ಜನಪ್ರಿಯ ವಾಟ್ಸಾಪಿಗೆ ಸದ್ಯದಲ್ಲೇ ಜರುಗಲಿದೆ ಶ್ರದ್ಧಾಂಜಲಿ

ಲಂಡನ್, ಜು. 10: ನಿಮ್ಮ, ನಮ್ಮೆಲ್ಲರ ನೆಚ್ಚಿನ ಮೆಸೇಜಿಂಗ್ ತಾಣ ವಾಟ್ಸಪ್ ಗೆ ಸದ್ಯವೇ ಶ್ರದ್ಧಾಂಜಲಿ ಸಲ್ಲಿಸಬೇಕಾಗಿ ಬರಬಹುದೇ? ಹೀಗೊಂದು ಪ್ರಶ್ನೆ ಉದ್ಭವವಾಗಿದೆ.

ಇಂಗ್ಲೆಂಡ್ ಸರ್ಕಾರ ವಾಟ್ಸಪ್ ಮೇಲೆ ಸದ್ಯವೇ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಮಾಧ್ಯಮಗಳ ವರದಿ ಹೇಳಿದೆ. ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು ಸಂದೇಶ ರವಾನಿಸುವ ತಾಣಗಳಾದ ವಾಟ್ಸಪ್, ಇಮೆಸೇಜ್ ಮತ್ತು ಸ್ನ್ಯಾಪ್ ಚಾಟ್ ಮೇಲೆ ನಿಷೇಧ ಹೇರುವ ಸಾಧ್ಯತೆ ಹೆಚ್ಚಾಗಿದೆ.[ವಾಸುದೇವ ಭಟ್ಟರ ಸಾವಿಗೆ ವಾಟ್ಸಪ್ ವಿಡಿಯೋ ಕಾರಣ?]

social

ಈ ಸಂದೇಶ ರವಾನಿಸುವ ಇಂಥ ತಾಣ ಗಳು ಪಾರದರ್ಶಕವಾಗಿಲ್ಲ. ಸರ್ಕಾರದ ಕಾರ್ಯಕ್ರಮಗಳ ಬಗ್ಗೆಯೂ ತಪ್ಪು ಮಾಹಿತಿ ರವಾನೆ ಮಾಡಲಾಗುತ್ತಿದೆ. ಕೆಲ ಸರ್ಕಾರಿ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ತಿರುಚಲಾಗುತ್ತಿದೆ ಎಂದು ಕೆಮರೂನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬ್ರಿಟಿಷ್ ಸರ್ಕಾರ ಕೆಲವೇ ವಾರದಲ್ಲಿ ಈ ಎಲ್ಲ ತಾಣಗಳ ಮೇಲೆ ಕ್ರಮ ತೆಗೆದುಕೊಳ್ಳಲಿದೆ . ಮೂರು ಸೇವೆಗಳ ನಿಷೇಧ ಹತ್ತಿರವಾಗುತ್ತಿದೆ ಎಂದು 'ದಿ ಡೈಲಿ' ತನ್ನ ವರದಿಯಲ್ಲಿ ಹೇಳಿದೆ.[ಹುಚ್ಚುತನದ ಪರಮಾವಧಿ, ವಾಟ್ಸಪ್ ಗ್ರೂಪ್ ಕಥೆ ನೋಡಿ]

ಜನರಿಗೆ ಹಾನಿ ಮಾಡುವ ವಿಚಾರಗಳನ್ನು, ಸಂವಹನಕ್ಕೆ ಅಡ್ಡಿ ಮಾಡುವ ಸಂಗತಿಗಳನ್ನು ಹಂಚುವ ಮಾಧ್ಯಮಗಳ ಅಗತ್ಯ ದೇಶಕ್ಕೆ ಇಲ್ಲ ಎಂದು ಕ್ಯಾಮರೂನ್ ಸ್ಪಷ್ಟವಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+