ಭಾರತಕ್ಕೆ ನೂತನ ಪಾಕಿಸ್ತಾನ ರಾಯಭಾರಿ ನೇಮಕ
ಇಸ್ಲಾಮಾಬಾದ್, ಮೇ 21: ಭಾರತದ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವ ಹೊಸ್ತಿಲಲ್ಲೇ ನೂತನ ರಾಯಭಾರಿಯನ್ನು ಪಾಕಿಸ್ತಾನ ನೇಮಿಸಿದೆ.
ಫ್ರಾನ್ಸ್‌ನಲ್ಲಿ ಪಾಕಿಸ್ತಾನ ರಾಯಭಾರಿಯಾಗಿದ್ದ ಮೋಯಿನ್ ಉಲ್ ಹಕ್ ಅವರನ್ನು ಭಾರತಕ್ಕೆ ವರ್ಗಾಯಿಸಲಾಗಿದೆ.
ಇವರು ಭಾರತದಲ್ಲಿ ಪಾಕಿಸ್ತಾನದ ರಾಯಭಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಉಲ್ ಹಕ್ ಅವರು ಮೊಹಮ್ಮೊದ್ ಸೋಹೆನ್ ಅವರ ಜಾಗವನ್ನು ತುಂಬಲಿದ್ದಾರೆ.
ಪಾಕಿಸ್ತಾನದ ಮಟ್ಟಿಗೆ ಸೋಹೆಲ್ ಉತ್ತಮ ರಾಯಭಾರಿಯಾಗಿರಲಿಲ್ಲ, ಈ ಅವಧಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಾಕಷ್ಟು ರಾಜತಾಂತ್ರಿಕ ಸಮಸ್ಯೆಗಳು ಏರ್ಪಟ್ಟಿದ್ದವು.

ಹೊಸ ಸರ್ಕಾರದೊಂದಿಗೆ ಉತ್ತಮ ಬಾಂದವ್ಯ ಹೊಂದಲು ಪಾಕಿಸ್ತಾನ ಸಿದ್ಧವಿದೆ ಹಾಗೂ ರಾಜತಾಂತ್ರಿಕ ಮಾತುಕತೆಗೂ ತಯಾರಿಸದೆ.
ಮಾತುಕತೆ ಮೂಲಕವೇ ಕಾಶ್ಮೀರ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಬೇಷರತ್ತಾಗಿ ಭಾರತೊಂದಿಗೆ ಪಾಕಿಸ್ತಾನ ವಲವು ತೋರಿತ್ತು.
ಪ್ರಧಾನಿ ಇಮ್ರಾನ್ ಖಾನ್ ಕೂಡ ಖುದ್ದಾಗಿ ಈ ಸಂಬಂಧ ಹೇಳಿಕೆ ನೀಡಿದ್ದರು. ಹೀಗಾಗಿ ನೂತನ ರಾಯಭಾರಿ ನೇಮಕವು ಸಾಕಷ್ಟು ಕುತೂಹಲ ಮೂಡಿಸಿದೆ.
ಭಾರತದ ಪಾಕಿಸ್ತಾನ ನಡುವಿನ ಸಂಬಂಧ ಸುಧಾರಣೆಗೆ ಇವರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇದೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ನೂತನ ರಾಯಭಾರಿಯಾಗಿ ನೇಮಿಸಲಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ತಿಳಿಸಿದೆ.












Click it and Unblock the Notifications