ಜನಾರ್ದನ ರೆಡ್ಡಿಯವರ ಮಾಡೆಲ್ ಹೌಸ್ ಗೆ ಬೆಂಕಿ: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ
ಬೆಂಗಳೂರು: ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಯವರ ಮಾಡೆಲ್ ಹೌಸ್ ಗೆ ಬೆಂಕಿ ಹಾಕುವ ಕೆಲಸ ನಡೆದಿದೆ. ಕಾಂಗ್ರೆಸ್ಸಿನ ದುರಾಡಳಿತ ಇನ್ನೂ ಯಾವ ಮಟ್ಟಕ್ಕೆ ಹೋಗಿದೆ ಎಂಬುದು ಈಗ ಗೊತ್ತಾಗುತ್ತಿದೆ. ಇವರೇ ಇವರ ಕಾರ್ಯಕರ್ತನನ್ನು ಕೊಲೆ ಮಾಡಿ, ಸರಕಾರದ ಹಣ 25 ಲಕ್ಷ ನಗದು ಕೊಟ್ಟಿದ್ದಾರೆ. ನಗದಾಗಿ ಹಣ ಕೊಡಲು ಆಗುವುದಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಗದು ಕೊಡುವುದಾದರೆ, ಅದಕ್ಕೆ ಲೆಕ್ಕ ಇರಬೇಕು; ಆದಾಯ ತೆರಿಗೆ ಪಾವತಿ ಮಾಡಿರಬೇಕು. ಸರಕಾರದ ಹಣ ನೀವು ಚೆಕ್ ಮೂಲಕವೇ ಕೊಡಬೇಕಿತ್ತು ಎಂದು ತಿಳಿಸಿದರು. ನಾನು ಗೋಲ್ಡನ್ ಸ್ಪೂನ್ ಜೊತೆ ಹುಟ್ಟಿದ್ದಾಗಿ ಹೇಳುವ ಶಾಸಕ, ಅವನ ಕಡೆಯಿಂದ ಹಣ ಕೊಡಿಸಬೇಕಿತ್ತು ಎಂದು ಆಗ್ರಹಿಸಿದರು. ಕೊಲೆ ಮಾಡಿದ ಅವರನ್ನೇ ಬಂಧಿಸಬೇಕಿತ್ತು. ಇವತ್ತಿನ ವರೆಗೆ ಬಂಧಿಸಿಲ್ಲ ಎಂದು ಆಕ್ಷೇಪಿಸಿದರು.

ನಿಮ್ಮ ಪೊಲೀಸ್ ಇಲಾಖೆ ಏನು ಕಡುಬು ತಿನ್ನುತ್ತಿದೆಯೇ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರಕಾರವು ಪೊಲೀಸ್ ಇಲಾಖೆಯನ್ನು ನಿರ್ಲಿಪ್ತ ಮಾಡಿದೆ ಎಂದು ಟೀಕಿಸಿದರು. ಇದನ್ನು ಹೇಳಲು ಬಹಳ ನೋವಾಗುತ್ತದೆ. ನಮಗೂ ಕೂಡ ಸಿಟ್ಟು ಬರುತ್ತದೆ. ಆದರೆ, ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಜೀವ ಸಮೇತ ನಿಮ್ಮನ್ನು ಸುಡುತ್ತೇನೆ. ಮನೆ ಸುಡುತ್ತೇನೆ ಎಂದಿದ್ದರು. ಈಗ ಮನೆ ಸುಟ್ಟಾಯಿತಲ್ಲವೇ? ಎಂದು ಕೇಳಿದರು. ಅವರು ಇರುವ ಮನೆ ಸುಡಲು ಆಗಿಲ್ಲ; ಬೇರೊಂದು ಮನೆ ಸುಟ್ಟಿದ್ದಾರೆ ಎಂದು ಆಕ್ಷೇಪಿಸಿದರು. ಹೇಳಿಕೆ ಕೊಟ್ಟು ಮನೆ ಸುಟ್ಟಿದ್ದಾರೆ. ಈಗ ಏನು ಮಾಡುತ್ತೀರಿ ಮಾನ್ಯ ಮುಖ್ಯಮಂತ್ರಿಗಳೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಮುಖ್ಯಮಂತ್ರಿಗಳೇ ನಿಮ್ಮ ದೇಹದಲ್ಲಿ ಸಮಾಜವಾದದ ರಕ್ತ ಹರಿಯುತ್ತಿದ್ದರೆ, ಸತ್ಯ, ಧರ್ಮ ಎತ್ತಿ ಹಿಡಿಯಬೇಕೆಂದಿದ್ದರೆ, ನಿಮಗೇನಾದರೂ ಮಾನವೀಯತೆ ಇನ್ನೂ ಉಳಿದಿದ್ದರೆ ಇವುಗಳ ಮೇಲೆ ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.
ಶಿಡ್ಲಘಟ್ಟದಲ್ಲಿ ಅಧಿಕಾರಿ ಮೇಲೆ ರಾಜೀವ್ ಗೌಡ ದರ್ಪ ಮಾಡಿದ್ದರು. ಕೋರ್ಟಲ್ಲಿ ಅವರ ಎಫ್‍ಐಆರ್ ವಜಾ ಮಾಡಿ ಎಂದು ಕೊಟ್ಟಾಗ ತಿರಸ್ಕಾರ ಆಗುವವರೆಗೆ ಕಾಯುತ್ತಿದ್ದಿರಿ. ನೀವು ಅವರನ್ನು ಉಚ್ಚಾಟನೆ ಮಾಡಿಲ್ಲ; ಕೇವಲ ಅವರನ್ನು ಅಮಾನತಿನಲ್ಲಿ ಇಟ್ಟಿದ್ದೀರಿ. ನೀವೇ ಅವರನ್ನು ರಕ್ಷಣೆ ಮಾಡುತ್ತಿದ್ದೀರೆಂದು ಎಲ್ಲ ಕಡೆ ಬರುತ್ತಿದೆ. ಬೇರೆಯವರನ್ನು ಒಂದೆರಡು ಗಂಟೆಯಲ್ಲೇ ಹಿಡಿದುಕೊಂಡು ಬರುತ್ತೀರಿ. ಏನೂ ಮಾಡದೇ ಇದ್ದವರನ್ನೂ ಜೈಲಲ್ಲಿ ಇಡುತ್ತೀರಿ ಎಂದು ಆಕ್ಷೇಪಿಸಿದರು.
ಇವರು ನಿಮ್ಮ ಕಾರ್ಯಕರ್ತರಾಗಿದ್ದು, ಹಿರಿಯ ಸಚಿವರ ಪತ್ನಿಯ ಜೊತೆ ಸದಾ ಸಂಪರ್ಕದಲ್ಲಿದ್ದಾರೆ. ಅವರಿಗೆ ಸಂದೇಶ ಕೊಡುತ್ತಿದ್ದಾರೆ. ರಕ್ಷಿಸುತ್ತಿದ್ದಾರೆಂದು ಎಲ್ಲ ಕಡೆ ಮಾತನಾಡುತ್ತಿದ್ದಾರೆ ಎಂದು ಗಮನ ಸೆಳೆದರು. ಇದು ಮಾಧ್ಯಮಗಳಲ್ಲೂ ಬರುತ್ತಿದೆ. ನೀವು ಅದೆಂಥ ನೀಚಗೆಟ್ಟ ಸರಕಾರ ನಡೆಸುತ್ತ ಇದ್ದೀರಿ ಎಂದು ಪ್ರಶ್ನಿಸಿದರು.
ನೀವು ಸಂವಿಧಾನದ ರಕ್ಷಕರಲ್ಲ. ಭಕ್ಷಕರು ಎಂದು ವಾಗ್ದಾಳಿ ನಡೆಸಿದರು. ಡಾ. ಬಾಬಾ ಸಾಹೇಬ ಅಂಬೇಡ್ಕರರ ಹೆಸರು ಹೇಳುತ್ತ ಹೇಳುತ್ತ ಅವರಿಗೆ ಅಪಮಾನ ಮಾಡುವವರು ಎಂದು ಟೀಕಿಸಿದರು. ಗಾಂಧೀಜಿ ಅವರ ಹೆಸರನ್ನು ಹೇಳಿ ಹೇಳಿ ಅವರನ್ನು ಮತಬ್ಯಾಂಕಿಗಾಗಿ ಬಳಸಿಕೊಂಡಿದ್ದಾರೆ. ಇವರೆಲ್ಲರನ್ನೂ ಸಮಾಧಿ ಮಾಡಿದ ಸಂಸ್ಕೃತಿ ಕಾಂಗ್ರೆಸ್ಸಿನದು ಎಂದು ದೂರಿದರು. ರಾಜೀವ್ ಗೌಡನನ್ನು ಕೆ.ಎಚ್.ಮುನಿಯಪ್ಪ ರಕ್ಷಿಸುತ್ತಿರುವುದಾಗಿ ಕೆಲವರು ನನಗೆ ಫೋನ್ ಮಾಡಿ ಹೇಳಿದ್ದಾರೆ. ನನಗೆ ಅದು ಗೊತ್ತಿಲ್ಲ. ಹೌದೇ ಇಲ್ಲವೇ ಎಂದು ಸರಕಾರ ಹೇಳಲಿ ಎಂದು ಆಗ್ರಹಿಸಿದರು.
ಜಿಬಿಎ ಚುನಾವಣೆ ಹತ್ತಿರ ಬರುತ್ತಿದೆ. ಬೆಂಗಳೂರು ಸುತ್ತ 3ರಿಂದ 4 ಲಕ್ಷ ರೋಹಿಂಗ್ಯಾ ಮತದಾರರು ಮತ್ತು ಬಾಂಗ್ಲಾ ದೇಶೀಯರು ಇದ್ದಾರೆ ಎಂದು ಗಮನ ಸೆಳೆದರು. ಎಸ್‍ಐಆರ್ ಆಗಬೇಕಿದೆ ಎಂದು ಒತ್ತಾಯಿಸಿದರು. ಇದರ ಕುರಿತು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೆವು. ಯಾರೂ ಉತ್ತರ ಕೊಟ್ಟಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇವತ್ತು ಕರ್ನಾಟಕವೇ ದೇಶದ ಮುಂದೆ ತಲೆತಗ್ಗಿಸುವ ಕೆಲಸವನ್ನು ರಾಜಶೇಖರ ಹಿಟ್ನಾಳ್ ಅವರು ಮಾಡಿದ್ದಾರೆ. ಮೊದಲು ಅವರು ಕ್ಷಮೆ ಕೇಳಬೇಕು. ಕರ್ನಾಟಕದ ಗೌರವ ಹರಾಜಾಗಿದೆ. ಕಾಂಗ್ರೆಸ್ ಪಕ್ಷ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದರು. ಅವರನ್ನು ಉಚ್ಚಾಟಿಸಿದರೆ ನಿಮ್ಮ ಪಕ್ಷ ಮಹಿಳೆಯರಿಗೆ ಗೌರವ ಕೊಡುತ್ತದೆ; ಇಂಥ ವಿಷಯದಲ್ಲಿ ಗಂಭೀರತೆ ಹೊಂದಿದೆ ಎಂದು ತಿಳಿಸಬಹುದು. ಇಲ್ಲವಾದರೆ, ನಿಮ್ಮ ಯೋಗ್ಯತೆ ಅಷ್ಟೇ ಎಂಬುದನ್ನು ನಾವು ಹೇಳಲೇಬೇಕಾಗುತ್ತದೆ ಎಂದರು.
-
ಬಜೆಟ್ನಲ್ಲಿ ಅನಿವಾಸಿ ಸಚಿವಾಲಯ ಘೋಷಣೆ ಇಲ್ಲ: ನಿರಾಶೆ ವ್ಯಕ್ತಪಡಿಸಿದ ಡಾ.ರೊನಾಲ್ಡ್ ಕೊಲಾಸೊ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು












Click it and Unblock the Notifications