Bangladesh Bus Tragedy: ನದಿಗೆ ಉರಳಿದ 50 ಪ್ರಯಾಣಿಕರಿದ್ದ ಬಸ್, ಹಲವರು ಸಾವು; ಎದೆ ನಡುಗಿಸೋ ವಿಡಿಯೋ
Bangladesh Bus Tragedy Video: ಬಾಂಗ್ಲಾದೇಶದ ದೌಲತ್ದಿಯಾ ಘಾಟ್‌ನಲ್ಲಿ ಹಡಗಿಗೆ ಹತ್ತಲು ಸಜ್ಜಾಗಿದ್ದ ಪ್ರಯಾಣಿಕರು ತುಂಬಿದ್ದ ಖಾಸಗಿ ಬಸ್ ನಿಯಂತ್ರಣ ಕಳೆದುಕೊಂಡು ಪದ್ಮಾ ನದಿಗೆ ಉರುಳಿ ಬಿದ್ದ ಘಟನೆ ಘಾಟ್ ಸಂಖ್ಯೆ 3ರಲ್ಲಿ ಬುಧವಾರ ಸಂಜೆ ಜರುಗಿದೆ. ಬಸ್‌ನಲ್ಲಿ ಸುಮಾರು 40-50 ಮಂದಿ ಇದ್ದರು, ಅವಘಡದಲ್ಲಿ ಸುಮಾರು 20ಕ್ಕು ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಡಾಕಾಗೆ ಹೋಗುವ ಹಡಗಿನ ಮೇಲೆ ಬಸ್ ಹತ್ತುವುದರಲ್ಲಿತ್ತು. ಅದಕ್ಕೂ ಮೊದಲೇ ನಿಯಂತ್ರಣ ಕಳೆದುಕೊಂಡು ಸುಮಾರು 30 ಅಡಿ ಆಳದ ಪದ್ಮಾ ನದಿಗೆ ಬಿದ್ದಿದೆ. ಸುಮಾರು 35 ಪ್ರಯಾಣಿಕರು ಕಾಣೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸುಮಾರು ಎರಡು ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಬಸ್ ನದಿಗೆ ಉರುಳಿ ಬೀಳುತ್ತಿದ್ದಂತೆ ಹಡಗಿನಲ್ಲಿದ್ದವರು, ಸ್ಥಳದಲ್ಲಿದ್ದ ಸಾರ್ವಜನಿಕರು ಚೀರಾಡಿದ್ದಾರೆ. ವಿಧಿ ಆಟಕ್ಕೆ ಹಿಡಿಶಾಪ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಂಥವರನ್ನು ಒಂದು ಕ್ಷಣ ದಂಗಾಗಿಸುವಂತಿದೆ.

ಈಜಿ ಜೀವ ಉಳಿಸಿಕೊಂಡ ಕೆಲವರು
ಬಸ್ ನೀರಿಗೆ ಬೀಳುತ್ತಿದ್ದಂತೆ ಕಿಟಕಿ ಪಕ್ಕ ಕೂತ ಕೆಲವು ಪ್ರಯಾಣಿಕರು ಮುಳುಗಿದ ಬಸ್‌ನಿಂದ ಮೇಲಕ್ಕೆ ಬಂದು ಈಜಿದ್ದಾರೆ. ಅವರನ್ನು ಕಂಡ ಸಾರ್ವಜನಿಕರು ಟವೆಲ್, ಹಗ್ಗ ನೀಡಿ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಈ ಭಯಾನಕ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬಹುತೇಕ ಪ್ರಯಾಣಿಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಹಡಗಿನಲ್ಲಿ ಕೆಲವು ವಾಹನಗಳು ಇದ್ದವು. ಅವುಗಳ ದಡಕ್ಕೆ ಇಳಿದು ಮುಂದೆ ಸಾಗಿದ ನಂತರ ತೀರದಲ್ಲಿದ್ದ ಸದರಿ ಬಸ್ ಸೇರಿ ಇತರ ವಾಹನಗಳು ಹಡಗು ಏರುವುದಿತ್ತು. ಈ ನಿಂತ ಬಸ್‌ಗೆ ಹಿಂದಿನಿಂದ ಮತ್ತೊಂದು ವಾಹನ ಅಥವಾ ಹಡಗು ಡಿಕ್ಕಿ ಹೊಡೆದಿದ್ದಕ್ಕೆ ಬಸ್ ವೇಗವಾಗಿ ಮುಂದೆ ಚಲಿಸಿದೆ. ಮುಂದೆ ಸಾಕಷ್ಟು ಜಾಗ ಇಲ್ಲದ ಕಾರಣ, ಬಸ್ ನಿಯಂತ್ರಣಕ್ಕೆ ಬಾರದ ನದಿಗೆ ಉರುಳಿ ಬಿದ್ದಿದೆ ಎಂಬ ಮಾಹಿತಿ ಇದ್ದು, ತನಿಖೆಯಿಂದ ಪ್ರಕರಣದ ಸತ್ಯಾಂಶ ತಿಳಿದು ಬರಬೇಕಿದೆ.
ವಿಷಯ ತಿಳಿದು ಸ್ಥಳೀಯ ಪೊಲೀಸರು, ರಕ್ಷಣಾ ತಂಡಗಳು ಸ್ಥಳಕ್ಕಾಗಮಿಸಿ ತ್ವರಿತ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ, ನದಿ ಪೊಲೀಸರು ಮತ್ತು ಪಾಂಟೂನ್ ಅಧಿಕಾರಿಗಳ ಚಾಲಕರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ರಕ್ಷಣಾ ಹಡಗನ್ನು ಸಹ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಢಾಕಾ ಮತ್ತು ಹತ್ತಿರದ ಪ್ರದೇಶಗಳಿಂದ ಹೆಚ್ಚುವರಿ ಡೈವಿಂಗ್ ತಂಡಗಳನ್ನು ಸಹಾಯಕ್ಕಾಗಿ ಕಳುಹಿಸಲಾಗುತ್ತಿದೆ.
ಸ್ಥಳದಲ್ಲಿ ಕುಟುಂಬಸ್ಥರ ಕಣ್ಣೀರು
ಮುಳುಗಿದ ಬಸ್ ನೀರಿನ ಅಡಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಇಲ್ಲಿಯವರೆಗೆ, ಕೆಲವೇ ಪ್ರಯಾಣಿಕರನ್ನು ಮಾತ್ರ ಜೀವಂತವಾಗಿ ರಕ್ಷಿಸಲಾಗಿದೆ, ಆದರೆ ಉಳಿದ ಪ್ರಯಾಣಿಕರ ಭವಿಷ್ಯ ಅನಿಶ್ಚಿತವಾಗಿದೆ. ಪ್ರಯಾಣಿಕರ ಕುಟುಂಬಸ್ಥರು ಸ್ಥಳದಲ್ಲಿ ಕಣ್ಣೀರಿಡುತ್ತಿದ್ದಾರೆ. ಇಂತಹ ದೋಣಿ ಟರ್ಮಿನಲ್‌ಗಳಲ್ಲಿ, ದೇಶದ ಜಲ ಸಾರಿಗೆ ಮಾರ್ಗಗಳಲ್ಲಿ ಜನನಿಬಿಡ ದೌಲತ್ಡಿಯಾ ಘಾಟು ಒಂದಾಗಿದ್ದು, ಇಲ್ಲಿನ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ದಾಟುವಿಕೆಯಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಹೊಸ ಕಳವಳ ಸೃಷ್ಟಿಸಿದೆ.
At least 35 passengers are missing after a bus plunged into the Padma River at Daulatdia Ghat, Bangladesh; two bodies have been recovered so far as rescue operations continue.
— Lord Immy Kant (@KantInEastt) March 25, 2026
People live like cockroaches and die like cockroaches
pic.twitter.com/kq6pxbfvrs












Click it and Unblock the Notifications