• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತರ ಗೋಳಾರ್ಧದಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರ

By Dw News
|

2021ರ ಮೊದಲ ಸೂರ್ಯಗ್ರಹಣ ಜೂನ್ 10ರಂದು ಸಂಭವಿಸಲಿದ್ದು, ಈಗಾಗಲೇ ಉತ್ತರ ಗೋಳಾರ್ಧದಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರವಾಗಿದೆ.

ಗುರುವಾರ ಯುರೋಪ್ ಭಾಗಗಳಲ್ಲಿ, ರಷ್ಯಾ ಒಳಗೊಂಡು ಉತ್ತರ ಅಮೆರಿಕ ಹಾಗೂ ಏಷ್ಯಾದಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರವಾಗಿರುವುದಾಗಿ ತಿಳಿದುಬಂದಿದೆ.

ಅಲ್ಲದೇ ಉತ್ತರ ಕೆನಡಾ,ಗ್ರೀನ್‌ಲ್ಯಾಂಡ್‌ ಮತ್ತು ರಷ್ಯಾದಲ್ಲಿ ಪೂರ್ಣ ಸೂರ್ಯಗ್ರಹಣವನ್ನು ಕಾಣಬಹುದು. ಭಾರತದಲ್ಲಿ ಕೂಡಾ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ. ಆದರೆ ಭಾರತದ ಕೆಲವೆಡೆ ಮಾತ್ರ ಈ ಗ್ರಹಣ ಗೋಚರವಾಗಲಿದೆ ಎಂದು ತಿಳಿದುಬಂದಿದೆ.


ಹಲವೆಡೆ ವೀಕ್ಷಕರು ಭಾಗಶಃ ಮಾತ್ರ ಗ್ರಹಣ ನೋಡಬಹುದಾಗಿದೆ. timeanddate.com ವೆಬ್‌ಸೈಟ್ ಮೂಲಕ ಈ ಗ್ರಹಣದ ಮಾಹಿತಿ ಪಡೆಯಬಹುದಾಗಿದೆ.

ಕೆನಡಾದ ಒಂಟಾರಿಯೋದಿಂದ ಬಾಫಿನ್ ದ್ವೀಪ ಹಾಗೂ ಗ್ರೀನ್‌ಲ್ಯಾಂಡ್‌ನ ವಾಯವ್ಯದ ತುದಿಗೆ, ಪೂರ್ವ ರಷ್ಯಾದಲ್ಲಿ ಪೂರ್ಣ ಗ್ರಹಣವನ್ನು ನೋಡಬಹುದಾಗಿದೆ. ಅಲ್ಲಿಯೂ ಕೂಡ ಗ್ರಹಣ ಸಂಪೂರ್ಣವಾಗಿ ಗೋಚರಿಸುವುದಿಲ್ಲ. ಚಂದ್ರನು ಭೂಮಿಯಿಂದ ತನ್ನ ಕಕ್ಷೆಯಲ್ಲಿ ಒಂದು ಹಂತದಲ್ಲಿ ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುವನು. ಈ ಸಮಯ ಪ್ರಕಾಶಮಾನವಾದ ಉಂಗುರ ಕಾಣಿಸಿಕೊಳ್ಳಲಿದೆ.

ಉತ್ತರ ಅಟ್ಲಾಂಟಿಕದಲ್ಲಿ 8.12 (UTC/GMT) ಸಮಯದಲ್ಲಿ ಗ್ರಹಣ ಕಾಣಿಸಿಕೊಳ್ಳಲಿದೆ. ಪಶ್ಚಿಮ ಚೀನಾದಲ್ಲಿ 13.11 (UTC/GMT)ಗೆ ಕೊನೆಗೊಳ್ಳಲಿದೆ.

ಗ್ರಹಣದ ಸಂದರ್ಭದಲ್ಲಿ ಸೂರ್ಯನನ್ನು ನೇರವಾಗಿ ನೋಡಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸನ್‌ ಗ್ಲಾಸ್‌ಗಳು ಕೂಡ ಸಾಕಷ್ಟು ರಕ್ಷಣೆ ನೀಡಲಾರವು. ಹೀಗಾಗಿ ವಿಶೇಷ ಗ್ಲಾಸ್‌ಗಳ ಮೂಲಕ ಗ್ರಹಣ ನೋಡಬಹುದಾಗಿದೆ.

English summary
Much of the Earth's northern hemisphere is set to experience a partial solar eclipse, as the Moon appears to cover the Sun. In some places, the eclipse will be almost complete, with only a ring of solar light visible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X