ಜಾಗತಿಕ ಮಟ್ಟದಲ್ಲಿ ಪಾಕ್ ಮರ್ಯಾದೆ ಹರಾಜು ಹಾಕಿದ ಪೋಸ್ಟರ್!
ಜಿನೇವಾ, ಫೆಬ್ರವರಿ.29: ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮರ್ಯಾದೆ ಮತ್ತೊಮ್ಮೆ ಹರಾಜು ಆಗಿದೆ. ಸ್ವಿಡ್ಜರ್ ಲ್ಯಾಂಡ್ ನ ಜಿನೇವಾ ನಗರದಲ್ಲಿ ಪಾಕ್ ನಿಜಬಣ್ಣವನ್ನು ಎತ್ತಿ ತೋರಿಸುವ ಪೋಸ್ಟರ್ ಒಂದನ್ನು ಹಾಕಲಾಗಿದೆ.
ಪಾಕಿಸ್ತಾನ ಸೇನೆಯು ಅಂತಾರಾಷ್ಟ್ರೀಯ ಭಯೋತ್ಪಾದನೆಯ ಅಧಿಕೇಂದ್ರ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ. ಒಂದು ಕಡೆ ಜಿನೇವಾ ನಗರದಲ್ಲಿ ವಿಶ್ವಸಂಸ್ಥೆ ಮಾನವಹಕ್ಕುಗಳ ಮಡಳಿಯ 43ನೇ ಅಧಿವೇಶನ ನಡೆಯುತ್ತಿದೆ.
ಪಾಕ್-ಬಾಂಗ್ಲಾ ನುಸುಳುಕೋರರ ಬಗ್ಗೆ ಮಾಹಿತಿ ನೀಡಿದರೆ 5 ಸಾವಿರ ಬಹುಮಾನ
ಮಾನವಹಕ್ಕುಗಳ ಮಂಡಳಿ ಅಧಿವೇಶನ ನಡೆಯುತ್ತಿರುವ ನಗರದಲ್ಲಿಯೇ ಇಂಥದೊಂದು ಸಂದೇಶವಿರುವ ಬ್ಯಾನರ್ ನ್ನು ಹಾಕಲಾಗಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ್ದ ಟ್ರಂಪ್:
ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಭಾರತಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ್ದರು. ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸಿ ಇಲ್ಲದಿದ್ದರೆ, ಮುಂದಿನ ಪರಿಣಾಮವನ್ನು ಅನುಭವಿಸಿ. ನಾವಂತೂ ಭಾರತದ ಜೊತೆಗಿದ್ದೇವೆ ಎಂದು ಪಾಕಿಸ್ತಾನಕ್ಕೆ ನೇರಾನೇರವಾಗಿ ಟ್ರಂಪ್ ವಾಗ್ದಾಳಿ ನಡೆಸಿದ್ದರು.












Click it and Unblock the Notifications