಪಾಕಿಸ್ತಾನ ಏರ್ಲೈನ್ಸ್ ನಿರ್ದಿಷ್ಟ ಕಾರಣ ನೀಡದಿದ್ದರೂ, ಭಾರತ ಮತ್ತು ಪಾಕಿಸ್ತಾನದ ನಡುವೆ ಬಿಗುವಿನ ವಾತಾವರಣ ಇರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.

ಈ ಹಿಂದೆ ಕೂಡಾ ಪಾಕಿಸ್ತಾನ ಈ ಎರಡು ನಗರಗಳ ನಡುವಿನ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+