Russia & Pakistan: ರಷ್ಯಾ VS ಉಕ್ರೇನ್ ಯುದ್ಧದಲ್ಲಿ ಪಾಕಿಸ್ತಾನ ಕೈವಾಡ?
ಪಾಕಿಸ್ತಾನ ಸ್ಥಿತಿ ಹೇಗಾಗಿದೆ ಅಂದ್ರೆ ಕೈಗೆ ಸ್ವಲ್ಪ ಕಾಸು ಕೊಟ್ಟರೆ ಸಾಕು ಏನು ಬೇಕಾದರೂ ಮಾಡಲು ಸಿದ್ಧ ಎಂಬುದನ್ನ ಪರೋಕ್ಷವಾಗಿ ತಿಳಿಸುತ್ತಿದೆ. ಅದರಲ್ಲೂ ಪಾಕಿಸ್ತಾನ ಆರ್ಥಿಕ ಮತ್ತು ಸಾಮಾಜಿಕವಾಗಿ ಬೀದಿಗೆ ಬಿದ್ದಂತಾಗಿದೆ. ತಿನ್ನಲು ಅನ್ನವೂ ಇಲ್ಲದೆ ಪಾಕ್ ಜನರು ನರಳುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಉಕ್ರೇನ್ ಯುದ್ಧದಲ್ಲಿ ಎಂಜಲು ಕಾಸಿಗಾಗಿ ಪಾಕ್‌ನ ರಾಜಕಾರಣಿಗಳು ರಷ್ಯಾ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರಷ್ಯಾ ವಿರುದ್ಧ ಅಮೆರಿಕ ಮತ್ತು ನ್ಯಾಟೋ ದೇಶಗಳು ಒಗ್ಗೂಡಿವೆ. ಈ ಮೂಲಕ ಉಕ್ರೇನ್ ಪರ ನಿಲ್ಲಿ ಎಂಬ ಸಂದೇಶ ಕಳುಹಿಸುತ್ತಿದೆ ಅಮೆರಿಕ. ಆದ್ರೆ ಪಾಕ್ ಮಾತ್ರ ಯಾರ ಪರವೂ ನಿಂತಿಲ್ಲ ಎಂಬಂತೆ ನಾಟಕ ಮಾಡುತ್ತಿದೆ. ಹೀಗಿದ್ದಾಗ ಪಾಕಿಸ್ತಾನ ವಿರುದ್ಧ ಈಗ ಗಂಭೀರ ಆರೋಪ ಕೇಳಿಬಂದಿದ್ದು, ಅಂತಾಷ್ಟ್ರೀಯ ಹಣಕಾಸು ನಿಧಿ ಅಂದರೆ ಐಎಂಎಫ್‌ನ ನೆರವು ಪಡೆಯಲು ಉಕ್ರೇನ್‌ಗೆ ಪಾಕ್ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡು ಮಾರಾಟ ಮಾಡಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿತ್ತು. ಇನ್ನು ಈ ಆರೋಪದ ಬಗ್ಗೆ ಪಾಕಿಸ್ತಾನ ಹೇಳಿದ್ದೇನು ಗೊತ್ತಾ? ಮುಂದೆ ಓದಿ.

6 ಕೊಟ್ಟರೆ ಅತ್ತೆ ಕಡೆ, 3 ಕೊಟ್ಟರೆ...
ಪಾಕಿಸ್ತಾನ ರಾಜಕಾರಣಿಗಳು 6 ಕೊಟ್ಟರೆ ಅತ್ತೆ ಕಡೆ, 3 ಕೊಟ್ಟರೆ ಸೊಸೆ ಕಡೆ ಎಂಬಂತಹ ಮನಸ್ಥಿತಿ ಇರುವವರು. ಹೀಗಾಗಿಯೇ ಈಗ ಪಾಕಿಸ್ತಾನ ಎಂಬ ದೊಡ್ಡ ದೇಶವನ್ನೇ ಬೀದಿಗೆ ಬೀಳುವಂತೆ ಮಾಡಿದ್ದಾರೆ. ಈ ರೀತಿ ಮೈತುಂಬಾ ಸಾಲ ಮಾಡಿಕೊಂಡು ಒದ್ದಾಡುತ್ತಿರುವ ಪಾಕಿಸ್ತಾನಕ್ಕೆ ಐಎಂಎಫ್ ಸಹಾಯ ಬೇಕಾಗಿತ್ತು. ಆದರೆ ಸಹಾಯ ಸಿಕ್ಕಿರಲಿಲ್ಲ, ಈ ವೇಳೆ ಐಎಂಎಫ್ ಸಹಾಯ ಪಡೆಯಲು ಪಾಕಿಸ್ತಾನ ಮಾಡಬಾರದ ಕೆಲಸ ಮಾಡಿದೆ ಎಂಬ ಬಗ್ಗೆ ತನಿಖಾ ವೆಬ್‌ಸೈಟ್ ಒಂದು ವರದಿ ಮಾಡಿತ್ತು. ಆ ಬಗ್ಗೆ ಪಾಕಿಸ್ತಾನ ಈಗ ಕೆಂಡವಾಗಿದೆ.
ಡಬಲ್ ಗೇಮ್ ಆಡಿದೆಯಾ ಪಾಕ್?
ಪಾಕಿಸ್ತಾನ ಗುಟ್ಟಾಗಿ ಅಮೆರಿಕಗೆ ಶಸ್ತ್ರಾಸ್ತ್ರ ಮಾರಾಟ ಮಾಡಿದ್ದರಿಂದ ವರ್ಷದ ಆರಂಭದಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ, ಹಣಕಾಸು ನೆರವು ಪಡೆಯಲು ಸಾಧ್ಯವಾಯಿತು ಎಂದು ಆರೋಪ ಮಾಡಲಾಗಿತ್ತು. ಉಕ್ರೇನ್ ಸೇನೆಗೆ ನೆರವಾಗಲು ಅಮೆರಿಕಗೆ ಪಾಕ್ ಈ ರೀತಿ ಶಸ್ತ್ರಾಸ್ತ್ರ ಮಾರಾಟ ಮಾಡಿತ್ತು ಎಂದು ತನಿಖಾ ವೆಬ್‌ಸೈಟ್ ವರದಿ ಹೇಳಿತ್ತು. ಈ ವರದಿಯ ವಿಚಾರ ಸಂಚಲನ ಸೃಷ್ಟಿ ಮಾಡಿದ ಸಂದರ್ಭದಲ್ಲೇ ಪಾಕಿಸ್ತಾನ ರಿಯಾಕ್ಷನ್ ಕೊಟ್ಟಿದ್ದು, ಇದು ಕಟ್ಟುಕಥೆ ಎಂದಿದೆ.
ಈ ಆರೋಪ ಕೇಳಿಬಂದ ತಕ್ಷಣ ಪಾಕಿಸ್ತಾನ ವಿರುದ್ಧ ರಷ್ಯಾ ರೊಚ್ಚಿಗೇಳುವ ಸಾಧ್ಯತೆಯೂ ಗೋಚರಿಸಿತ್ತು. ಆದರೆ ಇದನ್ನೆಲ್ಲಾ ಅರಿತು ಪಾಕಿಸ್ತಾನ ಅಲರ್ಟ್ ಆಗಿರುವಂತೆ ಕಾಣುತ್ತಿದೆ. ಈಗ ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಝಹ್ರಾ ಬಲೋಚ್ ಈ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಐಎಂಎಫ್ ಕಡೆಯಿಂದ ಸುಮಾರು 25 ಸಾವಿರ ಕೋಟಿ ರೂ. ಅಂದ್ರೆ 3 ಬಿಲಿಯನ್ ಅಮೆರಿಕನ್ ಡಾಲರ್ ನೆರವು ಪಡೆಯಲು ಉಕ್ರೇನ್ ಸೇನೆಗೆ ಸಹಾಯ ಮಾಡಿದ್ದೆವು ಅನ್ನೋದು ಸುಳ್ಳು ಎಂದಿದ್ದಾರೆ. ಹಾಗೇ ವೆಬ್‌ಸೈಟ್ ವರದಿಯು ಆಧಾರರಹಿತ ಮತ್ತು ಕಟ್ಟುಕಥೆ ಎಂದು ಇದೀಗ ಗರಂ ಆಗಿ ರಿಯಾಕ್ಷನ್ ಕೊಟ್ಟಿದ್ದಾರೆ.












Click it and Unblock the Notifications