ದಾವೂದ್- ಐಎಸ್ ಐನಿಂದ ಹೊಸ ಟಿವಿ ಚಾನೆಲ್

ಇಸ್ಲಮಾಬಾದ್ ಸೆ.29: ಪಾಕಿಸ್ತಾನದ ಮಾಧ್ಯಮ ಜಗತ್ತಿನಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಮಾಧ್ಯಮ ಲೋಕಕ್ಕೆ ಹೊಸ ಟಿವಿ ಚಾನೆಲ್ ಸೇರ್ಪಡೆಗೊಳ್ಳುತ್ತಿದೆ. BOL ಹೆಸರಿನ ಹೊಸ ಚಾನೆಲ್ ಗೆ ಬಂಡವಾಳ ಹೂಡಿರುವುದು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಎಂಬುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಈ ವರ್ಷಾಂತ್ಯಕ್ಕೆ ಆರಂಭವಾಗಲಿರುವ ಈ ಚಾನೆಲ್ ಗೆ ಈಗಾಗಲೇ ಸಿಬ್ಬಂದಿಗಳ ನೇಮಕಾತಿ ಪ್ರತ್ಕ್ರಿಯೆ ಆರಂಭಗೊಂಡಿದೆ. ಈಗಾಗಲೇ ಹೊರಡಿಸಿರುವ ಜಾಹೀರಾತು ನೋಡಿಕೊಂಡು ಕಳಿಸಲಾಗಿರುವ ಅರ್ಜಿಗಳ ಸಂಖ್ಯೆ 40 ಸಾವಿರ ದಾಟಿದೆಯಂತೆ.

ಬಿಒಎಲ್ ನ ಮಾರ್ಕೆಟಿಂಗ್ ವ್ಯವಸ್ಥೆ ಹೇಗಿದೆ ಎಂದರೆ ಉಳಿದ ಹಳೆಯ ಚಾನೆಲ್ ಗಳ ಮಾಲೀಕರಲ್ಲಿ ನಡುಕ ಹುಟ್ಟಿಸಿದೆಯಂತೆ. ಈಗಾಗಲೇ ಅವರು (ಹಳೆ ಚಾನೆಲ್) ವೀಕ್ಷಕರ ಗಮನವನ್ನು ಸೆಳೆಯಲು ಸರ್ಕಸ್ ನಡೆಸಿದ್ದಾರಂತೆ.

Dawood, ISI 'setting up' TV channel in Pakistan

ಸಂಬಳ ಎಷ್ಟಿದೆ?: ಬಿಒಎಲ್ ನ ವಾಹಿನಿಯ ಪ್ರಮುಖ ಸಿಬ್ಬಂದಿಗೆ ಭಾರಿ ಮೊತ್ತದ ವೇತನ, ವಾಸಕ್ಕೆ ಮನೆ, ಐಷಾರಾಮಿ ಕಾರು ಜತೆಗೆ ಅಗತ್ಯಕ್ಕೆ ತಕ್ಕಷ್ಟು ಅಂಗರಕ್ಷಕರು (ಸಶಸ್ತ್ರ). ಇದರಿಂದಾಗಿ ಇತರ ಚಾನೆಲ್ ಗಳವರು ತಮ್ಮ ಸಿಬ್ಬಂದಿಗೆ ಗಣನೀಯವಾಗಿ ಸಂಬಳ ಹೆಚ್ಚಿಸುತ್ತಿದ್ದಾರೆ. ಒಳ್ಳೆಯ ಕೆಲಸಗಾರರನ್ನು ಹಿಡಿದಿಟ್ಟುಕೊಳ್ಳಲು ಶ್ರಮಿಸುತ್ತಿದ್ದಾರೆ.

ಪಾಕಿಸ್ತಾನದ ಜಿಇಒ ಟಿವಿಯಲ್ಲಿ ಅತ್ಯಂತ ಚಾಲ್ತಿಯಲ್ಲಿರುವ ಕಮ್ರಾನ್ ಖಾನ್ (ಆಜ್ ಕಮ್ರಾನ್ ಖಾನ್ ಕೆ ಸಾಥ್ ಖ್ಯಾತಿ) ಎಂಬ ಉದ್ಯೋಗಿಗೆ ಮಾಸಿಕ ವೇತನ 10 ಮಿಲಿಯನ್ ಡಾಲರ್ (6 ಮಿಲಿಯನ್ ರು) ಪ್ಯಾಕೇಜ್ ನೀಡಿ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ ಎಂಬ ಸುದ್ದಿಯಿದೆ.

ಹೂಡಿಕೆದಾರರು: ಬಿಒಎಲ್ ಇಷ್ಟೊಂದು ಸದ್ದು ಮಾಡಲು ಕಾರಣ ಅದರ ಬೆನ್ನೆಲುಬು ದಾವೂದ್ ಇಬ್ರಾಹಿಂ. ಈ ಚಾನೆಲ್ ನ ವೆಚ್ಚದ ಹೊಣೆಯನ್ನು ಮತ್ತೊಬ್ಬ ಪಾತಕಿ ಚೋಟಾ ಶಕೀಲ್ ಹೆಗಲಿಗೆ ಹಾಕಿದ್ದಾನಂತೆ ದಾವೂದ್. ಕರಾಚಿ ಮೂಲದ ಆಕ್ಸಾತ್(Axact) ಕಂಪೆನಿ ಬಿಒಎಲ್ ಗೆ ಬೆಂಬಲಿಸಲಿದೆ. ಈ ಸಾಫ್ಟ್ ವೇರ್ ಕಂಪೆನಿಯಲ್ಲಿ ಐದು ಸಾವಿರ ಉದ್ಯೋಗಿಗಳಿದ್ದಾರೆ.

ಆಕ್ಸಾತ್ ಕಂಪೆನಿ ನಡೆಸುತ್ತಿರುವುದು ಈ ಹಿಂದೆ ಬ್ರಿಟನ್ ನಲ್ಲಿ ಪತ್ರಕರ್ತನಾಗಿದ್ದು, ಅನೇಕ ತಪ್ಪುಗಳನ್ನು ಎಸಗಿರುವ ವ್ಯಕ್ತಿ. ಅಶ್ಲೀಲ ಚಿತ್ರಗಳ ಸಾಗಾಟ, ನಕಲಿ ಪದವಿ ಪ್ರಮಾಣ ಪತ್ರಗಳ ಮಾರಾಟಕ್ಕೆ ಹೆಸರಾಗಿದೆ ಈ ಕಂಪೆನಿ.

ಇಂಥ ಆಕ್ಸತ್ ಕಂಪೆನಿ ಪಾಕ್ ಭದ್ರತಾ ವ್ಯವಸ್ಥೆಗೆ ತುಂಬಾ ನಿಕಟವಾಗಿದೆ. ಅಲ್ಲದೆ ಈ ಕಂಪೆನಿ ಐಎಸ್‌ಎನ ಹಲವು ಸೈಬರ್ ಚಟುವಟಿಕೆಗಳಲ್ಲಿ ಪಾತ್ರ ವಹಿಸಿದೆ. ಪಾಕ್ ಸರ್ಕಾರದ ಹಲವು ಯೋಜನೆಗಳ ಅನುಷ್ಠಾನದಲ್ಲಿ ಆಕ್ಸಾತ್‌ನ ಪ್ರಮುಖ ಪಾತ್ರವಿದೆ ಎಂಬುದು ಕಂಪೆನಿಯ ನಿಕಟ ಮೂಲಗಳ ಹೇಳಿಕೆ.

ಉದ್ಯಮಿ ಧೇಡಿ: ದಾವೂದ್ ಗೆ ಹಣ ಒದಗಿಸುವ ಮತ್ತೊಬ್ಬ ವ್ಯಕ್ತಿ ಅಕೀಲ್ ಕರೀಂ ಧೇಡಿ. ಇವನು ಪಾಕ್ ಷೇರು ಮಾರುಕಟ್ಟೆಯ ಪ್ರಮುಖ ಉದ್ಯಮಿಯಾಗಿದ್ದು, ದುಬೈನಲ್ಲಿ ಕಚೇರಿ ಹೊಂದಿದ್ದಾನೆ. ಬಿಒಎಲ್‌ನಲ್ಲಿ ಈತನ ಪ್ರಮುಖ ಪಾತ್ರವಿದೆ. ಇವರಿಗೆ ಮಧ್ಯಸ್ಥ ಚೋಟಾ ಶಕೀಲ್.

ಇದೇ ಧೇಡಿ ಈ ಮೊದಲು ಸನ್ ಬಿಜ್-ಟಿವಿ ಚಾನೆಲ್ ನಡೆಸಿದ್ದ. ಆದರೆ ನಷ್ಟದ ಕಾರಣ ಅದನ್ನು ಇತ್ತೀಚೆಗೆ ಮುಚ್ಚಲಾಗಿತ್ತು. ಬಿಒಎಲ್ ಚಾನೆಲ್ ಆರಂಭದ ಬಳಿಕ ಶೀಘ್ರವೇ ದಾವೂದ್ ಮುದ್ರಣ ಮಾಧ್ಯಮಕ್ಕೂ ಹಸ್ತ ಚಾಚಲಿದ್ದು, ದೊಡ್ಡ ಪ್ರಮಾಣದಲ್ಲಿ ಱಇಂಗ್ಲಿಷ್ ಮತ್ತು ಉರ್ದು ದಿನ ಪತ್ರಿಕೆಗಳನ್ನು ಹೊರತರುವ ಯೋಜನೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+