100ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದ ಪಾಕ್
ಬಾಂಬ್ ಸ್ಫೋಟಗಳಿಗೆ ಪ್ರತೀಕಾರ ತೀರಿಸಿಕೊಂಡಿರುವುದಾಗಿ ಹೇಳಿರುವ ಪಾಕಿಸ್ತಾನ ಸರ್ಕಾರ ನೂರಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿರುವ ಬಗ್ಗೆ ಅಲ್ಲಿನ ಸರ್ಕಾರ ಹೇಳಿಕೊಂಡಿದೆ.
ಕರಾಚಿ, ಫೆಬ್ರವರಿ 18: ಪಾಕಿಸ್ತಾನದ ದಕ್ಷಿಣ ಪ್ರಾಂತ್ಯದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಸ್ಫೋಟದಲ್ಲಿ 100ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದ್ದ ಐಸ್ಐಎಸ್ಐಎಸ್ ಉಗ್ರರ ಮೇಲೆ ಪ್ರತೀಕಾರ ತೀರಿಸಿಕೊಂಡಿರುವುದಾಗಿ ಹೇಳಿರುವ ಪಾಕಿಸ್ತಾನ ಸರ್ಕಾರ, ಕನಿಷ್ಠ 100ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿರುವುದಾಗಿ ಘೋಷಿಸಿದೆ.
ಗುರುವಾರ ರಾತ್ರಿ, ದಕ್ಷಿಣ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸೆಹ್ವಾನ್ ಪಟ್ಟಣದಲ್ಲಿರು ಸೂಫಿ ಪಂಗಡಕ್ಕೆ ಸೇರಿದ ಲಾಲ್ ಶಾಬಾಜ್ ಕಲಂದರ್ ಎಂಬ ಪ್ರಾರ್ಥನಾ ಮಂದಿರದ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ ಉಗ್ರರು 100ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದ್ದರು. ಘಟನೆಯ ಹೊಣೆಯನ್ನು ಐಎಸ್ಐಎಸ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು.[ಪಾಕಿಸ್ತಾನದಲ್ಲಿ ಮತ್ತೆ ಬಾಂಬ್ ಸ್ಫೋಟ: 100ಕ್ಕೂ ಹೆಚ್ಚು ಸಾವು]

ಇದರ ಬೆನ್ನಲ್ಲೇ ಉಗ್ರರ ಅಡಗುದಾಣಗಳ ಮೇಲೆ ವ್ಯಾಪಕ ದಾಳಿ ನಡೆಸಿದ ಪಾಕಿಸ್ತಾನ ಸೇನೆ 100ಕ್ಕೂ ಹೆಚ್ಚು ಉಗ್ರರನ್ನು ಬಲಿಪಡೆದಿದೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ. ಆದರೆ, ನಿರ್ದಿಷ್ಟವಾಗಿ ಯಾವ ಪ್ರಾಂತ್ಯದಲ್ಲಿ ಉಗ್ರರ ಬೇಟೆಯಾಡಲಾಗಿದೆ ಎಂಬುದನ್ನು ಪ್ರಕಟಣೆಯಲ್ಲಿ ಪಾಕಿಸ್ತಾನ ಸರ್ಕಾರ ತಿಳಿಸಿಲ್ಲ.[ಪಾಕಿಸ್ತಾನ-ಅಫ್ಘಾನಿಸ್ತಾನ ಮಧ್ಯೆ 'ಉಗ್ರ' ಸಮರ]
ಗುರುವಾರದ ಸ್ಫೋಟಕ್ಕೂ ಮುನ್ನ ಸೋಮವಾರ, ಲಾಹೋರ್ ನ ಪಂಜಾಬ್ ಪ್ರಾಂತ್ಯದ ವಿಧಾನಸಭೆಯ ಹೊರಭಾಗದಲ್ಲಿ ನಡೆದ ಪ್ರಬಲ ಬಾಂಬ್ ಸ್ಫೋಟಕ್ಕೆ ಇಬ್ಬರು ಪೊಲೀಸ್ ಅಧಿಕಾರಿಗಳೂ ಸೇರಿ ಹತ್ತು ಮಂದಿ ಮೃತಪಟ್ಟು, 69 ಮಂದಿ ಗಾಯಗೊಂಡಿದ್ದರು.
ಈ ಎರಡೂ ಸ್ಫೋಟಗಳೂ ಸೇರಿದಂತೆ ಇತ್ತೀಚೆಗೆ ಪಾಕಿಸ್ತಾನ ಸರ್ಕಾರ ನಡೆಸಿರುವ ಉಗ್ರರ ವಿರುದ್ಧದ ಕಾರ್ಯಾಚರಣೆಯು ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ನಡೆದ ಅತಿ ಭೀಕರ ರಕ್ತ ಸಿಕ್ತ ಸಪ್ತಾಹ ಎಂದು ಹೇಳಲಾಗಿದೆ.












Click it and Unblock the Notifications