ಭಾರತದ ಶತ್ರು ಪಾಕಿಸ್ತಾನದ ಚುನಾವಣೆ ಮುಂದೂಡಿಕೆ?
ಪಾಕಿಸ್ತಾನವೇ ಹಿಂಗೆ, ಏನೇ ಮಾಡಿದರೂ ಏನಾದ್ರೂ ಒಂದು ಎಡವಟ್ಟನ್ನ ಮಾಡ್ಕೊಂಡು ನಗೆಪಾಟಲಿಗೆ ಗುರಿಯಾಗುತ್ತದೆ. ಅದರಲ್ಲೂ ಈಗ ಪಾಕಿಸ್ತಾನದ ಚುನಾವಣೆ ಇಡೀ ಜಗತ್ತಿನ ಗಮನ ಸೆಳೆದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಅಲ್ಲಿ ಚುನಾವಣೆ ನಡೆಯುತ್ತೋ? ಚುನಾವಣೆಯ ಮುಂದೂಡಲಾಗುತ್ತೋ? ಅನ್ನೋ ಅನುಮಾನ ಮೂಡಿದೆ. ಈ ವಿಚಾರವಾಗಿ ಈಗ ಮಹತ್ವದ ಮಾಹಿತಿ ಹೊರಗೆ ಬಿದ್ದಿದೆ.
ಪಾಕಿಸ್ತಾನ ಲೋಕಸಭೆ ಸದಸ್ಯ ಬಲ 342, ಭಾರತದ ರೀತಿ ಪಾಕಿಸ್ತಾನದಲ್ಲಿ ಕೂಡ 5 ವರ್ಷಗಳ ಅಧಿಕಾರವಧಿ ಇರುತ್ತದೆ. ಈ ಅವಧಿ 2023ರ ಆಗಸ್ಟ್ 12ಕ್ಕೆ ಕೊನೆಯಾಗುತ್ತಿತ್ತು. ಆದ್ರೆ ಅವಧಿಗು ಮೊದಲು ಅಂದ್ರೆ ಆಗಸ್ಟ್ 9ಕ್ಕೆ ಪಾಕಿಸ್ತಾನ ಸಂಸತ್ ವಿಸರ್ಜನೆಗೆ ಶಿಫಾರಸು ಕಳುಹಿಸಿದ್ರು ಪಾಕ್ ಪ್ರಧಾನಿ. ಆಗಿನ ಪ್ರಧಾನಿ ಶಿಫಾರಸು ಹಿನ್ನೆಲೆ ಪಾಕಿಸ್ತಾನ ಸಂಸತ್ ವಿಸರ್ಜನೆ ಮಾಡಲಾಗಿತ್ತು. ಇದೀಗ ಚುನಾವಣೆಗೂ ಸಕಲ ಸಿದ್ಧತೆ ನಡೆಸಲಾಗಿದ್ದು, ಚುನಾವಣೆ ಮುಂದೂಡುವ ಪ್ರಯತ್ನ ಕೂಡ ನಡೆಯುತ್ತಿದೆ. ಈ ಬಗ್ಗೆ ಪಾಕಿಸ್ತಾನ ಚುನಾವಣಾ ಆಯೋಗ ಮಹತ್ವದ ಹೇಳಿಕೆಯ ನೀಡಿದೆ.

ಚುನಾವಣೆ ನಡೆಯುತ್ತಾ? ಇಲ್ವಾ?
ಅಂದಹಾಗೆ ಪಾಕಿಸ್ತಾನದಲ್ಲಿ ಫೆಬ್ರವರಿ 8ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ಮುಂದೂಡಲು ಸೆನೆಟ್ ಈ ತಿಂಗಳ ಆರಂಭದಲ್ಲಿ ಅಂಗೀಕರಿಸಿದ ನಿರ್ಣಯವನ್ನ, ಪಾಕಿಸ್ತಾನದ ಚುನಾವಣಾ ಆಯೋಗವು ತಿರಸ್ಕಾರ ಮಾಡಿದೆ. ದೇಶದಲ್ಲಿ ರಾಜಕೀಯ ಅನಿಶ್ಚಿತತೆ ಸೇರಿ ಶೀತ ಹವಾಮಾನ & ಭದ್ರತಾ ಕಾರಣ ಉಲ್ಲೇಖಿಸಿ ಸಂಸತ್ತಿನ ಸಾರ್ವತ್ರಿಕ ಚುನಾವಣೆ ಮುಂದೂಡುವ ನಿರ್ಣಯವನ್ನ ಇದೇ ತಿಂಗಳು, ಅಂದರೆ ಜನವರಿ 5 ರಂದು ಅಂಗೀಕಾರ ಮಾಡಿತ್ತು.
ಪಾಕಿಸ್ತಾನದಲ್ಲಿ ಏನಾಗುತ್ತೆ ಗೊತ್ತೆ?
ಅಷ್ಟಕ್ಕೂ ಸ್ವತಂತ್ರ ಸೆನೆಟರ್ ದಿಲಾವರ್ ಖಾನ್ ಮಂಡಿಸಿದ ಈ ನಿರ್ಣಯ ಸೆನೆಟ್‌ನಲ್ಲಿ ಒಪ್ಪಿಗೆ ಪಡೆದಿತ್ತು. ಆದರೆ ಪ್ರಮುಖ ರಾಜಕೀಯ ಪಕ್ಷಗಳು ಇದು ಅಸಂವಿಧಾನಿಕ ಎಂದು ಟೀಕಿಸಿದ್ದವು. ಸೆನೆಟ್‌ನ 100 ಸದಸ್ಯರಲ್ಲಿ, ಕೇವಲ 14 ಶಾಸಕರು ಹಾಜರಿದ್ದು ಅದನ್ನ ಅಂಗೀಕರಿಸಲಾಗಿತ್ತು. ಇದೇ ಕಾರಣಕ್ಕೆ ಈ ನಿರ್ಧಾರ ಭಾರಿ ಟೀಕೆಗೂ ಗುರಿಯಾಗಿತ್ತು. ಈಗ ಪಾಕ್‌ನ ಚುನಾವಣಾ ಆಯೋಗವು ನಿರ್ಣಯದ ಬಗ್ಗೆ ಸ್ಪಷ್ಟನೆ ನೀಡಿದೆ. ಅಲ್ಲದೆ ಚುನಾವಣೆ ನಡೆಸುವ ಬಗ್ಗೆ ಖಡಕ್ ನಿರ್ಧಾರವನ್ನೂ ಪ್ರಕಟಿಸಿದೆ.

ಇನ್ನು ಪಾಕಿಸ್ತಾನದ ಚುನಾವಣೆ ಸಮಯದಲ್ಲಿ ಉಸ್ತುವಾರಿ ಫೆಡರಲ್ ಸೇರಿದಂತೆ ಪ್ರಾಂತೀಯ ಸರ್ಕಾರಗಳಿಗೆ ಭದ್ರತಾ ವ್ಯವಸ್ಥೆ ಹೆಚ್ಚಿಸಲು & ಮತದಾರರಿಗೆ ಅನುಕೂಲಕರ ವಾತಾವರಣವನ್ನ ಕಲ್ಪಿಸಲು ಚುನಾವಣಾ ಆಯೋಗ ಬದ್ಧ ಎಂಬ ಮಾಹಿತಿ ತಿಳಿಸಿದೆ ಪಾಕಿಸ್ತಾನ ಚುನಾವಣಾ ಆಯೋಗ. ಈ ಮೂಲಕ 2024ರ ಫೆಬ್ರವರಿ 8ಕ್ಕೆ, ಚುನಾವಣೆ ನಡೆಸಲು ಬದ್ಧ ಎಂದು ಸುಪ್ರೀಂ ಕೋರ್ಟ್‌ಗೂ ತಿಳಿಸಿರುವುದಾಗಿ ಪಾಕಿಸ್ತಾನದ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಈ ಮೂಲಕ ಇನ್ನೇನು ಕೆಲವೇ ದಿನದಲ್ಲಿ ಪಾಕಿಸ್ತಾನ ಚುನಾವಣೆ ನಡೆಯುವುದು ಪಕ್ಕಾ ಕೂಡ ಆಗಿದೆ.












Click it and Unblock the Notifications