ಪಾಕ್ ಸೇನಾ ಮುಖ್ಯಸ್ಥನ ಸೇವಾವಧಿ 3 ವರ್ಷ ವಿಸ್ತರಣೆ
ಇಸ್ಲಾಮಾಬಾದ್, ಆಗಸ್ಟ್ 19: ಪಾಕ್ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವ ಸೇವಾವಧಿ ಮೂರು ವರ್ಷಗಳಿಗೆ ವಿಸ್ತರಿಸಲಾಗಿದೆ.
ಪಾಕಿಸ್ತಾನ ಪ್ರಧಾನಿ ಕಚೇರಿಯಿಂದ ಬಂದಿರುವ ಮಾಹಿತಿ ಪ್ರಕಾರ ಖಮರ್ ಜಾವೇದ್ ಬಾಜ್ವ ಸೇವಾವಧಿ ಪೂರ್ಣಗೊಂಡ ದಿನದಿಂದಲೇ ಅವಧಿ ವಿಸ್ತರಣೆಯಾಗಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ಹಾಗೂ ಭಾರತದ ನಡುವೆ ಸಂಬಂಧ ದುರ್ಬಲಗೊಂಡಿರುವ ಬೆನ್ನಲ್ಲೇ ಇಮ್ರಾನ್ ಖಾನ್ ಈ ರೀತಿಯ ತೀರ್ಮಾನ ತೆಗೆದುಕೊಂಡಿದ್ದಾರೆ.

ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಲಾಗಿದ್ದ ವಿಧಿ 370 ರದ್ದುಗೊಳಿಸಿದ್ದು, ಹಾಗೆಯೇ ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ.
ಬೆನ್ನಲ್ಲೇ ಪಾಕಿಸ್ತಾನ ಹಾಗೂ ಭಾರತದ ನಡುವೆ ಸಂಬಂಧ ಹಾಳಾಗಿತ್ತು. 2016ರಲ್ಲಿ ಪ್ರಧಾನಿ ನವಾಜ್ ಶರೀಫ್ ಅವರ ಅವಧಿಯಲ್ಲಿ ನೇಮಕಗೊಂಡಿದ್ದರು.
58 ವರ್ಷದ ಬಾಜ್ವ ರಾವಲ್‌ಪಿಂಡಿ ಕಮಾಂಡರ್ ಆಗಿದ್ದರು. ಪಾಕಿಸ್ತಾನ ಸೇನೆಯ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವ ಗೆ ಉಗ್ರ ಸಂಘಟನೆಯೊಂದಿಗೆ ನಿಕಟ ಸಂಪರ್ಕವಿದೆ ಎಂಬ ಅಘಾತಕಾರಿ ಅಂಶವನ್ನು ಪಾಕಿಸ್ತಾನದ ದೈನಿಕ ವರದಿ ಮಾಡಿತ್ತು.
ಹಫೀಝ್ ಸಯೀದ್'ನ ಉಗ್ರ ಸಂಘಟನೆಯಾದ ಜಮಾತುದ್ದಾವಾ ಸಂಘಟನೆ ಜತೆ ಬಾಜ್ವಾಗೆ ನಿಕಟ ಸಂಪರ್ಕವಿದೆ ಎಂದು ಪಾಕಿಸ್ತಾನದ ಪ್ರಮುಖ ದೈನಿಕವೊಂದು ವರದಿ ಮಾಡಿತ್ತು.












Click it and Unblock the Notifications