World Cup: ಪಾಕಿಸ್ತಾನದಲ್ಲಿ ಕ್ರಿಕೆಟ್‌ಗೂ ಪಾಲಿಟಿಕ್ಸ್ ಎಂಟ್ರಿ?

ಪಾಕಿಸ್ತಾನದಲ್ಲಿ ಎಲ್ಲವೂ ಸರಿಯಿಲ್ಲ, ಏನೂ ಸರಿ ಹೋಗೋದಿಲ್ಲ. ಇದು ಪ್ರೂವ್ ಆಗ್ತಾನೆ ಇದೆ. ಈಗ ಪಾಕಿಸ್ತಾನದಲ್ಲಿ ಕ್ರಿಕೆಟ್‌ಗೂ ಪಾಲಿಟಿಕ್ಸ್ ಎಂಟ್ರಿ ಕೊಟ್ಟಿದ್ದು, ಇಮ್ರಾನ್ ಖಾನ್ ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಡೆದುಕೊಂಡ ರೀತಿಗೆ ಆಕ್ರೋಶ ವ್ಯಕ್ತವಾಗಿದೆ. ಇಷ್ಟು ಮಾತ್ರವಲ್ಲ ಸ್ವತಃ ಪಾಕಿಸ್ತಾನದ ಮಾಜಿ ಕ್ರಿಕೆಟರ್ಸ್ ಕೂಡ ಪಿಸಿಬಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಪಾಕ್ ಕ್ರಿಕೆಟ್ ಬೋರ್ಡ್ ಬೆಚ್ಚಿಬಿದ್ದಿದೆ.

ಅಷ್ಟಕ್ಕೂ ಇಮ್ರಾನ್ ಖಾನ್ ನೇತೃತ್ವದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ 1992ರ ವರ್ಲ್ಡ್ ಕಪ್ ಗೆದ್ದಿತ್ತು. ಹೀಗೆ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಐಸಿಸಿ ಟ್ರೋಪಿ ಗೆದ್ದ ಸಾಧನೆಗೂ ಪಾಕ್ ಪಾತ್ರವಾಗಿತ್ತು. ಈ ನಡುವೆ ಆಗಸ್ಟ್ 14ರಂದು ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಂಡ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ವಿಡಿಯೋ ಒಂದನ್ನ ರಿಲೀಸ್ ಮಾಡಿತ್ತು. ಸ್ವಾತಂತ್ರ್ಯ ದಿನಾಚರಣೆ ಸ್ಪೆಷಲ್ ವಿಡಿಯೋದಲ್ಲಿ ಪಾಕಿಸ್ತಾನ ಕ್ರಿಕೆಟ್ ಬೆಳೆದು ಬಂದಿದ್ದ ಹಾದಿಯನ್ನು ತೋರಿಸಲಾಗಿತ್ತು. ಆದ್ರೆ ಈ ವಿಡಿಯೋದಲ್ಲಿ ಇಮ್ರಾನ್ ಖಾನ್‌ಗೆ ಗೇಟ್‌ಪಾಸ್ ನೀಡಿದ್ದ ಕಾರಣ ಬೆಂಕಿ ಹೊತ್ತಿಕೊಂಡಿತ್ತು.

Pakistan cricket board changed the video after anger

ಪಾಕಿಸ್ತಾನ ಮಾಜಿ ಕ್ರಿಕೆಟಿಗರು ಗರಂ!

ಇನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ವರ್ತನೆ ಬಗ್ಗೆ ಸ್ವತಃ ಪಾಕ್‌ನ ಮಾಜಿ ಆಟಗಾರರು ಕೂಡ ಟೀಕಿಸಿದ್ದರು. ಅದರಲ್ಲೂ 1992ರ ಕ್ರಿಕೆಟ್ ವರ್ಲ್ಡ್ ಕಪ್ ವಿಜೇತ ಪಾಕಿಸ್ತಾನ ಟೀಂನ ಭಾಗವಾಗಿದ್ದ ಮಾಜಿ ವೇಗದ ಬೌಲರ್ ವಾಸಿಂ ಅಕ್ರಂ ರೊಚ್ಚಿಗೆದ್ದು ಟ್ವೀಟ್ ಮಾಡಿದ್ದರು. ಈ ಒತ್ತಡಕ್ಕೆ ಮಣಿದ ಪಿಸಿಬಿ ಹಳೇ ವಿಡಿಯೋ ಡಿಲೀಟ್ ಮಾಡಿ ಇದೀಗ ಹೊಸ ವಿಡಿಯೋ ರಿಲೀಸ್ ಮಾಡಿದೆ. ಅದರಲ್ಲಿ ಇಮ್ರಾನ್ ಖಾನ್‌ಗೆ ಸ್ಥಾನ ಕಲ್ಪಿಸಿದ್ದು, ತನ್ನ ಎಡವಟ್ಟಿಗಾಗಿ ಪ್ರಾಯಶ್ಚಿತ ಪಟ್ಟಿದೆ. ಆದರೆ ಪಿಸಿಬಿ ಮಾಡಿದ ಎಡವಟ್ಟಿನ ಕುರಿತು ಹಾಗೂ ಕ್ರಿಕೆಟ್‌ಗೂ ಪಾಲಿಟಿಕ್ಸ್ ಎಳೆದು ತಂದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಪಾಕ್ ಮಾಜಿ ಪ್ರಧಾನಿ ಪರದಾಟ

ಇಮ್ರಾನ್ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಪಾಕ್ ಚುನಾವಣೆ ಆಯೋಗವು ಕಳೆದ ವರ್ಷ ಕೇಸ್ ದಾಖಲಿಸಿತ್ತು. ಉಡುಗೊರೆ ಮಾರಾಟದಿಂದ 14 ಕೋಟಿ ರೂಪಾಯಿ ಹಣಗಳಿಸಿದ್ದ ಆರೋಪ ಕೇಳಿಬಂದಿತ್ತು. ಪ್ರಕರಣದಲ್ಲಿ ಇಸ್ಲಾಮಾಬಾದ್‌ ಜಿಲ್ಲಾ & ಸೆಷನ್ಸ್ ಕೋರ್ಟ್ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ಗೆ 3 ವರ್ಷ ಜೈಲು ಸೇರಿ 1 ಲಕ್ಷದ ದಂಡ ವಿಧಿಸಿದೆ. ಹೀಗಾಗಿ ಜೈಲಿನಲ್ಲಿರುವ ಇಮ್ರಾನ್ ಖಾನ್ ತಮ್ಮ ವಿರುದ್ಧ ಕೆಳ ಹಂತದ ಕೋರ್ಟ್ ನೀಡಿರುವ ಆದೇಶ ರದ್ದು ಮಾಡಲು ಕೋರಿ, ಇಸ್ಲಾಮಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಇಮ್ರಾನ್‌ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನ ಇಸ್ಲಾಮಾಬಾದ್‌ ಹೈಕೋರ್ಟ್‌ ಆಗಸ್ಟ್‌ 22ರಂದು ನಡೆಸಲಿದೆ.

Pakistan cricket board changed the video after anger

ಜೈಲಿನಲ್ಲೂ ಮಾಜಿ ಪ್ರಧಾನಿಗೆ ಅವಮಾನ?

ಇಮ್ರಾನ್‌ಗೆ ಹಗಲಲ್ಲಿ ನೊಣ, ರಾತ್ರಿ ಸೊಳ್ಳೆ, ಹುಳಗಳ ಕಾಟ ಇರುವ ಜೈಲಿನ ಕೋಣೆಯಲ್ಲಿ ಟಾರ್ಚರ್ ಕೊಡುತ್ತಿರುವ ಆರೋಪ ಕೇಳಿಬಂದಿತ್ತು. ಸ್ವತಃ ಇಮ್ರಾನ್ ಖಾನ್ ಪರ ವಕೀಲರು ಈ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಕೊನೆಗೂ ಈ ವಿಚಾರ ಇಸ್ಲಾಮಾಬಾದ್ ಹೈಕೋರ್ಟ್ ಮೆಟ್ಟಿಲು ಏರಿತ್ತು. ಆಗಸ್ಟ್ 12ರಂದು ತೀರ್ಪು ನೀಡಿದ್ದ ಪಾಕಿಸ್ತಾನದ ಕೋರ್ಟ್, ಇಮ್ರಾನ್‌ಗೆ ಜೈಲಿನಲ್ಲಿ ಕನಿಷ್ಠ ವೈದ್ಯಕೀಯ ಸೌಲಭ್ಯವೂ ಸೇರಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರನ್ನು ಭೇಟಿ ಆಗಲು ಅವಕಾಶ ನೀಡಿ ಎಂದು ಹೇಳಿತ್ತು. ಇಮ್ರಾನ್‌ ಖಾನ್‌ಗೆ ಈಗ ಮತ್ತೊಂದು ರೀತಿ ಅವಮಾನ ಮಾಡಿದ ಆರೋಪ ಕೇಳಿಬಂದಿದೆ.

Pakistan cricket board changed the video after anger

ಈ ಮೂಲಕ ಜೈಲಿನಲ್ಲಿ ನರಳುತ್ತಿದ್ದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ನಿಟ್ಟುಸಿರು ಬಿಟ್ಟಿದ್ದರು. ಈಗ ತಮ್ಮ ವಿರುದ್ಧ ವಿಧಿಸಿರುವ 3 ವರ್ಷಗಳ ಜೈಲು ಶಿಕ್ಷೆ ರದ್ದು ಮಾಡುವ ನಿರೀಕ್ಷೆಯಲ್ಲಿದ್ದಾರೆ ಇಮ್ರಾನ್. ಹೀಗಾಗಿ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ ಪಾಕ್ ಮಾಜಿ ಪ್ರಧಾನಿ. ಆದರೆ ಈ ಹೊತ್ತಲ್ಲೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಕೂಡ ಅವಮಾನ ಮಾಡಿದೆ ಎಂಬ ಆರೋಪವು ಕೇಳಿಬಂದಿದೆ. ಹೀಗಾಗಿ ಕ್ರೀಡೆಗೆ ರಾಜಕೀಯ ತರಬೇಡಿ ಎಂಬ ಮಾತು ಕೇಳಿಬಂದಿದೆ. ಆದ್ರೆ ಇದು ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+