Donald Trump: ಟ್ರಂಪ್ ಅಧಿಕಾರಕ್ಕೆ ಕೌಂಟ್‌ಡೌನ್, ಉಕ್ರೇನ್ ಅಧ್ಯಕ್ಷನಿಗೆ ಭಯ?
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಪಟ್ಟ ಪಡೆಯಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಇಂತಹ ಸಮಯದಲ್ಲಿ ನೂರಾರು ಲೆಕ್ಕಾಚಾರ ಶುರುವಾಗಿವೆ. ಒಂದು ಕಡೆ ಟ್ರಂಪ್ ಅವರ ಜೊತೆಗೆ ಉತ್ತಮ ಒಡನಾಟ ಇಟ್ಟುಕೊಂಡಿರುವ ದೇಶಗಳು ಖುಷಿಯಾಗಿದ್ದರೆ, ಹಾಗೇ ಇನ್ನೊಂದು ಕಡೆ ಡೊನಾಲ್ಡ್ ಟ್ರಂಪ್ ವಿರೋಧ ಕಟ್ಟಿಕೊಂಡ ದೇಶಗಳು ಇದೀಗ ನಡುಗುತ್ತಿವೆ. ಅದರಲ್ಲೂ ಉಕ್ರೇನ್ ಭಯದಲ್ಲೇ ನರಳಿ ಸಾಯುವ ಪರಿಸ್ಥಿತಿ ಬಂದಿದೆ.
ರಷ್ಯಾ & ಉಕ್ರೇನ್ ನಡುವೆ ವಾರ್ ಆಗುತ್ತಿದ್ದು, ಗೆಲುವಿಗಾಗಿ ಇಬ್ಬರೂ ಬಡಿದಾಡುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಒಂದು ಕೈ ಮೇಲೆ ಇರುವ ರಷ್ಯಾಗೆ ಇದೀಗ ಡೊನಾಲ್ಡ್ ಟ್ರಂಪ್‌ರ ಆಗಮನ ಕೂಡ ಬಲ ನೀಡುತ್ತಿದೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಕೂಡ ರಷ್ಯಾ ಪರವಾಗಿ ಇದ್ದಾರೆ ಎನ್ನಬಹುದು. ಆದರೆ ಇದೇ ವೇಳೆ ಉಕ್ರೇನ್‌ಗೆ ಮಾತ್ರ ಭಯ ಭಯ ಶುರುವಾಗಿದೆ. ಯಾಕಂದ್ರೆ ಈ ಮೊದಲಿಂದ ಕೂಡ ಉಕ್ರೇನ್ ವಿರುದ್ಧ ಡೊನಾಲ್ಡ್ ಟ್ರಂಪ್ ಮಾತನಾಡ್ತಿದ್ದರು.

ಉಕ್ರೇನ್ ಅಧ್ಯಕ್ಷನಿಗೆ ಭಯ ಭಯ!
ಇಸ್ರೇಲ್ & ಗಾಜಾ ಯುದ್ಧದಲ್ಲಿ ಇಸ್ರೇಲ್ ಪರವಾಗಿ ನಿಂತಿರುವ ಅಮೆರಿಕ, ರಷ್ಯಾ & ಉಕ್ರೇನ್ ಯುದ್ಧದಲ್ಲಿ ಮಾತ್ರ ಒಗ್ಗಟ್ಟು ಪ್ರದರ್ಶನ ಮಾಡುತ್ತಿಲ್ಲ. ಯಾಕಂದ್ರೆ ಜೋ ಬೈಡನ್ ಅಮೆರಿಕ ಆಡಳಿತ ನಡೆಸುವ ಸಮಯದಲ್ಲೇ ರಷ್ಯಾ & ಉಕ್ರೇನ್ ವಾರ್ ಶುರುವಾಗಿತ್ತು. ಹೀಗಿದ್ದಾಗಲೇ, ಡೊನಾಲ್ಡ್ ಟ್ರಂಪ್ ಅವರು ಈ ಯುದ್ಧವನ್ನು ವಿರೋಧ ಮಾಡುತ್ತಲೇ ಬಂದಿದ್ದಾರೆ.
ಅತ್ತ ಜೋ ಬೈಡನ್ ಇಷ್ಟುದಿನ ಉಕ್ರೇನ್‌ಗೆ ಬೆಂಬಲ ನೀಡಿದ್ದರು. ಆದರೆ ಈಗ ಅವರು ಅಧಿಕಾರ ಬಿಟ್ಟು ಹೋಗುತ್ತಿದ್ದಾರೆ. ಸುಮಾರು 5,00,000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಈ ಯುದ್ಧದ ನೆರವಿಗೆ ಅಂತಾ ಉಕ್ರೇನ್‌ಗೆ ನೀಡಲಾಗಿದೆ. ಜೋ ಬೈಡನ್ ಸರ್ಕಾರ ನೀಡಿರುವ ಹಣ ಈಗ ಖಾಲಿ ಆಗಿದ್ದು, ಉಕ್ರೇನ್ ನರಳುತ್ತಿದೆ. ಇದೇ ಸಮಯದಲ್ಲಿ ಜೋ ಬೈಡನ್ ಸರ್ಕಾರವು ಕೂಡ ಜಾಗ ಖಾಲಿ ಮಾಡುತ್ತಿದ್ದು ಟ್ರಂಪ್ ಆಡಳಿತ ಶುರುವಾಗಲಿದೆ. ಇದೇ ಕಾರಣಕ್ಕೆ ಭಯ ಭಯದಲ್ಲೇ ನರಳುತ್ತಿದೆ ಉಕ್ರೇನ್.
ರಷ್ಯಾಗೆ ಆಘಾತ ನೀಡಿದ ಉಕ್ರೇನ್?
ಉಕ್ರೇನ್ ಸೇನೆ ತುಂಬಾ ದೊಡ್ಡ ಮಟ್ಟದಲ್ಲಿ ರಷ್ಯಾ ತೈಲ ಸಂಗ್ರಹ ಘಟಕಗಳ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ. ಈ ಮೂಲಕ ರಷ್ಯಾ & ಉಕ್ರೇನ್ ಯುದ್ಧ ಇನ್ನಷ್ಟು ಘೋರವಾಗುತ್ತಿದೆ. ಹಾಗೇ ಯುರೋಪ್ ಸೇರಿದಂತೆ ಇಡೀ ಜಗತ್ತಿನಲ್ಲಿ ಈ ಯುದ್ಧ ಭಯ ಹೆಚ್ಚಾಗುವಂತೆ ಮಾಡುತ್ತಿದೆ. ರಷ್ಯಾ ತನ್ನ ಬಳಿ ಇರುವ ಅತ್ಯಂತ ವಿನಾಶಕಾರಿ ಅಸ್ತ್ರ ಹೊರಗೆ ತೆಗೆಯಲು ಚಿಂತಿಸುತ್ತಿರುವ ಸಮಯದಲ್ಲೇ ಉಕ್ರೇನ್ ಈ ರೀತಿ ವರ್ತಿಸಿದೆ.












Click it and Unblock the Notifications