Get Updates
Get notified of breaking news, exclusive insights, and must-see stories!

ಪ್ಯಾಲೆಸ್ತೀನ್ ನಲ್ಲಿ ರಾಯಭಾರ ಕಚೇರಿ ಆರಂಭಿಸಲು ಒಮನ್ ನಿರ್ಧಾರ

ಪ್ಯಾಲೆಸ್ತೀನ್ ಜನರ ಬೆಂಬಲಕ್ಕಾಗಿ ಆ ಭಾಗದಲ್ಲಿ ರಾಯಭಾರ ಕಚೇರಿ ತೆರೆಯಲು ಒಮನ್ ಬುಧವಾರ ನಿರ್ಧರಿಸಿದೆ. ಈ ನಿರ್ಧಾರ ಕೈಗೊಂಡ ಮೊದಲ ಗಲ್ಫ್ ಅರಬ್ ರಾಷ್ಟ್ರ ಒಮನ್. ಪ್ಯಾಲೆಸ್ತೀನ್ ಜನರಿಗೆ ಬೆಂಬಲ ಸೂಚಿಸುವ ಸಲುವಾಗಿ ಒಮನ್ ನ ಸುಲ್ತಾನ್ ರಾಯಭಾರ ಮಟ್ಟದಲ್ಲಿ ರಾಜತಾಂತ್ರಿಕ ನಡೆಯನ್ನು ಇರಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಟ್ವಿಟ್ಟರ್ ನಲ್ಲಿ ಹೇಳಿದೆ.

ವಿದೇಶಾಂಗ ಸಚಿವಾಲಯದ ನಿಯೋಗವು ರಮಲ್ಲಾಗೆ ಪ್ರಯಾಣಿಸಲಿದೆ. ಒಮನ್ ನಿಂದ ರಾಯಭಾರ ಕಚೇರಿ ಆರಂಭ ಪ್ಯಾಲೆಸ್ತೀನ್ ಅಧಿಕಾರಿಗಳು ಕೂಡ ಅಗತ್ಯ್ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಒಮನ್ ನ ಈ ಘೋಷಣೆಯನ್ನು ಬಹಳ ಜಾಗ್ರತೆಯಿಂದ ಪ್ಯಾಲೆಸ್ತೀನ್ ನ ಹಿರಿಯ ಅಧಿಕಾರಿಗಳು ಸ್ವಾಗತಿಸಿದ್ದಾರೆ.

ಈ ರೀತಿ ರಾಯಭಾರ ಕಚೇರಿ ಆರಂಭಿಸುವುದರ ಹಿಂದೆ ರಾಜಕಾರಣದ ಉದ್ದೇಶ ಇದ್ದರೆ ಅದರ ಬಿಸಿ ಅನುಭವಿಸಬೇಕಾಗುತ್ತದೆ ಎಂದು ಪ್ಯಾಲೆಸ್ತೀನ್ ನ ಪತ್ರಕರ್ತೆ ಹನನ್ ಅಶ್ರಾವಿ ಎಚ್ಚರಿಕೆ ನೀಡಿದ್ದಾರೆ. ಅರಬ್ ರಾಷ್ಟ್ರಗಳ ಪೈಕಿ ಈಜಿಪ್ಟ್ ಹಾಗೂ ಜೋರ್ಡಾನ್ ಮಾತ್ರ ಈ ಪ್ರದೇಶದ ಜತೆ ರಾಜತಾಂತ್ರಿಕ ಸಂಬಂಧ ಹೊಂದಿವೆ.

Oman decided to start embassy in Palestinian territory

ಆದರೆ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನು ದೇಶಕ್ಕೆ ಸ್ವಾಗತಿಸಿದ ಮೊದಲ ಗಲ್ಫ್ ದೇಶ ಒಮನ್. ಕಳೆದ ವರ್ಷ ಅಕ್ಟೋಬರ್ ನಲ್ಲಿ ನೆತಾನ್ಯಾಹು ಒಮನ್ ಗೆ ಭೇಟಿ ನೀಡಿದ್ದರು. ಪ್ಯಾಲೆಸ್ತೀನಿಯನ್ ರ ಆರ್ಥಿಕ ಸ್ಥಿತಿ ವೃದ್ಧಿ ಮಾಡಲು ಅನುಕೂಲ ಆಗುವಂತೆ ಐವತ್ತು ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಗೆ ಹಣ ಸಂಗ್ರಹಿಸಲು ಡೊನ್ಲ್ಡ್ ಟ್ರಂಪ್ ಆಡಳಿತ ಬಹರೇನ್ ನಲ್ಲಿ ಕಾರ್ಯಾಗಾರ ಆಯೋಜಿಸಿದ್ದು, ಅದರಲ್ಲಿ ಒಮನ್ ಭಾಗವಹಿಸಿಲ್ಲ.

ಈ ಸಮಾವೇಶವನ್ನು ಪ್ಯಾಲೆಸ್ತೀನ್ ಅಧಿಕಾರಿಗಳು ಬಹಿಷ್ಕರಿಸಿದ್ದಾರೆ. ಅಮೆರಿಕ ಈ ರೀತಿ ಹಣದ ಆಸೆ ತೋರಿಸಿ, ಇಸ್ರೇಲಿ ಪರವಾದ ರಾಜಕೀಯ ಪರಿಹಾರ ಹೇರಲು ಮುಂದಾಗಬಹುದು ಎಂಬ ಆತಂಕ ಪ್ಯಾಲೆಸ್ತೀನಿಯರದು. ಆದರೆ ಟ್ರಂಪ್ ನ ಅಳಿಯ ಈ ಸಮಾವೇಶವನ್ನು, ಶತಮಾನದ ಅವಕಾಶ ಎಂದು ಕರೆದಿದ್ದಾರೆ.

ಒಮನ್ ನ ವಿದೇಶಾಂಗ ಖಾತೆ ಸಚಿವ ಯುಸೂಫ್ ಬಿನ್ ಅಲವಿ ಬಿನ್ ಅಬ್ದುಲ್ಲಾ ಅವರು ಕಳೆದ ವರ್ಷ ಪ್ಯಾಲೆಸ್ತೀನಿಯನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಜತೆ ರಮಲ್ಲಾದಲ್ಲಿ ಮಾತುಕತೆ ನಡೆಸಿದ್ದರು. ಜತೆಗೆ ಇಸ್ರೇಲಿಗೆ ಸೇರಿರುವ ಪೂರ್ವ ಜೆರುಸಲೇಂನಲ್ಲಿ ಇರುವ ಅಲ್-ಅಕ್ಸಾ ಮಸೀದಿ ಸಮುಚ್ಚಯಕ್ಕೆ ಭೇಟಿ ನೀಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+