ಉಕ್ರೇನ್ ವಿರುದ್ಧ ಮತ್ತಷ್ಟು ಭೀಕರ ದಾಳಿ ಆರಂಭಿಸಿದ ರಷ್ಯಾ ಮಿಲಿಟರಿ?
ರಷ್ಯಾ & ಉಕ್ರೇನ್ ಮಧ್ಯೆ ತಿಕ್ಕಾಟ ಪ್ರತಿಕ್ಷಣ ಹೆಚ್ಚಾಗುತ್ತಲೇ ಇದ್ದು, ಜನರು ನಲುಗಿದ್ದಾರೆ. ಅದ್ರಲ್ಲೂ ರಷ್ಯಾ ಮಿಲಿಟರಿ ಇದೀಗ ಉಕ್ರೇನ್ ನೆಲದ ಮೇಲೆ ಬಾಂಬ್‌ಗಳ ಮಳೆ ಸುರಿಸುತ್ತಾ ತನ್ನ ಆಕ್ರೋಶ ಹೊರ ಹಾಕುತ್ತಿದೆ. ಇಂತಹ ಸಮಯದಲ್ಲಿ ಉಕ್ರೇನ್‌ಗೆ ಪಾಶ್ಚಿಮಾತ್ಯ ದೇಶಗಳು ಬೆಂಬಲಕ್ಕೂ ನಿಂತಿದ್ದು, ರಷ್ಯಾ ಸೇನೆ ಇದರ ಬಗ್ಗೆ ಮತ್ತಷ್ಟು ಆಕ್ರೋಶಗೊಂಡು ಈಗ ಏನು ಮಾಡಿದೆ ಗೊತ್ತಾ? ಯುರೋಪ್ ಭಾಗದಲ್ಲಿ ಮತ್ತೊಂದು ಮಹಾಯುದ್ಧ ಶುರು ಆಗಲಿದೆಯಾ? ರಷ್ಯಾ & ಉಕ್ರೇನ್ ಕಿತ್ತಾಟದಿಂದ ಯುರೋಪ್ ದೇಶಗಳ ಪರಿಸ್ಥಿತಿ ಏನಾಗಲಿದೆ?
ಉಕ್ರೇನ್ ವಿರುದ್ಧ ಮತ್ತೆ ರಷ್ಯಾ ರೊಚ್ಚಿಗೆದ್ದು ದಾಳಿ ಮಾಡುತ್ತಿರುವ ಕಾರಣ ಇದೀಗ ಅಲ್ಲಿನ ಪರಿಸ್ಥಿತಿ ಕೈಮೀರಿ ಹೋಗಿದೆ. ಅದರಲ್ಲೂ ರಷ್ಯಾ ಸೇನೆ ಇದೀಗ ಅತ್ಯಾಧುನಿಕ ಕ್ಷಿಪಣಿ ಮತ್ತು ಡ್ರೋನ್ ಬಳಸಿ ಉಕ್ರೇನ್‌ನ ಮೂಲೆ ಮೂಲೆಗೂ ದಾಳಿ ಮಾಡುತ್ತಿದೆ. ಹೀಗಾಗಿ ಭಯ ಕೂಡ ಆವರಿಸಿದ್ದು, ಯಾವ ಕ್ಷಣದಲ್ಲಿ ಏನಾಗುತ್ತೋ? ಅಂತಾ ಜನರು ನರಳುತ್ತಿದ್ದಾರೆ. ಉಕ್ರೇನ್‌ನ ಅಧ್ಯಕ್ಷ ಕೂಡ ಈ ಕುರಿತು ಆಕ್ರೋಶ ಹೊರ ಹಾಕಿದ್ದು, ರಷ್ಯಾ ಸೇನೆಗೆ ಎಚ್ಚರಿಕೆ ನೀಡಿದ್ದು ಮತ್ತಷ್ಟು ಸೌಂಡ್ ಮಾಡುತ್ತಿದೆ. ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಇದೀಗ ರಷ್ಯಾ ಮಿಲಿಟರಿ ಸುಮಾರು 100ಕ್ಕೂ ಹೆಚ್ಚು ಡ್ರೋನ್ & ಮಿಸೈಲ್ ಮೂಲಕ ಇದೀಗ ಭಾರಿ ಘೋರ ದಾಳಿ ನಡೆಸಿದೆ ಎಂದು ಆರೋಪ ಮಾಡಲಾಗಿದೆ.

ಭಾರತದ ಸಂಧಾನ ವರ್ಕೌಟ್ ಆಗುತ್ತಾ?
ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಭಾರತ ಕೂಡ ಎಲ್ಲಾ ರೀತಿಯ ಪ್ರಯತ್ನ ಆರಂಭಿಸಿದೆ. ಹೀಗಿದ್ದರೂ ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿಲ್ಲ, ಯಾಕಂದ್ರೆ ಉಕ್ರೇನ್ ನಾಶಕ್ಕೆ ರಷ್ಯಾ ಮಿಲಿಟರಿ ಇದೀಗ ಪಣತೊಟ್ಟು ನಿಂತಿದೆ. ಅದರಲ್ಲೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈಗ ಉಕ್ರೇನ್ ನಾಶಕ್ಕೆ ಆದೇಶ ನೀಡಿದ್ದಾರೆ ಎಂಬ ಆರೋಪ ಇದೆ. ಅದರಲ್ಲೂ ಉಕ್ರೇನ್ ದೇಶದ ರಾಜಧಾನಿ ಇದೀಗ ಅಕ್ಷರಶಃ ನರಕವಾಗಿ ಬದಲಾಗಿದ್ದು, ಜನ ಜೀವ ಉಳಿಸಿಕೊಳ್ಳಲು ಈಗ ಓಡಿ ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ.
ರಷ್ಯಾ ವಿನಾಶಕಾರಿ ಅಸ್ತ್ರ ಬಳಸುತ್ತಾ?
ರಷ್ಯಾ ಈಗ ಉಕ್ರೇನ್ ವಿರುದ್ಧ ಕೆಂಡವಾಗಲು ಬಲವಾದ ಕಾರಣವೂ ಇದ್ದು ಯಾವಾಗ ಅಮೆರಿಕ ಪರೋಕ್ಷವಾಗಿ ಉಕ್ರೇನ್‌ಗೆ ಸಹಾಯ ಮಾಡುತ್ತಿತ್ತೋ ಆಗಲೇ ಉಕ್ರೇನ್ ಸೇನೆ ಗ್ರಹಚಾರ ಕೆಟ್ಟಿತ್ತು. ಈಗ ನೇರವಾಗಿ ಉಕ್ರೇನ್ ಬೆನ್ನಿಗೆ ನಿಲ್ಲಲು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ಒಕ್ಕೂಟ ಸಿದ್ಧವಾಗಿರುವುದು, ಪರಿಸ್ಥಿತಿ ಕೈಮೀರುವಂತೆ ಮಾಡಿದೆ. ಉಕ್ರೇನ್ ದೇಶಕ್ಕೆ ಅಮೆರಿಕ ನಿರ್ಮಿತ ಎಫ್-16 ಯುದ್ಧ ವಿಮಾನಗಳು ಎಂಟ್ರಿ ಆದ ನಂತರ ಪರಿಸ್ಥಿತಿ ಮತ್ತಷ್ಟು ಭೀಕರವಾಗಿದ್ದು, ಯಾವ ಕ್ಷಣದಲ್ಲಿ ಏನಾಗುತ್ತೋ? ಅನ್ನೋ ಭಯ ಕೂಡ ಆವರಿಸಿದೆ. ಅದರಲ್ಲೂ ಇಬ್ಬರೂ ಪರಮಾಣು ಬಾಂಬ್ ಬಳಸಿದರೆ ಪರಿಸ್ಥಿತಿ ಏನಾಗಬಹುದು? ಎಂಬ ಭಯ ಕಾಡುತ್ತಿದೆ.












Click it and Unblock the Notifications