• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಫೀಜ್ ಸೈಯೀದ್‌ನ ಉಗ್ರ ಸಂಘಟನೆಗೆ ನಿಷೇಧ ಹೇರಿದ ಪಾಕ್

|
   ಭಾರತದ ಹೊಡೆತ ಅಂದ್ರೆ ಸುಮ್ನೆನಾ..? | Oneindia kannada

   ಇಸ್ಲಾಮಾಬಾದ್, ಮಾರ್ಚ್‌ 06: ಮುಂಬೈ ದಾಳಿಯ ರುವಾರಿ ಹಫೀಜ್ ಸೈಯೀದ್ ಗೆ ಸೇರಿದ ಉಗ್ರ ಸಂಘಟನೆ ಮೇಲೆ ಇಂದು ನಿಷೇಧ ಹೇರಿದೆ.

   ಹಫೀಜ್ ಸೈಯೀದ್‌ನ ಉಗ್ರ ಸಂಘಟನೆ ಜಮಾತ್-ಉಲ್-ದವಾ ಅನ್ನು ಎರಡು ತಿಂಗಳ ಕಾಲ ನಿಗಾದಲ್ಲಿಡಲಾಗಿತ್ತು. ಈಗ ಅಂತಿಮವಾಗಿ ಇಂದು ಸಂಘಟನೆಯನ್ನು ನಿಷೇಧಿತ ಸಂಘಟನೆಯ ಪಟ್ಟಿಗೆ ಸೇರಿಸಲಾಗಿದೆ.

   ಪಾಕ್ ನಲ್ಲಿ ಮಸೂದ್ ಅಜರ್ ಸಹೋದರ ಸೇರಿ 44 ಉಗ್ರರು ವಶಕ್ಕೆ

   ಜಮಾತ್-ಉಲ್-ದವಾ ಜೊತೆಗೆ ಮತ್ತೊಂದು ಉಗ್ರ ಸಂಘಟನೆ ಫಲಾ-ಇ-ಇನ್ಸಾನಿಯತ್ ಫೌಂಡೇಶನ್ ಸಂಘಟನೆಯ ಮೇಲೂ ಪಾಕಿಸ್ತಾನ ಸರ್ಕಾರ ನಿಷೇಧ ಹೇರಿದೆ.

   ಪಾಕಿಸ್ತಾನವು ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಬಗ್ಗೆ ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು, ಅಷ್ಟೆ ಅಲ್ಲದೆ ಪಾಕಿಸ್ತಾನದಲ್ಲಿನ ಉಗ್ರರ ಅಡಗುತಾಣಗಳ ಮೇಲೆ ವೈಮಾನಿಕ ದಾಳಿಯನ್ನೂ ಮಾಡಿ, ಉಗ್ರ ಸಂಘಟನೆಗಳ ವಿರುದ್ಧ ಪಾಕ್ ಕ್ರಮಕೈಗೊಳ್ಳಲು ಬಾಹ್ಯ ಒತ್ತಡ ಹೇರಿತ್ತು.

   ಪಾಕಿಸ್ತಾನವನ್ನು ಹದ ಹೊಡೆದ ಭಾರತದ ಬಳಿ ಉಗ್ರರ ಹೆಣ ಕೇಳ್ತಾರಲ್ಲ!

   ಮಿತ್ರ ರಾಷ್ಟ್ರಗಳಿಂದ ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಾದ ಕಾರಣ ಪಾಕಿಸ್ತಾನವು ಈ ನಿರ್ಧಾರ ತಳೆದಿದೆ ಎನ್ನಲಾಗಿದೆ.

   English summary
   Pakistan government today bans Mumbai blast mastermind Hafiz Saeed's terror group Jammat-ud-dawa. and it also bans Falah-e-insaniyat foundation
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X