• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ರಮ ಜೂಜಾಟ ಆರೋಪ: ಬಂಧಿಸಲ್ಪಟ್ಟ ಪಾಕಿಸ್ತಾನದ ಕತ್ತೆಗೆ ಜಾಮೀನು

|

ಇಸ್ಲಮಾಬಾದ್, ಜೂನ್ 13: ಅಕ್ರಮ ಜೂಜಾಟದ ಆರೋಪದ ಮೇಲೆ ಎಂಟು ಮಂದಿಯ ಜೊತೆಗೆ ಬಂಧನಕ್ಕೆ ಒಳಗಾಗಿದ್ದ ಕತ್ತೆಗೆ ಜಾಮೀನು ನೀಡಲಾಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹೀಂ ಯಾರ್ ಖಾನ್ ನಗರದಲ್ಲಿ ಕಳೆದ ವಾರ ಅಕ್ರಮ ಜೂಜಾಟದ ಆರೋಪದ ಮೇಲೆ ಆರೋಪಿಗಳ ಜೊತೆಗೆ ಕತ್ತೆಯನ್ನು ಪೊಲೀಸರು ಬಂಧಿಸಿದ್ದರು. ಪ್ರಾಣಿಯನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು, ನ್ಯಾಯಾಲಯದ ಆದೇಶದಂತೆ ಬಿಡುಗಡೆ ಮಾಡಲಾಗಿದೆ.

   ಏನು?ತನ್ನಷ್ಟಕ್ಕೆ ತಾನೇ ವರ್ಕೌಟ್ ಮಾಡ್ತಿರೋ ಈ ಯಂತ್ರದ ನಿಗೂಢ ರಹಸ್ಯ | Oneindia Kannada

   ಜೂಜಾಟಕ್ಕಾಗಿ ಬಂಧಿಸಲ್ಪಟ್ಟ ಎಂಟು ಜನರನ್ನು ಸಹ ಬಿಡುಗಡೆ ಮಾಡಲಾಗಿದೆ. ಆದರೆ ಕತ್ತೆಯನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಠಾಣೆಯ ಹೊರಗೆ ಕಟ್ಟಿಹಾಕಲಾಗಿತ್ತು.

   ವಿಡಿಯೋ: ಭಾರತ-ಪಾಕಿಸ್ತಾನ ಗಡಿಯಲ್ಲಿ ಮೊಳಗಿದ ಗುಂಡಿನ ಸದ್ದು!

   ಪೊಲೀಸ್ ಅಧಿಕಾರಿಗಳ ಪ್ರಕಾರ, ಕತ್ತೆ 40 ಸೆಕೆಂಡುಗಳಲ್ಲಿ 600 ಮೀಟರ್ ಓಡಿಸಬಹುದೇ ಎಂದು ಆರೋಪಿಗಳು ಪಣತೊಟ್ಟಿದ್ದಾರೆ. 'ಜೂಜಾಟ ತಡೆಗಟ್ಟುವಿಕೆ' ಸುಗ್ರೀವಾಜ್ಞೆಯ ಆಧಾರದ ಮೇಲೆ ಕತ್ತೆ ಸೇರಿದಂತೆ ಎಲ್ಲರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

   ನ್ಯಾಯಾಲಯವು ಮಧ್ಯಪ್ರವೇಶಿಸಿ ಕತ್ತೆಯನ್ನು ಅದರ ಮಾಲೀಕ ಗುಲಾಮ್ ಮುಸ್ತಫಾಗೆ ಹಿಂದಿರುಗಿಸುವಂತೆ ಪೊಲೀಸರಿಗೆ ಆದೇಶಿಸಿದೆ ಮತ್ತು ವಿಷಯ ಇತ್ಯರ್ಥವಾಗುವವರೆಗೂ ಅದನ್ನು ಸುರಕ್ಷಿತವಾಗಿಡಲು ಕೇಳಿಕೊಂಡಿದೆ.

   ಕೊರೊನಾ ಎಫೆಕ್ಟ್‌: 68 ವರ್ಷಗಳಲ್ಲಿ ಪಾಕಿಸ್ತಾನದ ಜಿಡಿಪಿ ಮೊದಲ ಬಾರಿಗೆ ಕುಸಿತ

   ಎಂಟು ಜನ ಆರೋಪಿಗಳೊಂದಿಗೆ ಎಫ್‌ಐಆರ್‌ನಲ್ಲಿ ಕತ್ತೆಯ ಹೆಸರನ್ನು ಉಲ್ಲೇಖಿಸಲಾಗಿದೆ. 1,20,000 ಪಾಕಿಸ್ತಾನ ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

   ಆದರೆ ಜೂಜಾಟ ಮಾಡುತ್ತಿದ್ದ ಅತ್ಯಂತ ಬುದ್ದಿವಂತ ಮನುಷ್ಯನ ಜೊತೆ ಕತ್ತೆಯನ್ನು ಬಂಧಿಸುವ ಪೊಲೀಸರ ನಿರ್ಧಾರವೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

   English summary
   A donkey that was arrested on the charges of illegal gambling last week in Rahim Yar Khan city in Punjab province of Pakistan was granted bail Saturday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X