ವದಂತಿಗಳು ಹೆಚ್ಚಾದರೂ, ಉತ್ತರ ಕೊರಿಯಾದ ಮೀಡಿಯಾ ಮಾತ್ರ ಗಪ್ ಚುಪ್.!

ಪ್ಯೋಗ್ಯಾಂಗ್, ಏಪ್ರಿಲ್ 22: ಉತ್ತರ ಕೊರಿಯಾದ ಸುಪ್ರೀಂ ಲೀಡರ್ ಕಿಮ್ ಜಾಂಗ್ ಉನ್ ಅನಾರೋಗ್ಯದ ಬಗ್ಗೆ ಕೇಳಿಬರುತ್ತಿರುವ ವದಂತಿಗಳು ಒಂದೆರಡಲ್ಲ. ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಮೇರಿಕಾದ ಅಧಿಕಾರಿಯೊಬ್ಬರು ತಿಳಿಸಿದ್ದರು.

ಈ ನಡುವೆ ಶಸ್ತ್ರಚಿಕಿತ್ಸೆ ಬಳಿಕ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬ್ರೇನ್ ಡೆಡ್ ಆಗಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಇಷ್ಟೆಲ್ಲಾ ಇದ್ದರೂ, ಉತ್ತರ ಕೊರಿಯಾದ ಮಾಧ್ಯಮಗಳು ಮಾತ್ರ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ತಮ್ಮ ನಾಯಕ ಕಿಮ್ ಜಾಂಗ್ ಉನ್ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡುವ ಕೆಲಸವನ್ನೂ ಮಾಡುತ್ತಿಲ್ಲ.

ಸುಪ್ರೀಂ ಲೀಡರ್ ಪತ್ತೆನೇ ಇಲ್ಲ.!

ಸುಪ್ರೀಂ ಲೀಡರ್ ಪತ್ತೆನೇ ಇಲ್ಲ.!

''ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ'' ಎಂಬ ವರದಿಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದರೂ, ಉತ್ತರ ಕೊರಿಯಾದ ಮಾಧ್ಯಮಗಳಲ್ಲಿ ಕಿಮ್ ಜಾಂಗ್ ಉನ್ ಪ್ರತ್ಯಕ್ಷವಾಗಿಲ್ಲ. ಅವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನೂ ಅಲ್ಲಿನ ಮೀಡಿಯಾ ನೀಡಿಲ್ಲ.

ಉತ್ತರ ಕೊರಿಯಾದಲ್ಲಿ ಮಾಧ್ಯಮಗಳಿಗೆ ಸ್ವಾತಂತ್ರ್ಯ ಇಲ್ಲ.!

ಉತ್ತರ ಕೊರಿಯಾದಲ್ಲಿ ಮಾಧ್ಯಮಗಳಿಗೆ ಸ್ವಾತಂತ್ರ್ಯ ಇಲ್ಲ.!

ಅಷ್ಟಕ್ಕೂ, ಉತ್ತರ ಕೊರಿಯಾದಲ್ಲಿ ಮಾಧ್ಯಮಗಳಿಗೆ ಸ್ವಾತಂತ್ರ್ಯವೇ ಇಲ್ಲ. ಯಾವ ವಿಚಾರವನ್ನು ಹೇಗೆ ಸುದ್ದಿ ಮಾಡಬೇಕು ಎಂಬುದನ್ನ ಅಲ್ಲಿನ ಅಧ್ಯಕ್ಷರ ಕಛೇರಿ ನಿರ್ಧಾರ ಮಾಡುತ್ತದೆ. ಸುದ್ದಿಗಳ ಮೇಲೆ ಸಂಪೂರ್ಣ ಹಿಡಿತ ಹೊಂದಿರುವ ಉತ್ತರ ಕೊರಿಯಾದಲ್ಲಿ ಅನುಮತಿ ಇಲ್ಲದೆ ಕಿಮ್ ಜಾಂಗ್ ಉನ್ ಬಗ್ಗೆಯಾಗಲಿ ಅಥವಾ ಅವರ ಕುಟುಂಬದ ಬಗ್ಗೆಯಾಗಲಿ ಸುದ್ದಿ ಪ್ರಸಾರ ಮಾಡುವ ಹಾಗೇ ಇಲ್ಲ.

ಸದ್ಯಕ್ಕೆ ಪ್ರಸಾರ ಆಗುತ್ತಿರುವ ಸುದ್ದಿಗಳು ಯಾವುವು.?

ಸದ್ಯಕ್ಕೆ ಪ್ರಸಾರ ಆಗುತ್ತಿರುವ ಸುದ್ದಿಗಳು ಯಾವುವು.?

ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿನಲ್ಲಿ ಸದ್ಯ ಕ್ರೀಡಾ ಉಪಕರಣಗಳು, ಮಲ್ಬೆರಿ ಆರಿಸುವುದು ಮತ್ತು ಬಾಂಗ್ಲಾದೇಶದ ಸಭೆ ಬಗ್ಗೆ ವರದಿ ಆಗುತ್ತಿವೆ. ಇನ್ನು ಅಧಿಕೃತ ರೊಡಾಂಗ್ ಸಿನ್ ಮುನ್ ದಿನಪತ್ರಿಕೆಯಲ್ಲಿ ಆರ್ಥಿಕತೆ ಮತ್ತು ಕೊರೊನಾ ವೈರಸ್ ತಡೆಯುವ ಕ್ರಮಗಳ ಬಗ್ಗೆ ವರದಿ ಮಾಡಲಾಗಿದೆ.

ಗುಪ್ತಚರ ಮಾಹಿತಿಯೂ ಕಷ್ಟ ಕಷ್ಟ.!

ಗುಪ್ತಚರ ಮಾಹಿತಿಯೂ ಕಷ್ಟ ಕಷ್ಟ.!

ಉತ್ತರ ಕೊರಿಯಾದಲ್ಲಿ ಕಿಮ್ ಜಾಂಗ್ ಉನ್ ಸಾಕ್ಷಾತ್ ದೇವರು ಇದ್ದ ಹಾಗೆ. ಕಿಮ್ ಜಾಂಗ್ ಉನ್ ವಿರುದ್ಧ ಅಲ್ಲಿ ಯಾರೂ ಉಸಿರು ಬಿಡುವಂತಿಲ್ಲ. ಉತ್ತರ ಕೊರಿಯಾದಿಂದ ಗುಪ್ತಚರ ಮಾಹಿತಿ ಕಲೆ ಹಾಕುವುದು ಕಷ್ಟ ಕಷ್ಟ. ಹೀಗಾಗಿ ಕಿಮ್ ಜಾಂಗ್ ಉನ್ ಆರೋಗ್ಯದ ಬಗ್ಗೆ ನಿಖರ ಮಾಹಿತಿ ಯಾರಿಗೂ ಲಭ್ಯವಾಗುತ್ತಿಲ್ಲ.

ಏನೂ ಗೊತ್ತಿಲ್ಲ ಎಂದ ಡೊನಾಲ್ಡ್ ಟ್ರಂಪ್

ಏನೂ ಗೊತ್ತಿಲ್ಲ ಎಂದ ಡೊನಾಲ್ಡ್ ಟ್ರಂಪ್

''ಕಿಮ್ ಜಾಂಗ್ ಉನ್ ಆರೋಗ್ಯವಾಗಿರಲಿ ಎಂದು ಆಶಿಸುತ್ತೇನೆ. ರಾಷ್ಟ್ರಕ್ಕಾಗಿ ನಮ್ಮಿಬ್ಬರ ಮಧ್ಯೆ ಉತ್ತಮ ಬಾಂಧವ್ಯ ಇತ್ತು. ಅವರ ಆರೋಗ್ಯದ ಬಗ್ಗೆ ಪ್ರಕಟವಾಗಿರುವ ವರದಿಗಳು ಸತ್ಯವೇ ಎಂಬುದು ನಮಗೆ ಗೊತ್ತಿಲ್ಲ'' ಅಂತ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಓಡಾಡಿಕೊಂಡಿದ್ದಾರೆ ಎಂದ ದಕ್ಷಿಣ ಕೊರಿಯಾ ಅಧ್ಯಕ್ಷ

ಓಡಾಡಿಕೊಂಡಿದ್ದಾರೆ ಎಂದ ದಕ್ಷಿಣ ಕೊರಿಯಾ ಅಧ್ಯಕ್ಷ

''ಉತ್ತರ ಕೊರಿಯಾದ ಗ್ರಾಮೀಣ ಪ್ರದೇಶದಲ್ಲಿ ಕಿಮ್ ಜಾಂಗ್ ಉನ್ ಮಾಮೂಲಿಯಾಗಿ ಓಡಾಡಿಕೊಂಡಿದ್ದಾರೆ'' ಎಂದು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ ಇನ್ ಹೇಳಿದ್ದಾರೆ.

ಅನಾರೋಗ್ಯದ ಬಗ್ಗೆ ವರದಿ

ಅನಾರೋಗ್ಯದ ಬಗ್ಗೆ ವರದಿ

ಏಪ್ರಿಲ್ 12 ರಂದು ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಕಿಮ್ ಜಾಂಗ್ ಉನ್ ಒಳಗಾಗಿದ್ದರು. ಅತಿಯಾದ ಧೂಮಪಾನ ಮತ್ತು ಬೊಜ್ಜಿನಿಂದಾಗಿ ಅವರಿಗೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಸದ್ಯ ಹ್ಯಾಂಗ್ ಸಾನ್ ಕೌಂಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡೈಲಿ ಎನ್.ಕೆ ಆನ್ ಲೈನ್ ಪತ್ರಿಕೆ ವರದಿ ಮಾಡಿತ್ತು. ಉತ್ತರ ಕೊರಿಯಾದ ಮಾಧ್ಯಮಗಳ ಮುಂದೆ ಕಿಮ್ ಜಾಂಗ್ ಉನ್ ಕೊನೆಯದಾಗಿ ಪ್ರತ್ಯಕ್ಷವಾಗಿದ್ದು ಏಪ್ರಿಲ್ 11 ರಂದು. ಏಪ್ರಿಲ್ 15 ರಂದು ಅವರ ಅಜ್ಜ ನ ಜನ್ಮದಿನಾಚರಣೆಯಿದ್ದರೂ, ಕಿಂಗ್ ಜಾಂಗ್ ಉನ್ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಕಿಮ್ ಜಾಂಗ್ ಉನ್ ಅನಾರೋಗ್ಯದ ಬಗ್ಗೆ ವದಂತಿಗಳು ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+