Pakistan & America: ಪಾಕಿಸ್ತಾನ ಮತ್ತೆ ಏನು ಮಾಡುತ್ತಿದೆ ನೋಡಿ!

ಇಸ್ಲಾಮಾಬಾದ್‌: ಇಷ್ಟುದಿನ ನಾನೊಂದು ತೀರ, ನೀನೊಂದು ತೀರ ಎನ್ನುತ್ತಿದ್ದ ಒಂದು ಕಾಲದ ಕುಚಿಕುಗಳು ಮತ್ತೆ ಒಂದಾಗುತ್ತಿದ್ದಾರೆ. ಉಗ್ರರನ್ನು ಪಾಕಿಸ್ತಾನ ಪೋಷಿಸುತ್ತಿರುವ ಆರೋಪಗಳ ನಡುವೆಯೇ ಪಾಕಿಸ್ತಾನದ ಜೊತೆ ದೊಡ್ಡಣ್ಣ ರಕ್ಷಣಾ ಸಂಬಂಧ ಬೆಸೆಯಲು ಮುಂದಾಗಿರುವ ಮುನ್ಸೂಚನೆ ಸಿಕ್ಕಿದೆ. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಮೆರಿಕದ ಜೊತೆ ಒಪ್ಪಂದಕ್ಕೆ ಸಹಿ ಹಾಕುವ ಪ್ರಸ್ತಾವನೆಗೆ ಪಾಕಿಸ್ತಾನ ಸಚಿವ ಸಂಪುಟ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಪಾಕಿಸ್ತಾನ ಆರ್ಥಿಕವಾಗಿ ದಿವಾಳಿ ಆಗಿದ್ರೂ ಪಾಕ್ ನಾಯಕರ ಗನ್, ಬಾಂಬ್‌ಗಳ ಮೇಲಿನ ಪ್ರೀತಿ ಮೇಲೆ ಕೊರತೆ ಉಂಟಾಗಿಲ್ಲ. ಹೀಗಾಗಿ ಸಂವಹನ & ಭದ್ರತೆಗೆ ಸಂಬಂಧಿಸಿದ ಸಿಐಎಸ್‌-ಎಂಒಎ ಒಪ್ಪಂದಕ್ಕೆ ಸಹಿ ಹಾಕಲು ಪಾಕಿಸ್ತಾನ ಸಚಿವ ಸಂಪುಟ ಅನುಮೋದಿಸಿದೆ. ಇನ್ನೂ ಈ ಕ್ರಮದಿಂದ ಪಾಕಿಸ್ತಾನ ಮತ್ತು ಅಮೆರಿಕ ನಡುವೆ ಸೇನಾ ಪರಿಕರಗಳ ಖರೀದಿಗೆ ಸಹಾಯ ಆಗಲಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹಾಗಾದರೆ ಪಾಕ್ ದಿಢೀರ್ ಇಂತಹ ನಿರ್ಧಾರ ಕೈಗೊಂಡಿದ್ದರ ಹಿಂದಿನ ಉದ್ದೇಶ ಏನು? ಬನ್ನಿ ತಿಳಿಯೋಣ.

pakistan-greenlights-security-pact-with-usa

ಅಮೆರಿಕ & ಪಾಕಿಸ್ತಾನ ಮತ್ತೆ ದೋಸ್ತಿ?

ಪಾಕಿಸ್ತಾನಕ್ಕೆ ದಿಢೀರ್ ಅಮೆರಿಕದ ಮೇಲೆ ಇಷ್ಟೊಂದು ಒಲವು ಮೂಡಲು ಕಾರಣ ಬೇರೆ ಇದೆ. ಆದ್ರೆ ಇಲ್ಲಿ ಮುಖ್ಯವಾಗಿ ಮಿಲಿಟರಿ ಒಪ್ಪಂದಗಳಿಗೆ ಒತ್ತು ನೀಡುತ್ತಿರುವ ಚರ್ಚೆಯು ಶುರುವಾಗಿದೆ. ಅಷ್ಟಕ್ಕೂ ಪಾಕಿಸ್ತಾನ ಮತ್ತು ಅಮೆರಿಕ ನಡುವೆ 2005ರಲ್ಲಿ ಒಪ್ಪಂದವಾಗಿ, ಅಮೆರಿಕ ಸೇನಾ ಪರಿಕರಗಳ ಮಾರಾಟ ಮಾಡಲು ದಾರಿ ಸುಲಭವಾಗಿತ್ತು. ಆದರೆ ಒಪ್ಪಂದ 2020ರಲ್ಲಿ ಮುಗಿದಿದ್ದ ಕಾರಣ ಇದೀಗ ಮತ್ತೆ ಒಪ್ಪಂದ ಮಾಡಿಕೊಳ್ಳಲು ಪಾಕ್ ಸರ್ಕಾರವು ಮುಂದಾಗಿದೆ. ಹೊಸ ಒಪ್ಪಂದದ ಅನುಸಾರ ಅಮೆರಿಕ ಸೇನಾ ಪರಿಕರಗಳ ಹಾರ್ಡ್‌ವೇರ್‌ನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಬಹುದು ಎನ್ನಲಾಗುತ್ತಿದೆ.

ಬಿನ್‌ ಲಾಡೆನ್‌ ಹತ್ಯೆ ನಂತರ ಕಿರಿಕ್!

ಇಷ್ಟೆಲ್ಲಾ ಬೆಳವಣಿಗೆ ನಡೆದರೂ ಪಾಕಿಸ್ತಾನ ಆಗಲಿ ಅಥವಾ ಅಮೆರಿಕ ಅಧಿಕೃತವಾಗಿ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿಲ್ಲ. ಪಾಕ್ ವಾರ್ತಾ ಸಚಿವ ಮರ್ರಿಯುಮ್‌ ಔರಂಗಜೇಬ್ ಒಪ್ಪಂದ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಮತ್ತೊಂದು ಕಡೆ ಅಮೆರಿಕ ಸೆಂಟ್ರಲ್‌ ಕಮಾಂಡ್‌ನ ಮುಖ್ಯಸ್ಥ ಜನರಲ್‌ ಮೈಖೇಲ್‌ ಎರ್ರಿಕ್‌ ಕುರಿಲ್ಲ ಮತ್ತು ಪಾಕ್ ಸೇನಾ ಮುಖ್ಯಸ್ಥ ಜನರಲ್‌ ಆಸಿಂ ಮುನೀರ್‌ ನಡುವೆ ನಡೆದಿದ್ದ ಸಭೆಯಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗಾಗಿ ಎರಡೂ ದೇಶಗಳು ಒಲವು ವ್ಯಕ್ತಪಡಿಸಿದ್ದವು. ಇನ್ನು ಅಲ್‌ಖೈದಾ ನಾಯಕ ಒಸಾಮಾ ಬಿನ್‌ ಲಾಡೆನ್‌ ಹತ್ಯೆ ನಂತರ ಈ ಎರಡೂ ರಾಷ್ಟ್ರಗಳ ನಡುವೆ ಕಿರಿಕ್ ಶುರುವಾಗಿತ್ತು. ಪಾಕಿಸ್ತಾನ ನೆಲಕ್ಕೆ ನುಗ್ಗಿದ್ದ ಅಮೆರಿಕ ಒಸಾಮಾ ಬಿನ್‌ ಲಾಡೆನ್‌ ಹತ್ಯೆ ಮಾಡಿತ್ತು.

pakistan-greenlights-security-pact-with-usa

ಅನ್ನ ಇಲ್ಲದಿದ್ದರೂ ಶಸ್ತ್ರಾಸ್ತ್ರ ಬೇಕಾ?

ಕೈಗೆ ಸಿಗದ ಹಣದುಬ್ಬರ & ಜೊತೆಯಲ್ಲೇ ಹಣಕಾಸಿನ ಅಸಮತೋಲನ. ಇದೆಲ್ಲವೂ ಸಾಲದು ಎಂಬಂತೆ ಮೈತುಂಬಾ ಸಾಲ ಮಾಡಿಕೊಂಡಿರುವ ಪಾಕಿಸ್ತಾನ ನರಳುತ್ತಿದೆ. ಈಗಾಗಲೇ ಹಲವು ಸರ್ಕಾರಿ ಆಸ್ತಿಗಳನ್ನ ಕೂಡ ಪಾಕಿಸ್ತಾನ ಮಾರಾಟ ಮಾಡಿದೆ. ತುರ್ತು ನಿಧಿ ಸಂಗ್ರಹಿಸಲು ಹೊಸ ಕಾನೂನು ಜಾರಿ ತಂದಿರುವ ಪಾಕ್ ರಾಜಕಾರಣಿಗಳು ದೇಶವನ್ನ ಮಾರುತ್ತಿದ್ದಾರೆಂಬ ಆರೋಪ ಇದೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಚೀನಾ ನೆರವಿನ ಹಸ್ತ ಚಾಚುತ್ತಿದೆ. ಆದರೂ ಸ್ಥಿತಿ ಸರಿ ಹೋಗುತ್ತಿಲ್ಲ, ಇಷ್ಟೆಲ್ಲಾ ಸಮಸ್ಯೆ ಇದ್ದರೂ ಪಾಕಿಸ್ತಾನ ಮಾತ್ರ ತನ್ನ ಯುದ್ಧದಾಹ ಬಿಡುತ್ತಿಲ್ಲ. ಸಾಲ ಮಾಡಿ ಶಸ್ತ್ರಾಸ್ತ್ರವನ್ನ ಖರೀದಿಸುತ್ತಾ ಭಾರತದ ವಿರುದ್ಧ ವಿಷ ಕಾರುತ್ತಿರುವ ಆರೋಪ ಕೇಳಿಬಂದಿದೆ.

ಒಟ್ಟಾರೆ ಪಾಕಿಸ್ತಾನಕ್ಕೆ ಬುದ್ಧಿ ಬರೋದಿಲ್ಲ ಅನ್ನೋ ಮಾತು ಮತ್ತೆ ಮತ್ತೆ ಸಾಬೀತಾಗುತ್ತಿದೆ ಅಂತಿದ್ದಾರೆ ಜನ. ನೆರೆ ದೇಶ ಭಾರತದ ಜೊತೆ ಹೊಂದಾಣಿಕೆ ಬಿಟ್ಟು ಶಸ್ತ್ರಾಸ್ತ್ರದ ಖರೀದಿಗೆ ಮುಂದಾಗುತ್ತಿರುವ ಬಗ್ಗೆ ಹಲವು ಟೀಕೆ ಕೂಡ ವ್ಯಕ್ತವಾಗಿವೆ. ಆದ್ರೆ ಇದರ ಬಗ್ಗೆ ಪಾಕಿಸ್ತಾನ ಸರ್ಕಾರ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಾಗಿ ಮುಂದೆ ಏನೆಲ್ಲಾ ನಡೆಯತ್ತೆ..? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+