Get Updates
Get notified of breaking news, exclusive insights, and must-see stories!

Viral Video: ರಷ್ಯಾ ಅಧ್ಯಕ್ಷ ಪುಟಿನ್ ಸಭೆಗೆ ಏಕಾಏಕಿ ನುಗ್ಗಿದ ಪಾಕ್ ಪ್ರಧಾನಿ ಷರೀಫ್!

Viral Video: ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗುವಂತಹ ಪ್ರಸಂಗವೊಂದು ನಡೆದಿದೆ. ಇದೀಗ ಶಹಬಾಜ್ ಷರೀಫ್ ಅವರು ಎಡವಟ್ಟು ಮಾಡಿಕೊಂಡಿದ್ದಾರೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು. ನೆಟ್ಟಿಗರು ಪಾಕ್ ಪ್ರಧಾನಿಯನ್ನು ಟ್ರೋಲ್ ಮಾಡುವುದಕ್ಕೆ ಶುರು ಮಾಡಿಕೊಂಡಿದ್ದಾರೆ. ಇಷ್ಟಕ್ಕೂ ಪಾಕ್ ಪ್ರಧಾನಿ ಮಾಡಿದ್ದೇನು, ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಏನಿದೆ ಎನ್ನುವುದನ್ನು ನೋಡೋಣ.

ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲವೊಂದು ಸಂದರ್ಭದಲ್ಲಿ ಮುಜುಗರಕ್ಕೆ ಒಳಗಾಗುವುದು ಇದೆ. ಈಚೆಗೆ ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್‌ನೊಂದಿಗೆ ವೇದಿಕೆ ಹಂಚಿಕೊಂಡ ಸಂದರ್ಭದಲ್ಲಿ ಹೆಡ್‌ಸೆಟ್‌ ಹಾಕಿಕೊಳ್ಳುವುದಕ್ಕೆ ಸಾಧ್ಯವಾಗದೆ, ಹೆಡ್‌ಸೆಟ್‌ ಪದೇ ಪದೇ ಕೆಳಗೆ ಬಿದ್ದಿತ್ತು.

Pak PM Sharif Walks Into Putin Erdogan Meet Clip Sparks Buzz Video Viral

ಇದೀಗ ರಷ್ಯಾ ಅಧ್ಯಕ್ಷರನ್ನು ಭೇಟಿ ಮಾಡುವ ವಿಚಾರದಲ್ಲಿ ಮತ್ತೊಮ್ಮೆ ಪಾಕ್‌ ಪ್ರಧಾನಿ ಮುಜುಗರಕ್ಕೆ ಒಳಗಾಗಿದ್ದಾರೆ. ಈ ಬಾರಿ ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಅವರು ಸಹ ಪಾಕ್ ಪ್ರಧಾನಿ ಷರೀಫ್ ಅವರನ್ನು ಬರೋಬ್ಬರಿ 40 ನಿಮಿಷಗಳ ಕಾಲ ಕಾಯಿಸಿದ್ದಾರೆ ಎಂದು ವರದಿಯಾಗಿದೆ. ಆರ್‌ಟಿ ಇಂಡಿಯಾ ಮೀಡಿಯಾದಿಂದ ಈ ವಿಡಿಯೋ ವರದಿ ಆಗಿದೆ.

ತುರ್ಕಮೆನಿಸ್ತಾನದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಭೆಯಲ್ಲಿ ಭಾಗವಹಿಸುವುದಕ್ಕೆ ರಷ್ಯಾ, ಪಾಕಿಸ್ತಾನ, ಟರ್ಕಿ ಹಾಗೂ ಇರಾನ್ ಸೇರಿದಂತೆ ವಿವಿಧ ದೇಶಗಳ ನಾಯಕರು ಆಗಮಿಸಿದ್ದರು. ಇನ್ನು ಇದರ ಭಾಗವಾಗಿ ರಷ್ಯಾ ಅಧ್ಯಕ್ಷರಾದ ಪುಟಿನ್ ಮತ್ತು ಪಾಕಿಸ್ತಾನದ ಪ್ರಧಾನಿ ಷರೀಫ್ ಅವರ ನಡುವೆ ಮಾತುಕತೆಗೆ ಸಮಯ ನಿಗದಿ ಮಾಡಲಾಗಿತ್ತು.

ಆದರೆ ಆ ಸಮಯದಲ್ಲಿ ವಾದ್ಲಿಮಿರ್ ಪುಟಿನ್ ಅವರು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎಡೋರ್ಗನ್‌ ಅವರೊಂದಿಗೆ ಸಭೆ ನಡೆಸುತ್ತಿದ್ದರು ಎನ್ನಲಾಗಿದೆ. ಬರೋಬ್ಬರಿ 40 ನಿಮಿಷಗಳು ಕಾದರೂ ಪುಟಿನ್ ಭೇಟಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ಏಕಾಏಕಿ ಪುಟಿನ್ ಮತ್ತು ರೆಸೆಪ್ ತಯ್ಯಿಪ್ ಎಡೋರ್ಗನ್‌ ಅವರು ನಡೆಸುತ್ತಿದ್ದ ಸಭೆಯ ಕೊಠಡಿಗೆ ನುಗ್ಗಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅನುಮತಿ ಇಲ್ಲದೆ ಕೊಠಡಿಗೆ ನುಗ್ಗಿದ ಷರೀಫ್

ಇಬ್ಬರು ಪ್ರಮುಖ ನಾಯಕರು ಸಭೆ ನಡೆಸುತ್ತಿದ್ದರೂ ಷರೀಫ್ ಅವರು ಏಕಾಏಕಿ ನುಗ್ಗಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಪುಟಿನ್ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆ ವಿಳಂಬವಾದ ನಂತರ, ಪುಟಿನ್ ಮತ್ತು ಟರ್ಕಿಶ್ ಅಧ್ಯಕ್ಷರ ಮುಚ್ಚಿದ ರೂಮ್‌ನಲ್ಲಿ ನಡೆಯುತ್ತಿದ್ದ ಸಭೆಗೆ ಷರೀಫ್ ಅವರು ಏಕಾಏಕಿ ನುಗ್ಗಿದ್ದಾರೆ. ಈ ರೀತಿ ನುಗ್ಗಿದ 10 ನಿಮಿಷಗಳ ಒಳಗಾಗಿ ಷರೀಫ್ ಅವರು ರೂಮ್‌ನಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+