ಪಾಕ್: 'ಸ್ವಯಂಚಾಲಿತ ಚಪ್ಪಲಿಯಿಂದ ಹೊಡೆಯುವ ಯಂತ್ರ' ಕಂಡುಹಿಡಿದ ಇಮ್ರಾನ್ ಬೆಂಬಲಿಗರು!

ಇಸ್ಲಾಮಾಬಾದ್ ಆಗಸ್ಟ್ 20: ಪಾಕಿಸ್ತಾನದ ರಾಜಕೀಯದ ಮಟ್ಟ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಪಾಕಿಸ್ತಾನದ ಎಲ್ಲಾ ರಾಜಕೀಯ ಪಕ್ಷಗಳು ಪರಸ್ಪರ ಅವಮಾನಿಸಿಕೊಳ್ಳುತ್ತಿವೆ. ಇದರಲ್ಲಿ ಇಮ್ರಾನ್ ಖಾನ್ ಪಕ್ಷವೇ ಮುಂಚೂಣಿಯಲ್ಲಿದ್ದು, ಇದೀಗ ಇಮ್ರಾನ್ ಖಾನ್ ಬೆಂಬಲಿಗರು 'ಆಟೋಮ್ಯಾಟಿಕ್ ಚಪ್ಪಲಿಯಿಂದ ಹೊಡೆಯುವ ಯಂತ್ರ' ಕಂಡುಹಿಡಿದಿದ್ದು, ಪ್ರತಿಪಕ್ಷದ ಮೂವರು ಅಗ್ರ ನಾಯಕರ ಮುಖದ ಮೇಲೆ ಚಪ್ಪಲಿಯಿಂದ ಹೊಡೆದಿವೆ.

ಪಾಕಿಸ್ತಾನದ ರಾಜಕಾರಣಿಗಳಿಗೆ ರಾಜಕೀಯದ ಕನಿಷ್ಠ ಘನತೆಯೂ ಇಲ್ಲ. ಅದರಲ್ಲೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪಕ್ಷದ ಬಗ್ಗೆ ಮಾತನಾಡಿದರೆ, ಅವರನ್ನು ರಾಜಕೀಯದ ನಿಂದನೀಯ ಕುಖ್ಯಾತ ವ್ಯಕ್ತಿ ಎಂದು ಕರೆಯಬಹುದು. ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗ ವಿರೋಧ ಪಕ್ಷದ ನಾಯಕರನ್ನು ಟೀಕಿಸಿದ್ದರು. ಸದ್ಯ ಇಮ್ರಾನ್ ಖಾನ್ ಅಧಿಕಾರದಿಂದ ನಿರ್ಗಮಿಸಿದ ನಂತರ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ವಿರುದ್ಧ 'ಸೇಡು' ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಇಮ್ರಾನ್ ಖಾನ್ ಅವರು ಬಂಧನದ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಈಗಾಗಲೇ ಅವರ ಆಪ್ತ ಪತ್ರಕರ್ತರು ಸೇರಿದಂತೆ ಅವರ ಅನೇಕ ನಿಕಟ ಬೆಂಬಲಿಗರನ್ನು ಬಂಧಿಸಲಾಗಿದೆ. ಈ ನಡುವೆ ಇಮ್ರಾನ್ ಖಾನ್ ಬೆಂಬಲಿಗರು ಈಗ 'ಸ್ವಯಂಚಾಲಿತ ಚಪ್ಪಲ್‌ನಿಂದ ಹೊಡೆಯುವ ಯಂತ್ರ' ಕಂಡುಹಿಡಿದಿದ್ದಾರೆ.

ಇಮ್ರಾನ್ ಖಾನ್ ರ್‍ಯಾಲಿಯಲ್ಲಿ ಯಂತ್ರ ಬಳಕೆ

ಇಮ್ರಾನ್ ಖಾನ್ ರ್‍ಯಾಲಿಯಲ್ಲಿ ಅವರ ಬೆಂಬಲಿಗರು ಈ 'ಸ್ವಯಂಚಾಲಿತ ಚಪ್ಪಲಿ ಮೂಲಕ ಹೊಡೆಯುವ ಯಂತ್ರ'ವನ್ನು ಪರಿಚಯಿಸಿದ್ದಾರೆ. ಈ ವಿಡಿಯೊದಲ್ಲಿ ಪಾಕಿಸ್ತಾನದ ಪ್ರಸ್ತುತ ರಾಜಕೀಯದ ಮೂರು ದೊಡ್ಡ ಮುಖಗಳು ಕಾಣಿಸುತ್ತವೆ. ಒಂದು ಮುಖ ಹಾಲಿ ಪ್ರಧಾನಿ ಶಹಬಾಜ್ ಷರೀಫ್ ಅವರದ್ದು, ಮಧ್ಯದಲ್ಲಿ PDM ನಾಯಕ ಮೌಲಾನಾ ಫಜ್ಲುರ್ ರೆಹಮಾನ್ ಮತ್ತು ಮೂರನೇ ಮುಖ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರ ತಂದೆ ಮತ್ತು ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರದ್ದು. ಪ್ರಸ್ತುತ, ಈ ಇಬ್ಬರು ನಾಯಕರ ಬೆಂಬಲದೊಂದಿಗೆ ಶಹಬಾಜ್ ಷರೀಫ್ ಅವರ ಸರ್ಕಾರ ನಡೆಯುತ್ತಿದೆ. ಆದ್ದರಿಂದ ಇಮ್ರಾನ್ ಖಾನ್ ಬೆಂಬಲಿಗರು ಮೂವರ ಚಿತ್ರಗಳಿಗೆ 'ಸ್ವಯಂಚಾಲಿತ ಚಪ್ಪಲ್ ಹೊಡೆಯುವ ಯಂತ್ರ'ವನ್ನು ಬಳಕೆ ಮಾಡಿದ್ದಾರೆ. ಈ ಯಂತ್ರವನ್ನು ವಿಶೇಷ ವಿನ್ಯಾಸದಲ್ಲಿ ತಯಾರಿಸಲಾಗಿದ್ದು, ಹಗ್ಗದ ಸಹಾಯದಿಂದ ಮೂವರ ಮುಖಕ್ಕೆ ಸ್ವಯಂಚಾಲಿತವಾಗಿ ಚಪ್ಪಲಿ ಹೊಡೆಯುತ್ತದೆ. ಇಮ್ರಾನ್ ರ ರ್‍ಯಾಲಿಯ ಈ ವಿಡಿಯೋ ಪ್ರಪಂಚದಾದ್ಯಂತ ವೈರಲ್ ಆಗುತ್ತಿದ್ದು, ಜನರು ಈ ವಿಡಿಯೋಗೆ ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ವಿಡಿಯೋಗೆ ಕುತೂಹಲಕಾರಿ ಪ್ರತಿಕ್ರಿಯೆಗಳು

ವಿಡಿಯೋಗೆ ಕುತೂಹಲಕಾರಿ ಪ್ರತಿಕ್ರಿಯೆಗಳು

ಈ ಯಂತ್ರವು ಪಾಕಿಸ್ತಾನದ ಮೊದಲ ಕೈಗಾರಿಕೀಕರಣಕ್ಕೆ ಸಾಕ್ಷಿಯಾಗಿದೆ ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ. ಅದರ ಹೆಸರು 'ಸ್ವಯಂಚಾಲಿತ ಡ್ಯಾಮ್ ಯಂತ್ರ'. ಇದು ಪಾಕಿಸ್ತಾನದ ನಿಜವಾದ ಆವಿಷ್ಕಾರವಾಗಿದ್ದು, ಇದನ್ನು ಇಡೀ ವಿಶ್ವವೇ ಒಪ್ಪಿಕೊಳ್ಳಬೇಕು.

ಆರುಷಿ ಎಂಬ ಟ್ವಿಟರ್ ಬಳಕೆದಾರರು ವಿಫಲ ದೇಶ ಪಾಕಿಸ್ತಾನದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಮೂರ್ಖ ಜನರು ನಮ್ಮನ್ನು ರಂಜಿಸಲು ಎಂದಿಗೂ ವಿಫಲರಾಗುವುದಿಲ್ಲ. ಇಮ್ರಾನ್ ಬೆಂಬಲಿಗರ ಈ ವೀಡಿಯೊ #AutomaticLaanatMachine ಹೆಸರಿನಲ್ಲಿ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ.

ಆತ್ಮಹತ್ಯಾ ದಾಳಿ ನಡೆಸುವುದಾಗಿ ಬೆದರಿಕೆ

ಆತ್ಮಹತ್ಯಾ ದಾಳಿ ನಡೆಸುವುದಾಗಿ ಬೆದರಿಕೆ

ಕಳೆದ ಕೆಲ ತಿಂಗಳ ಹಿಂದೆ ಇಮ್ರಾನ್ ಖಾನ್ ಬೆಂಬಲಿಗರು, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅವರ ನಿಯೋಗದ ಇತರ ಸದಸ್ಯರು ಮದೀನಾದ ಪ್ರವಾದಿ ಮಸೀದಿಗೆ ಆಗಮಿಸಿದ ತಕ್ಷಣ 'ಚೋರ' (ಕಳ್ಳ) ಮತ್ತು 'ಗದ್ದರ್' (ದೇಶದ್ರೋಹಿ) ಎಂದು ಕೂಗಿರುವ ವಿಡಿಯೋ ವೈರಲ್ ಆಗಿತ್ತು. ಜೂನ್ ತಿಂಗಳಲ್ಲಿ ಪಾಕಿಸ್ತಾನ್ ತೆಹ್ರೀಕಿ ಇನ್ಸಾಫ್ ಪಕ್ಷದ ಮುಖ್ಯಸ್ಥ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಯಾವುದೇ ಸಮಸ್ಯೆಯಾದರೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸರಕಾರದ ಉನ್ನತ ಅಧಿಕಾರಿಗಳ ವಿರುದ್ಧ ಆತ್ಮಹತ್ಯಾ ದಾಳಿ ನಡೆಸುವುದಾಗಿ ಪಕ್ಷದ ಸಂಸದ ಅತಾಹುಲ್ಲಾ ಬೆದರಿಕೆ ಹಾಕಿದ್ದರು.

ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಎಚ್ಚರಿಕೆ

ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಎಚ್ಚರಿಕೆ

"ಇಮ್ರಾನ್ ಖಾನ್ ಅವರ ತಲೆಯ ಮೇಲಿನ ಒಂದು ಕೂದಲಿಗೂ ಹಾನಿಯಾದರೂ ದೇಶವನ್ನು ನಡೆಸುತ್ತಿರುವವರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ನೀವಾಗಲೀ, ನಿಮ್ಮ ಮಕ್ಕಳಾಗಲೀ ಉಳಿಯುವುದಿಲ್ಲ. ನಿಮ್ಮ ಮೇಲೆ ಆತ್ಮಾಹುತಿ ದಾಳಿ ನಡೆಸುವ ಮೊದಲಿಗ ನಾನೇ. ನಿಮ್ಮನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ನಮ್ಮ ಪಕ್ಷದ ಸಾವಿರಾರು ಕಾರ್ಯಕರ್ತರು ಅದೇ ರೀತಿ ಮಾಡಲು ಸಿದ್ಧರಾಗಿದ್ದಾರೆ,'' ಎಂದು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅತಾಹುಲ್ಲಾ ಎಚ್ಚರಿಕೆ ನೀಡಿದ್ದಾರೆ.

"ಇಮ್ರಾನ್ ಖಾನ್ ಅವರಿಗೆ ಸಣ್ಣ ಸಮಸ್ಯೆಯಾದರೂ ಪಾಕಿಸ್ತಾನದ ಆಡಳಿತ ನಡೆಸುತ್ತಿರುವವರ ಮೇಲೆ ಆತ್ಮಹತ್ಯಾ ದಾಳಿ ನಡೆಸಲಾಗುವುದು. ಈ ರೀತಿ ಮಾಡುವ ಮೊದಲ ಆತ್ಮಾಹುತಿ ದಾಳಿಕೋರ ತಾನೇ,'' ಎಂದು ಕರಾಚಿ ಕ್ಷೇತ್ರದ ಸಂಸದ ಅತಾಹುಲ್ಲಾ ಪಾಕ್ ಸರಕಾರಕ್ಕೆ ಬೆದರಿಕೆ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+