ಪಾಕಿಸ್ತಾನ: ಇಮ್ರಾನ್ ಖಾನ್, ಪತ್ನಿ ಮತ್ತು ಅವರ ಪಕ್ಷದ 80ಕ್ಕೂ ಹೆಚ್ಚು ಸದಸ್ಯರನ್ನು ನೊ ಫ್ಲೈ ಪಟ್ಟಿಗೆ ಸೇರ್ಪಡೆ
ಪಾಕಿಸ್ತಾನದ ಮಾಜಿ ಮುಖ್ಯಮಂತ್ರಿ ಇಮ್ರಾನ್ ಖಾನ್, ಅವರ ಪತ್ನಿ ಬುಶ್ರಾ ಬೀಬಿ ಮತ್ತು ಅವರ ಪಕ್ಷದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಇತರ 80 ಸದಸ್ಯರನ್ನು ನೊಫ್ಲೈ ಲಿಸ್ಟ್‌ಗೆ ಸೇರಿಸಲಾಗಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಮಿಲಿಟರಿ ಸ್ಥಾಪನೆಗಳ ಮೇಲೆ ಅವರ ಬೆಂಬಲಿಗರು ನಡೆಸಿದ ದಾಳಿಯ ನಂತರ, ಅವರ ರಾಜಕೀಯ ಪಕ್ಷದ ಮೇಲೆ ಸಂಭವನೀಯ ನಿಷೇಧದ ಊಹಾಪೋಹಗಳ ನಡುವೆ ಈ ಬೆಳವಣಿಗೆ ಕಂಡು ಬಂದಿದೆ. ಬುಧವಾರ ಇಮ್ರಾನ್ ಖಾನ್ ಪಾಕಿಸ್ತಾನದ ಜನರನ್ನು ಉದ್ದೇಶಿಸಿ ಮಾತನಾಡುತ್ತಾ, ತಮ್ಮ ಪಕ್ಷದ ಮೇಲೆ ಭಾರಿ ದಬ್ಬಾಳಿಕೆ ನಡೆಯುತ್ತಿದೆ ಎಂದು ಹೇಳಿದರು.

ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಮಂಗಳವಾರ ಮೇ ತಿಂಗಳ ಆರಮಭದಲ್ಲಿ ಬಂಧಿಸಲಾಗಿದೆ. ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಸುಮಾರು 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲ್ ಹಗರಣವಿದೆ. ಕೇಸ್ ಸಂಬಂಧ ಇಮ್ರಾನ್ ಖಾನ್ ಜೈಲು ಸೇರಿದ್ದರು. ಇದರಿಂದಾಗಿ ಇಮ್ರಾನ್ ಖಾನ್ ಹಾಗೂ ಆತನ ಪಕ್ಷದ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ.
ಇದರಿಂದಾಗಿ ಪಾಕಿಸ್ತಾನದಲ್ಲಿ ಅರಾಜಕತೆ ಆರ್ಭಟಿಸುತ್ತಿದೆ. ಈ ಕಾರಣಕ್ಕೆ ಬೇರೆ ದಾರಿ ಹಿಡಿದಿರುವ ಪಾಕಿಸ್ತಾನ ಸೇನೆ ಮತ್ತು ಅಲ್ಲಿನ ಸರ್ಕಾರ ಇಮ್ರಾನ್ ಖಾನ್ ಪಕ್ಷವನ್ನೇ ಬ್ಯಾನ್ ಮಾಡಿ, ಖಾನ್‌ನ ಮೂಲೆಗೆ ತಳ್ಳಲು ಮುಂದಾಗಿದೆಯಂತೆ.

ಹೌದು ಇಮ್ರಾನ್ ಖಾನ್ ಪಾಕಿಸ್ತಾನದ ಸೇನೆ ವಿರುದ್ಧ ಮಾತನಾಡಿದ್ದಾರೆ ಅನ್ನೋ ಆರೋಪ ಖಾನ್ ಮೇಲಿದೆ. ಆದರೆ ಇಮ್ರಾನ್ ಖಾನ್ ಬಂಧನವನ್ನು ವಿರೋಧಿಸಿ ಖಾನ್ ಬೆಂಬಲಿಗ ಪಡೆ ರೊಚ್ಚಿಗೆದ್ದು ಗಲಾಟೆ ನಡೆಸಿತ್ತು. ಅದರಲ್ಲೂ ಪಾಕಿಸ್ತಾನದ ಸೇನಾ ನೆಲೆ ಮೇಲೂ ದಾಳಿ ನಡೆಸಿತು. ಆಗ ತನ್ನ ಸೇನಾ ನೆಲೆ ರಕ್ಷಣೆ ಮಾಡಿಕೊಳ್ಳಲು ಆಗದ ಪಾಕಿಸ್ತಾನ ಸೇನೆ ಈಗ ಅದೇ ಕಾರಣ ಮುಂದಿಟ್ಟು ಇಮ್ರಾನ್ ಖಾನ್ ಪಕ್ಷ ಬ್ಯಾನ್ ಮಾಡಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಮೂಲಕ ಅಂತೂ ಖಾನ್ ಪಕ್ಷ ಪಿಟಿಐ ಬ್ಯಾನ್ ಆಗೋದು ಬಹುತೇಕ ಪಕ್ಕಾ ಆಗುತ್ತಿದೆ.
ಅಷ್ಟಕ್ಕೂ ಇಮ್ರಾನ್ ಖಾನ್ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅನ್ನ ಬ್ಯಾನ್ ಮಾಡುವುದಾಗಿ ಹೇಳಿದ್ದು ಬೇರೆ ಯಾರೋ ಅಲ್ಲ, ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್. ದೇಶದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ ಹಿನ್ನೆಲೆ ಇಮ್ರಾನ್ ಖಾನ್ ಪಕ್ಷವನ್ನ ಬ್ಯಾನ್ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ರಕ್ಷಣಾ ಸಚಿವ ಖ್ವಾಜಾ ಆಸಿಫ್ ಇಂದು ಹೇಳಿದ್ದಾರೆ. ಇದು ಪಾಕ್‌ನಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದು, ಕಂಡ ಕಂಡ ಜಾಗದಲ್ಲಿ ಇಮ್ರಾನ್ ಖಾನ್ ಬೆಂಬಲಿಗರು ಬೆಂಕಿ ಇಡುವ ಮುನ್ಸೂಚನೆ ಕೊಟ್ಟಿದೆ.
ಪಾಕಿಸ್ತಾನ ಸೇನೆ & ಪಾಕಿಸ್ತಾನ ಕೇಂದ್ರ ಸರ್ಕಾರ ಇಮ್ರಾನ್ ಮೇಲೆ ಉಗ್ರನ ಪಟ್ಟ ಕಟ್ಟುವುದು ಪಿತೂರಿ ಮಾಡುತ್ತಿದೆ ಎಂದು ಆರೋಪಿಸಲಾಗಿತ್ತು. ಇಮ್ರಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ ಒಳಗೆ ಹಾಕಿದ್ರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು. ಪಾಕ್ ಸೇನೆ, ISI ಬಗ್ಗೆ ಮಾತನಾಡಿದ ಖಾನ್‌ಗೆ ಪಾಠ ಕಲಿಸಬಹುದು ಎಂಬ ಕುತಂತ್ರದಿಂದ, ಖಾನ್ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಆದರೆ ಅಲ್ಲಿ ಇಮ್ರಾನ್ ಖಾನ್ ಲಾಕ್ ಆಗಿಲ್ಲ, ಹೀಗಾಗಿ ಪಕ್ಷವನ್ನೇ ಮುಗಿಸುವ ಹುನ್ನಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.












Click it and Unblock the Notifications