ಬೀದಿಗೆ ಬಿದ್ದ ಪಾಕಿಸ್ತಾನ: ₹7500 ಕೋಟಿ ಭಿಕ್ಷೆ ಹಾಕಿದ ಚೀನಾ!

ಇಸ್ಲಾಮಾಬಾದ್: ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಬೀದಿಗೆ ಬಿದ್ದಂತಾಗಿದೆ. ಅಲ್ಲಿ ಅನ್ನಕ್ಕೂ ಪರದಾಡುವ ಸ್ಥಿತಿ ಇದೆ. ಗೋದಿ ಹಿಟ್ಟಿಗೂ ಜನರು ಜಗಳ ಆಡಿದ್ದನ್ನ ನೋಡಿದ್ದೇವೆ. ಈಗ ಪರಿಸ್ಥಿತಿ ಇನ್ನಷ್ಟು ಭೀಕರವಾಗಿದೆ, ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಚೀನಾ 7500 ಕೋಟಿ ರೂಪಾಯಿ ಭಿಕ್ಷೆ ಹಾಕಿದೆ. ಐಎಂಎಫ್‌ ಬಳಿ ಬೇಡುತ್ತಾ ಸೊರಗಿದ್ದ ಪಾಕ್‌ಗೆ ಅಂತೂ ಜೀವ ಸಿಕ್ಕಂತಾಗಿದೆ.

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕ್‌ಗೆ ಮತ್ತೆ ಚೀನಾ ನೆರವಿನ ಹಸ್ತ ಚಾಚಿದ್ದು, ನಗದು ಕೊರತೆ ನಿವಾರಿಸಲು ಚೀನಾದಿಂದ 1 ಬಿಲಿಯನ್ ಡಾಲರ್‌ ಹಣ ಸಾಲ ಸಿಕ್ಕಿದೆ. ಈ ವಿಚಾರ ಸ್ವತಃ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಮೂಲಕ ಕನ್ಫರ್ಮ್ ಆಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ನಿರೀಕ್ಷಿಸುತ್ತಲೇ ಇರುವ ಪಾಕಿಸ್ತಾನಕ್ಕೆ ಈಗ ಚೀನಾ ಸಹಾಯವು ಭರವಸೆ ನೀಡಿದೆ. ಈ ಬಗ್ಗೆ ಮಾತನಾಡಿರುವ ಹಣಕಾಸು ಸಚಿವ ಇಶಾಕ್ ದಾರ್, ಇತ್ತೀಚೆಗೆ ಚೀನಾಕ್ಕೆ ಮರುಪಾವತಿಸಿರುವ 1.30 ಬಿಲಿಯನ್‌ ಡಾಲರ್‌ ಹಣವನ್ನು ಚೀನಾದಿಂದ ಮರಳಿ ಪಡೆಯಲಾಗುತ್ತದೆ ಎಂದಿದ್ದಾರೆ.

Pakistan central bank

ಸಾಲದ ಜೊತೆಗೆ ಇನ್ನೊಂದು ಗಿಫ್ಟ್!

ಭಾರತದ ಜೊತೆ ಮುನಿಸಿಕೊಂಡಿರುವ ಚೀನಾಗೆ ಈಗ ಪಾಕಿಸ್ತಾನವೇ ಅಚ್ಚುಮೆಚ್ಚು. ಹೀಗೆ ಪಾಕ್ ಜೊತೆ ಸ್ನೇಹ ಸಂಬಂಧ ಕಾಪಾಡಿಕೊಳ್ಳಲು ಚೀನಾ ಏನು ಬೇಕಾದರೂ ಮಾಡುತ್ತೆ. ಇದೇ ಕಾರಣಕ್ಕೆ ₹7500 ಕೋಟಿಯ ಸಾಲದ ಜೊತೆಗೆ ಮತ್ತೊಂದು ಆಫರ್ ಕೂಡ ಕಾದಿದೆ. ಬೀಜಿಂಗ್‌ ಜೊತೆ ಸಾಲದ ಜೊತೆಗೆ 2 ಬಿಲಿಯನ್‌ ಡಾಲರ್‌ ವಿನಿಮಯಕ್ಕಾಗಿಯೂ ಮಾತುಕತೆ ನಡೆಯುತ್ತಿದೆ ಎಂದು ಪಾಕಿಸ್ತಾನ ತಿಳಿಸಿದೆ. ಈ ಮೂಲಕ ಪಾಕಿಸ್ತಾನ ತನಗೆ ಏನು ಬೇಕೋ ಅದನ್ನೆಲ್ಲಾ, ಚೀನಾ ಮೂಲಕ ಪಡೆಯಲು ಪ್ರಯತ್ನಿಸುತ್ತಿದೆ. ಆದರೆ ಚೀನಾ ಲಾಭ ಇಲ್ದೆ ಯಾವುದೇ ಕೆಲಸ ಮಾಡೋದಿಲ್ಲ ಅಂತಾ ಡ್ರ್ಯಾಗನ್ ವಿರೋಧಿಗಳು ಆರೋಪಿಸುತ್ತಿದ್ದಾರೆ.

ಜೀವ ಹೋಗುವಾಗ ಜೀವ ಬಂತು!

ಅಂದಹಾಗೆ ಹಣಕಾಸಿನ ಕೊರತೆ, ಐಎಂಎಫ್‌ ಜೊತೆ ಒಪ್ಪಂದ ವಿಳಂಬದ ಪರಿಣಾಮವಾಗಿ ಪಾಕಿಸ್ತಾನ ಆರ್ಥಿಕತೆ ಸಂಕಷ್ಟ ಎದುರಿಸಿದೆ. ಸುಸ್ತಿಯಾಗುವ ಅಪಾಯದಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನಕ್ಕೆ ಐಎಂಎಫ್‌ ಬಿಡುಗಡೆ ಮಾಡುವ ಸಾಲ ನಿರ್ಣಾಯಕ. ಹೀಗಾಗಿ ಪರದಾಡುತ್ತಿದ್ದ ಪಾಕ್ ಸರ್ಕಾರಕ್ಕೆ ಇದೀಗ ಚೀನಾ ರಿಲೀಫ್ ಕೊಟ್ಟಿದೆ. ಚೀನಾ ಕೊಟ್ಟಿರುವ ₹7500 ಕೋಟಿ ಸಾಲ ದೊಡ್ಡ ಸಹಾಯ ಮಾಡಲಿದೆ. ಈ ನಡುವೆ ಅರಾಜಕತೆಯ ತಲ್ಲಣದಲ್ಲೇ ಬೆಚ್ಚಿಬಿದ್ದ ಪಾಕಿಸ್ತಾನಕ್ಕೆ ಚೀನಾ ಹೊಸ ಭರವಸೆ ನೀಡಿದೆ.

Pakistan central bank

ಪಾಕಿಸ್ತಾನ ತಿಂಗಳ ಆಮದು ಸರಿದೂಗಿಸಲು ಬೇಕಾದಷ್ಟು ವಿದೇಶಿ ವಿನಿಮಯ ಮೀಸಲನ್ನು ಮಾತ್ರ ಹೊಂದಿದೆ. ನವೆಂಬರ್‌ನಲ್ಲಿ IMF ಬಿಡುಗಡೆ ಮಾಡಿರುವ 1.1 ಬಿಲಿಯನ್‌ ಡಾಲರ್‌ ಹಣ ಪಡೆದುಕೊಳ್ಳುವ ನಿರೀಕ್ಷೆಯನ್ನು ಪಾಕಿಸ್ತಾನ ಹೊಂದಿತ್ತು. ಆದರೆ ಹಣವನ್ನು ನೀಡುವ ಮೊದಲು ಹಲವು ಷರತ್ತುಗಳನ್ನ ಐಎಂಎಫ್‌ ವಿಧಿಸಿದ್ದು ರೂಲ್ಸ್ ಫಾಲೋ ಮಾಡುವಲ್ಲಿಯೇ ಪಾಕ್‌ ಹೈರಾಣಾಗಿದೆ. ಇಂತಹ ಸಂದರ್ಭದಲ್ಲಿ ಚೀನಾ ಬೆಂಬಲಕ್ಕೆ ಬಂದಿದೆ. ಒಟ್ನಲ್ಲಿ ಕಷ್ಟದ ಸಮಯದಲ್ಲಿ ಮತ್ತೊಮ್ಮೆ ಚೀನಾ ಕೈಹಿಡಿದೆ, ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಏನ್ ಕೊಡುತ್ತೋ ಗೊತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+