ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಚುನಾವಣೆಗೂ ಪಾಕ್ ಚುನಾವಣೆಗೂ ಇರುವ ವ್ಯತ್ಯಾಸ ಚಿತ್ರಗಳಲ್ಲಿ ನೋಡಿ

By Manjunatha
|
Google Oneindia Kannada News

ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ ನಿನ್ನೆಯಷ್ಟೆ ಮುಗಿದಿದ್ದು, ತಾಂತ್ರಿಕ ಕಾರಣಗಳಿಂದ ಫಲಿತಾಂಶ ತಡವಾಗಿದ್ದು ಅಧಿಕೃತ ಫಲಿತಾಂಶ ಇನ್ನೂ ಹೊರಬಂದಿಲ್ಲ ಆದರೆ ಇಮ್ರಾನ್ ಖಾನ್ ನಾಯಕತ್ವದ ಪಿಟಿಐ ಪಕ್ಷ ಮುನ್ನಡೆ ಸಾಧಿಸಿದ್ದು,ಅವರೇ ಮುಂದಿನ ಪ್ರಧಾನಿ ಎನ್ನಲಾಗುತ್ತಿದೆ.

ಪ್ರಜಾಪ್ರಭುತ್ವ ದೇಶ ಎಂದು ತನ್ನನ್ನು ತಾನು ಕರೆದುಕೊಳ್ಳುವ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವದ ಉಲ್ಲಂಘನೆ ಸರ್ವೆ ಸಾಮಾನ್ಯ ಆದರೂ ಈ ಬಾರಿಯ ಚುನಾವಣೆ ಕಳೆದ ಚುನಾವಣೆಗಳಿಗಿಂತಲೂ 'ಉತ್ತಮ'ವಾಗಿ ನಡೆಯಿತು ಎನ್ನಲಾಗುತ್ತಿದೆ.

ಕ್ರಿಕೆಟ್, ರಾಜಕೀಯ, ವಿವಾಹ ವಿಚ್ಛೇದನ : ವಿಕ್ಷಿಪ್ತವ್ಯಕ್ತಿ ಇಮ್ರಾನ್ ಖಾನ್ ಕ್ರಿಕೆಟ್, ರಾಜಕೀಯ, ವಿವಾಹ ವಿಚ್ಛೇದನ : ವಿಕ್ಷಿಪ್ತವ್ಯಕ್ತಿ ಇಮ್ರಾನ್ ಖಾನ್

ಪಾಕ್ ಚುನಾವಣೆಯ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆ ಚಿತ್ರಗಳನ್ನು ನೋಡಿದರೆ ತಿಳಿಯುತ್ತದೆ ಭಾರತದ ಚುನಾವಣೆಗಳಿಗೂ ಪಾಕ್ ಚುನಾವಣೆಗೂ ಎಲ್ಲಿಂದೆಲ್ಲಿಯ ವ್ಯತ್ಯಾಸವೆಂದು.

ಇವರು ಓಟ್ ಎಣಿಸುತ್ತಿದ್ದಾರೆ, ಜೂಜಾಡತ್ತಿಲ್ಲ

ಇವರು ಓಟ್ ಎಣಿಸುತ್ತಿದ್ದಾರೆ, ಜೂಜಾಡತ್ತಿಲ್ಲ

ಇದು ಪಾಕಿಸ್ತಾನದಲ್ಲಿ ಮತ ಎಣಿಕೆ ಕಾರ್ಯ ನಡೆಯುವ ರೀತಿ. ಎಲ್ಲಿ ಮತದಾನ ನಡೆದಿರುತ್ತದೆಯೋ ಅಲ್ಲೆ ಮತ ಎಣಿಕೆಯೂ ನಡೆಯುತ್ತದೆ. ಹೀಗೆ ಗುಡ್ಡೆ ಹಾಕಿಕೊಂಡು ಹುಂಡಿ ಹಣ ಎಣಿಸಿದಂತೆ ಮತ ಎಣಿಸುತ್ತಾರೆ. ನಮ್ಮ ಫುಂಡ ಹುಡುಗರು ಬಯಲಲ್ಲಿ ಕಾರ್ಡ್ಸ್ ಆಡುವಾಗಿನ ಚಿತ್ರ ಸ್ವಲ್ಪ ಹೀಗೇ ಕಾಣುತ್ತದೆ ಅಲ್ಲವೆ.

ಇಮ್ರಾನ್ ಖಾನ್ ಪಾಕ್ ಪ್ರಧಾನಿ? ಜನ್ಮ ಜಾಲಾಡಿದ ಮಾಜಿ ಪತ್ನಿ!ಇಮ್ರಾನ್ ಖಾನ್ ಪಾಕ್ ಪ್ರಧಾನಿ? ಜನ್ಮ ಜಾಲಾಡಿದ ಮಾಜಿ ಪತ್ನಿ!

ಮತ ಹಾಕಲು ಹೆಬ್ಬೆಟ್ಟು ಒತ್ತಬೇಕು

ಮತ ಹಾಕಲು ಹೆಬ್ಬೆಟ್ಟು ಒತ್ತಬೇಕು

ಭಾರತದಲ್ಲಿ ಹೆಬ್ಬೆಟ್ಟನ್ನು ಡಿಜಿಟಲ್ ಕಾರ್ಯಗಳಿಗೆ ಬಳಸುತ್ತಿರುವ ಈ ಸಮಯದಲ್ಲಿ ಪಾಕಿಸ್ತಾನದಲ್ಲಿ ಮತ ಹಾಕಲು ಹೆಬ್ಬೆಟ್ಟು ಒತ್ತುತ್ತಿದ್ದಾರೆ. ಮತ ಹಾಕುವ ಮುನ್ನಾ ಸಹಿ ಹಾಕುವ ಬದಲಿಗೆ ಅಲ್ಲಿ ಹೆಬ್ಬೆಟ್ಟು ಒತ್ತಲಾಗುತ್ತದೆ. ನಮ್ಮಲ್ಲಿ ಬೆರಳ ಮೇಲೆ ಉದ್ದ ಗೆರೆಯ ಶಾಯಿ ಹಾಕಿದರೆ ಅಲ್ಲಿ ಅಡ್ಡ ಗೆರೆಯ ಶಾಹಿ ಹಾಕಲಾಗುತ್ತದೆ. ಭಾರತದ ತದ್‌ವಿರುದ್ಧವೇ ಎಲ್ಲಾ!

ಪಾಕಿಸ್ತಾನ ಅತಂತ್ರ, ಇಮ್ರಾನ್ ಖಾನ್ ಮ್ಯಾನ್ ಆಫ್ ದ ಮ್ಯಾಚ್ ಪಾಕಿಸ್ತಾನ ಅತಂತ್ರ, ಇಮ್ರಾನ್ ಖಾನ್ ಮ್ಯಾನ್ ಆಫ್ ದ ಮ್ಯಾಚ್

ಬುರ್ಖಾ ಹಾಕಿ ಮತದಾನ!

ಬುರ್ಖಾ ಹಾಕಿ ಮತದಾನ!

ಬುರ್ಖಾ ಹಾಕಿಕೊಂಡೇ ಮತದಾನ ಮಾಡುವ ಅವಕಾಶ ಪಾಕಿಸ್ತಾನದಲ್ಲಿ ಇದೆ. ಯಾರದ್ದೋ ಗುರುತಿನ ಚೀಟಿ ಇಟ್ಟುಕೊಂಡು ಮತ್ಯಾರೋ ಮತ ಹಾಕಿದರೆ ಏನು ಗತಿ?

ಭಯೋತ್ಪಾದಕರು ಮತ ಚಲಾಯಿಸುತ್ತಾರೆ

ಭಯೋತ್ಪಾದಕರು ಮತ ಚಲಾಯಿಸುತ್ತಾರೆ

ಅಂತರರಾಷ್ಟ್ರೀಯ ಮಟ್ಟದ ಭಯೋತ್ಪಾದ ಎಂದು ಹೆಸರಾಗಿರುವ ಅಫ್ಜಲ್ ಸಯೀದ್ ಸಕಲ ಮರ್ಯಾದೆಯೊಂದಿಗೆ ಮತಗಟ್ಟೆಗೆ ತೆರಳಿ ಮತ ಹಾಕಿ ಬರುತ್ತಾನೆ. ಇದು ಪಾಕ್‌ ಪರಿಸ್ಥಿತಿ.

ಪೋಲಿಂಗ್ ಸದಸ್ಯರನ್ನು ಮಿಲ್ಟ್ರಿ ಹೊರಹಾಕುತ್ತದೆ

ಪರ್ವೇಜ್ ಮುಷರಫ್ ಅವರ ಪಕ್ಷದ ಪೋಲಿಂಗ್ ಸದಸ್ಯರನ್ನು ಕೆಲವು ಮತ ಎಣಿಕೆ ಕೇಂದ್ರಗಳಿಂದ ಮಿಲಿಟರಿ ಅಧಿಕಾರಿಗಳು ಹೊರದಬ್ಬಿದ್ದಾರಂತೆ. ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಮುಷರಪ್ ಪಕ್ಷ ಈಗಾಗಲೇ ಈ ಫಲಿತಾಂಶವನ್ನು ತಿರಸ್ಕರಿಸಿದೆ.

ತಲಾಖ್ ಭಯದಿಂದ ಮತ ಹಾಕದ ಮಹಿಳೆಯರು

ಮಧ್ಯೆ ಪಾಕಿಸ್ತಾನದ ಹಳ್ಳಿಗಳಲ್ಲಿ 3200 ಮಹಿಳೆಯರಲ್ಲಿ ಒಬ್ಬರೂ ಕೂಡ ಮತ ಹಾಕಿಲ್ಲ. 'ಮತ ಹಾಕಿದರೆ ತಮಗೆ ತಲಾಖ್ ನೀಡುವುದಾಗಿ ಗಂಡಂದಿರು ಹೆದರಿಸಿದ್ದಾರೆ ಅದಕ್ಕಾಗಿ ನಾವು ಮತ ಹಾಕುತ್ತಿಲ್ಲ' ಎಂದಿದ್ದಾರೆ ಆ ಮಹಿಳೆಯರು. ಇದು ಪಾಕಿಸ್ತಾನದಲ್ಲಲ್ಲದೆ ಇನ್ನೆಲ್ಲಿ ನಡೆಯಲು ಸಾಧ್ಯ.

ರಕ್ತಸಿಕ್ತನಾಗಿ ಕರ್ತವ್ಯ ನಿಭಾಯಿಸುತ್ತಿರುವ ಸೈನಿಕ

ರಕ್ತಸಿಕ್ತನಾಗಿ ಕರ್ತವ್ಯ ನಿಭಾಯಿಸುತ್ತಿರುವ ಸೈನಿಕ

ಈತ ಪಾಕ್ ಸೈನಿಕನೇ ಆಗಿದ್ದರೂ ಸಹ ಚಿತ್ರ ನೋಡಿ ಮರುಕ ಹುಟ್ಟದೆ ಇರದು. ಚುನಾವಣಾ ಭದ್ರತಾ ಕಾರ್ಯ ನಿರ್ವಹಿಸುತ್ತಿರುವ ಈತ ರಕ್ತ ಸಿಕ್ತನಾಗಿದ್ದಾನೆ. ಆದರೂ ಕರ್ತವ್ಯ ನಿರತನಾಗಿದ್ದಾನೆ. ಚುನಾವಣಾ ಹಿಂಸೆ ಪಾಕಿಸ್ತಾನದಲ್ಲಿ ಸಾಮಾನ್ಯ.

ಮಾನವೀಯತೆಯೂ ಇದೆ

ಮಾನವೀಯತೆಯೂ ಇದೆ

ಪಾಕ್ ಚುನಾವಣೆಯಲ್ಲಿ ಕೆಲವಾರು ಒಳ್ಳೆಯ ಚಿತ್ರಗಳೂ ಇವೆ. ಅಲ್ಲಿನ ರಾಜಕಾರಣಿಗಳು, ಮಿಲಿಟರಿ ಆ ದೇಶವನ್ನು ಹಾಳು ಮಾಡುತ್ತಿರಬಹುದು ಆದರೆ ಮನುಷ್ಯರಲ್ಲಿ ಮಾನವೀಯತೆ ಇದೆ ಎನ್ನಲು ಈ ಚಿತ್ರಗಳು ಸಾಕ್ಷಿ.

English summary
Some pictures about Pakistan election is trending in social media. These pictures show the diffrence between Indian election and Pakisthan eletions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X