ನೀನಾ ಪಾಕಿಸ್ತಾನ? ನಿನ್ನ ಪರಿಸ್ಥಿತಿ ಯಾಕ್ ಹಿಂಗಾಯ್ತು?
ಪಾಕಿಸ್ತಾನದಲ್ಲಿ ಏನೂ ಸರಿ ಇಲ್ಲ, ಅಲ್ಲಿ ಸಾಮಾನ್ಯ ಜನರ ಜೀವಕ್ಕೆ ಗ್ಯಾರಂಟಿಯೇ ಇಲ್ಲ. ಯಾವಾಗ ಯಾವ ಉಗ್ರ ಬಂದು ಬಾಂಬ್ ಹಾಕುತ್ತಾನೋ, ಎಷ್ಟು ಜನರನ್ನು ಕೊಲೆಗೈದು ಹೋಗುತ್ತಾನೋ ಗೊತ್ತಿಲ್ಲ. ಹೀಗಿದ್ದಾಗ ಪಾಪಿ ಪಾಕಿಸ್ತಾನದಲ್ಲಿ ಈಗ ಚುನಾವಣೆ ನಡೆಸಲು ತಯಾರಿ ಸಾಗಿದೆ. ಇನ್ನೇನು ಕೆಲವೇ ದಿನದಲ್ಲಿ ಅಲ್ಲಿ ಚುನಾವಣೆ ನಡೆಯಲಿದೆ. ಮುಂದಿನ ತಿಂಗಳು ಅಂದ್ರೆ ಫೆಬ್ರವರಿಯಲ್ಲಿ ಎಲೆಕ್ಷನ್ ನಡೆಸಲು ತಯಾರಿ ಸಾಗಿರುವಾಗ ಶಾಕ್ ಸಿಕ್ಕಿದೆ.
ಪಾಕಿಸ್ತಾನದ ಲೋಕಸಭೆ ಸದಸ್ಯ ಬಲ 342 ಭಾರತದ ರೀತಿ ಪಾಕಿಸ್ತಾನದಲ್ಲಿ ಕೂಡ 5 ವರ್ಷಗಳ ಅಧಿಕಾರವಧಿ ಇರುತ್ತದೆ. ಈ ಅವಧಿ 2023 ರ ಆಗಸ್ಟ್ 12ಕ್ಕೆ ಕೊನೆಯಾಗಿತ್ತು, ಆದರೆ ಅವಧಿಗೂ ಮೊದಲು ಅಂದ್ರೆ ಆಗಸ್ಟ್ 9ಕ್ಕೆ ಪಾಕಿಸ್ತಾನ ಸಂಸತ್ ವಿಸರ್ಜನೆಗೆ ಶಿಫಾರಸು ಕಳುಹಿಸಿದ್ದರು ಪಾಕ್ ಪ್ರಧಾನಿ. ಆಗಿನ ಪ್ರಧಾನಿ ಶಿಫಾರಸು ಹಿನ್ನೆಲೆ, ಪಾಕಿಸ್ತಾನ ಸಂಸತ್ ವಿಸರ್ಜನೆ ಮಾಡಲಾಗಿತ್ತು. ಇದೀಗ ಚುನಾವಣೆಗೂ ಸಕಲ ಸಿದ್ಧತೆ ನಡೆಸಲಾಗಿದ್ದು, ಆದರೆ ಇದೇ ಸಮಯದಲ್ಲಿ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಹಾಗಾದರೆ ಏನದು ಆಘಾತಕಾರಿ ಸುದ್ದಿ?

ಪಾಕಿಸ್ತಾನದಲ್ಲಿ ಯಾವಾಗ ವೋಟಿಂಗ್?
ಅಷ್ಟಕ್ಕೂ ಈಗ ಪಾಕಿಸ್ತಾನದ ಚುನಾವಣಾ ಆಯೋಗ ನಿರ್ಧಾರ ಮಾಡಿರುವಂತೆ, ಫೆಬ್ರವರಿ 8ಕ್ಕೆ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಡೀ ಪಾಕಿಸ್ತಾನ ಈಗ ಸಜ್ಜಾಗುತ್ತಿದೆ. ಅದರಲ್ಲೂ ಭಯೋತ್ಪಾದಕರ ತವರು ಎಂದು ಕರೆಯುವ, ಸೂಕ್ಷ್ಮ ಪರಿಸ್ಥಿತಿಯಲ್ಲಿ ಇರುವ ಪಾಕಿಸ್ತಾನದ ಮೂಲೆ ಮೂಲೆಯಲ್ಲೂ ಭದ್ರತೆ ಹೆಚ್ಚಿಸಿದೆ. ಪಾಕಿಸ್ತಾನದಲ್ಲಿ ಒಟ್ಟು 90,675 ಮತಗಟ್ಟೆ ಸ್ಥಾಪಿಸಲಾಗಿದೆ. ಈ ಪೈಕಿ ಒಟ್ಟು 46 ಸಾವಿರ ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಿದೆ ಅಲ್ಲಿನ ಚುನಾವಣಾ ಆಯೋಗ!
46 ಸಾವಿರ ಸೂಕ್ಷ್ಮ ಮತಗಟ್ಟೆಗಳು!
ಇಷ್ಟೇ ಅಲ್ಲ ಪಾಕಿಸ್ತಾನದ 46 ಸಾವಿರ ಸೂಕ್ಷ್ಮ ಮತಗಟ್ಟೆಗಳ ಪೈಕಿ, 18 ಸಾವಿರ ಅತಿ ಸೂಕ್ಷ್ಮ ಮತಗಟ್ಟೆಗಳು ಕೂಡ ಇವೆ ಎಂದರೆ ನೀವೆ ಲೆಕ್ಕಹಾಕಿ ಪಾಕಿಸ್ತಾನದ ಪರಿಸ್ಥಿತಿ ಹೇಗಿರಬೇಡ? ಎಂಬುದನ್ನ. ಇನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 12,580 ಸೂಕ್ಷ್ಮ ಮತಗಟ್ಟೆಗಳಿವೆ. ಇವುಗಳಲ್ಲಿ 6 ಸಾವಿರ ಮತಗಟ್ಟೆ ಅತಿ ಸೂಕ್ಷ್ಮ ಎಂದು ಪಾಕಿಸ್ತಾನದ ಚುನಾವಣಾ ಆಯೋಗ ಗುರುತಿಸಿದೆ. ಅಲ್ಲದೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಖೈಬರ್ ಪಖ್ತುಂಕ್ವಾ ಪ್ರದೇಶದಲ್ಲೂ ಈ ಪರಿಸ್ಥಿತಿ ಭಿನ್ನವಾಗಿಲ್ಲ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನದ ಚುನಾವಣಾ ಆಯೋಗ 'ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳನ್ನ ಪಟ್ಟಿ ಮಾಡಲಾಗಿದೆ. ಭದ್ರತೆಗೆ ಬೇಕಾಗಿರುವ ಸಿದ್ಧತೆ ಪರಿಶೀಲಿಸಿ ಸೂಕ್ಷ್ಮ & ಅತಿ ಸೂಕ್ಷ್ಮ ಮತಗಟ್ಟೆಗಳ ಸಂಖ್ಯೆಯನ್ನ ಬದಲಾವಣೆ ಮಾಡ್ತೀವಿ' ಎಂದಿದೆ ಅಲ್ಲಿನ, ಚುನಾವಣಾ ಆಯೋಗ. ಈ ನಡುವೆ ಪ್ರತಿ ಮತಗಟ್ಟೆಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸೋದಕ್ಕೆ ಈ ಬಾರಿ ಕ್ರಮ ಕೈಗೊಳ್ಳಲಾಗಿದೆ. ಮತ ಎಣಿಕೆ ವೇಳೆ ಕೂಡ ಪರಿಸ್ಥಿತಿ ಸೂಕ್ಷ್ಮವಾಗುವ ಎಲ್ಲಾ ಮುನ್ಸೂಚನೆ ಸಿಗುತ್ತಿದ್ದು, ಹೀಗಾಗಿ ಮತ ಎಣಿಕೆ ಕೇಂದ್ರಗಳ ಮೇಲೆ ಕೂಡ ನಿಗಾ ಇಡಲು ಚಿಂತಿಸಲಾಗಿದೆ.












Click it and Unblock the Notifications