ಟರ್ಕಿಯಲ್ಲಿ ಜನಪ್ರಿಯ ಗಾಯಕ ಒಮರ್ ಸೌಲೇಮಾನ್ ಬಂಧನ
ಕುರ್ದಿಷ್ ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಅಂತಾರಾಷ್ಟ್ರೀಯವಾಗಿ ಜನಪ್ರಿಯವಾಗಿರುವ ಸಿರಿಯನ್ ಗಾಯಕ ಮತ್ತು ಡಿಜೆ ಒಮರ್ ಸೌಲೇಮಾನ್ ಅವರನ್ನು ಟರ್ಕಿಯ ಪೊಲೀಸರುಬಂಧಿಸಿದ್ದಾರೆ ಎಂದು ಅವರ ಮ್ಯಾನೇಜರ್ ಫ್ರೆಂಚ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ದಕ್ಷಿಣ ಟರ್ಕಿಶ್ ನಗರವಾದ ಸ್ಯಾನ್ಲಿಯುರ್ಫಾದ ಅಧಿಕಾರಿಗಳು ಸೌಲೇಮನ್ ಅವರನ್ನು ಕುರ್ದಿಷ್ ವರ್ಕರ್ಸ್ ಪಾರ್ಟಿ (ಪಿಕೆಕೆ) ಸದಸ್ಯರಾಗಿದ್ದರು ಎಂಬ ಆರೋಪದ ಮೇಲೆ ವಿಚಾರಣೆಗೆ ಕರೆತಂದಿದ್ದಾರೆ.
ಸೌಲೇಮಾನ್ ಬಂಧಿಸಿದ್ದು ಏಕೆ?
"ಸಶಸ್ತ್ರ ಭಯೋತ್ಪಾದಕ ಸಂಘಟನೆಯ ಸದಸ್ಯ" ಎಂಬ ಆರೋಪದ ಮೇಲೆ ಸಾನ್ಲಿಯುರ್ಫಾ ಭದ್ರತಾ ಪಡೆಗಳು ಸೌಲೇಮಾನ್ ಅವರ ಮನೆಯ ಮೇಲೆ ದಾಳಿ ನಡೆಸಿದ್ದಲ್ಲದೆ, ಕರಾಕೋಪ್ರು ನೆರೆಹೊರೆಯಲ್ಲಿದ್ದ ಗಾಯಕ ಒಮರ್ ಅವರನ್ನು ಬಂಧಿಸಿವೆ ಎಂದು ಟರ್ಕಿಶ್ ಮಾಧ್ಯಮ ವರದಿ ಮಾಡಿದೆ.
ಆರೋಗ್ಯ ತಪಾಸಣೆಯ ನಂತರ, 55 ವರ್ಷದ ವ್ಯಕ್ತಿಯನ್ನು ವಿಚಾರಣೆಗಾಗಿ ಕೇಂದ್ರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

"ಇಸ್ಲಾಮಿಕ್ ಸ್ಟೇಟ್" (ಐಎಸ್) ದಂಗೆಕೋರರ ವಿರುದ್ಧದ ಹೋರಾಟದಲ್ಲಿ ಯುಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಪಿಕೆಕೆ ಆಫ್‌ಶೂಟ್ ಗ್ರೂಪ್ ವೈಪಿಜಿಯಿಂದ ನಿಯಂತ್ರಿಸಲ್ಪಡುವ ಸಿರಿಯಾದ ಪ್ರದೇಶಕ್ಕೆ ಅವರು ಪ್ರಯಾಣಿಸಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಪರಿಶೀಲಿಸಿದ ಬಳಿಕ ಈ ಬಂಧನವಾಗಿದೆ.
ಗಾಯಕ ಒಮರ್ ಅವರ ಮ್ಯಾನೇಜರ್, AFP ಜೊತೆ ಮಾತನಾಡಿ, ವಿಚಾರಣೆ ಬಳಿಕ ಸೌಲೇಮಾನ್ ಅವರನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದರು.
ಕಳೆದ ಒಂದು ದಶಕದಲ್ಲಿ ಭಯೋತ್ಪಾದಕ ಆರೋಪದ ಮೇಲೆ ದೇಶಾದ್ಯಂತ ಸಾವಿರಾರು ಜನರನ್ನು ಅಧಿಕಾರಿಗಳು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಪೈಕಿ ಜೈಲು ಸೇರಿರುವ ಮಹಾದಾನಿ ಎನಿಸಿಕೊಂಡಿರುವ ಒಸ್ಮಾನ್ ಕವಾಲಾರನ್ನು ಮುಕ್ತಗೊಳಿಸಲು ಯತ್ನಿಸಲಾಗುತ್ತಿದೆ. ಯೂರೋಪಿಯನ್ ಯೂನಿಯನ್ ಕಡೆಯಿಂದ ಅನೇಕ ಕರೆಗಳ ಹೊರತಾಗಿಯೂ ಕವಾಲಾ ಅವರನ್ನು ಹೊರಕ್ಕೆ ಕಳಿಸಿಲ್ಲ.
PKK ಅನ್ನು ಭಯೋತ್ಪಾದಕ ಗುಂಪು ಎಂದು ಟರ್ಕಿ, ಯುಎಸ್ ಮತ್ತು ಯೂರೋಪಿಯನ್ ಯೂನಿಯನ್ ಪರಿಗಣಿಸುತ್ತವೆ, ಟರ್ಕಿಯ ಆಡಳಿತ ವಿರುದ್ಧ ದಂಗೆಯು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ.
ಓಮರ್ ಸೌಲೇಮಾನ್ ಯಾರು?
ಅರೇಬಿಕ್ ಮತ್ತು ಕುರ್ದಿಷ್ ಭಾಷೆಗಳಲ್ಲಿ ತನ್ನ ಹಾಡುಗಳನ್ನು ಹಾಡುವ ಓಮರ್ ಸೌಲೇಮನ್ ಮೂಲತಃ ಸಿರಿಯನ್. ಆದರೆ 2011 ರಲ್ಲಿ ದೇಶದ ಅಂತರ್ಯುದ್ಧದಿಂದ ಪಾರಾಗಿ, ತನ್ನ ತಾಯ್ನಾಡಿನ ಗಡಿಯ ಸಮೀಪದಲ್ಲಿರುವ ಸ್ಯಾನ್ಲಿಯುರ್ಫಾದಲ್ಲಿ ತನ್ನದೇ ಆದ ಬೇಕರಿಯನ್ನು ಸ್ಥಾಪಿಸಿ ನೆಲೆಸಿದ್ದಾರೆ.

ಓಸ್ಲೋದಲ್ಲಿ 2013 ರ ನೊಬೆಲ್ ಶಾಂತಿ ಪ್ರಶಸ್ತಿ ಸಮಾರಂಭದಲ್ಲಿ ಪ್ರದರ್ಶನ ನೀಡಿದ ಅವರು ನೃತ್ಯ ಮತ್ತು ಹಾಲೆ ಜಾನಪದ ಸಂಗೀತದ ವಿಶಿಷ್ಟ ಮಿಶ್ರಣಕ್ಕಾಗಿ ಖ್ಯಾತಿಯನ್ನು ಪಡೆದಿದ್ದಾರೆ.
Recommended Video
ಸೌಲೇಮನ್ ಐಸ್ಲ್ಯಾಂಡಿಕ್ ಬ್ಜಾರ್ಕ್ ಮತ್ತು ಬ್ರಿಟಿಷ್ ರಾಕ್ ಬ್ಯಾಂಡ್ ಬ್ಲರ್ ಫ್ರಂಟ್‌ಮ್ಯಾನ್ ಡ್ಯಾಮನ್ ಅಲ್ಬಾರ್ನ್‌ನೊಂದಿಗೆ ಧ್ವನಿಮುದ್ರಣ ಮಾಡಿದ್ದಾರೆ. ಇದಲ್ಲದೆ ಇಂಗ್ಲೆಂಡಿನ ಗ್ಲಾಸ್ಟನ್‌ಬರಿ ಉತ್ಸವದಲ್ಲಿ ಪ್ರದರ್ಶನ ನೀಡಿದ್ದಾರೆ.
2013 ರ "ವಾರ್ನಿ ವಾರ್ನಿ" ಹಾಡಿನ ಅಧಿಕೃತ ವೀಡಿಯೊ ಯೂಟ್ಯೂಬಿನಲ್ಲಿ 94 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. Original Article by John Culatto, edited by Farah Bahgat












Click it and Unblock the Notifications