ದಕ್ಷಿಣ ಮತ್ತು ಉತ್ತರ ಕೊರಿಯಾ ನಾಯಕರ ಅಚ್ಚರಿಯ ಮುಖಾಮುಖಿ
ಸಿಯೋಲ್, ಮೇ 26: ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾದ ನಾಯಕರು ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ. ಈ ಬಾರಿ ಅಚ್ಚರಿಯ ರೀತಿಯಲ್ಲಿ ಭೇಟಿಯಾಗಿದ್ದು, ಎರಡೂ ದೇಶಗಳ ನಡುವೆ ಎಲ್ಲವೂ ಸರಿ ಇದೆ ಎಂಬ ಸಂದೇಶ ರವಾನಿಸಿದ್ದಾರೆ.
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಎರಡೂ ದೇಶದ ಮಧ್ಯದಲ್ಲಿರುವ ಗಡಿ ಭಾಗದಲ್ಲಿ ಭೇಟಿಯಾಗಿದ್ದಾರೆ.
ಕಳೆದ ಕೆಲವು ತಿಂಗಳ ಹಿಂದೆ ಎರಡೂ ದೇಶಗಳ ನಡುವೆ ಐತಿಹಾಸಿಕ ಭೇಟಿ ನಡೆದಿತ್ತು. ಇದಾದ ಬಳಿಕ ಇಂದು ಎರಡನೇ ಬಾರಿಗೆ ಭೇಟಿ ನಡೆದಿದೆ.

ಅಮೆರಿಕಾ ಮತ್ತು ಉತ್ತರ ಕೊರಿಯಾದ ನಡುವೆ ಐತಿಹಾಸಿಕ ಶೃಂಗಸಭೆ ಜೂನ್ 12ರಂದು ಸಿಂಗಾಪುರದಲ್ಲಿ ನಿಗದಿಯಾಗಿತ್ತು. ಆದರೆ ಈ ಶೃಂಗಸಭೆಯನ್ನು ರದ್ದುಗೊಳಿಸುವ ರೀತಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ರ ಬರೆದಿದ್ದರು.
ನಂತರ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದ್ದ ಟ್ರಂಪ್ ಈ ಸಭೆ ರದ್ದಾಗಲ್ಲ, ಮುಂದೂಡಿಕೆಯಾಗಬಹುದು ಎಂದಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಈ ಶೃಂಗಸಭೆ ರದ್ದಾಗದಂತೆ ಎಚ್ಚರವಹಿಸಲು ಉಭಯ ದೇಶದ ನಾಯಕರು ಭೇಟಿಯಾಗಿದ್ದಾರೆ.
ಈ ಭೇಟಿಯಿಂದ ಕಿಮ್ ಭೇಟಿಯಾಗಲು ಟ್ರಂಪ್ ಮನಸ್ಸು ಮಾಡುತ್ತಾರಾ ಕಾದು ನೊಡಬೇಕಿದೆ.












Click it and Unblock the Notifications