'ಶತಮಾನದ ಭೇಟಿ': ಉತ್ತರ ಕೊರಿಯಾ ಮಾಧ್ಯಮ ಶ್ಲಾಘನೆ

ಸೋಲ್, ಜೂನ್ 13: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಯನ್ನು ಶ್ಲಾಘಿಸಿರುವ ಉತ್ತರ ಕೊರಿಯಾದ ಮಾಧ್ಯಮಗಳು, ಇದು ಶತಮಾನದ ಭೇಟಿ ಎಂದು ಬಣ್ಣಿಸಿವೆ.

ಅಮೆರಿಕದೊಂದಿಗಿನ ಹಗೆತನದ ಸಂಬಂಧ ಅಂತ್ಯಗೊಳ್ಳುತ್ತಿದ್ದು, ಈ ಸಭೆಯು ತಮ್ಮ ನಾಯಕನ ರಾಜತಾಂತ್ರಿಕ ಗೆಲುವು ಎಂದು ಅಲ್ಲಿನ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ವಿಶ್ಲೇಷಿಸಿವೆ.

ಆಡಳಿತಾರೂಢ ವರ್ಕರ್ಸ್ ಪಾರ್ಟಿಯ ಪತ್ರಿಕೆ 'ರೊಡೊಂಗ್ ಸಿನ್‌ಮುನ್' ಟ್ರಂಪ್ ಮತ್ತು ಕಿಮ್ ಪರಸ್ಪರ ಆತ್ಮೀಯತೆಯಿಂದ ಕೈಕುಲುಕುತ್ತಿರುವ ಚಿತ್ರವನ್ನು ಪ್ರಕಟಿಸಿದೆ.

north korean media hails kim-trump meeting

ಸರ್ಕಾರ ಸ್ವಾಮ್ಯದ ಪತ್ರಿಕೆ ಕೆಸಿಎನ್‌ಎ ಇದು 'ಯುಗದ ಸೃಷ್ಟಿ'. ಉತ್ತರ ಕೊರಿಯಾದ ದೊಡ್ಡ ಶತ್ರು ಅಮೆರಿಕದೊಂದಿಗಿನ ಸಂಬಂಧವನ್ನು ಬಹುದೊಡ್ಡ ಪ್ರಮಾಣದಲ್ಲಿ ಬದಲಿಸಲು ಇದು ನೆರವಾಗಲಿದೆ ಎಂದು ಹೇಳಿದೆ.

ಕೊರಿಯಾ ದ್ವೀಪದಲ್ಲಿ ಶಾಂತಿ ಮತ್ತು ಸ್ಥಿರತೆಯ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದು ಕಿಮ್ ಅವರನ್ನು ಪತ್ರಿಕೆ ಪ್ರಶಂಸಿಸಿದೆ.

ಇತಿಹಾಸದಲ್ಲಿ ದೀರ್ಘಕಾಲ ಉಳಿದಿರುವ ಈ ದಿನದ ಗಳಿಗೆಯನ್ನು ನೋಡಲು ಸ್ವದೇಶದ ಮತ್ತು ವಿದೇಶದ ಸಾವಿರಾರು ಪತ್ರಕರ್ತರು ಹಾಗೂ ಬೃಹತ್ ಜನಸಮೂಹಕ್ಕೆ ಅವಕಾಶ ಮಾಡಿಕೊಟ್ಟು ಹೊಸ ಯುಗ ನಿರ್ಮಾಣದ ಮಹತ್ವದ ಸಭೆಗೆ ಸಿಂಗಪುರ ನೆಲೆ ನೀಡಿತ್ತು ಎಂದು ಕೆಸಿಎನ್‌ಎ ಹೇಳಿದೆ.

ಟ್ರಂಪ್ ಮತ್ತು ಕಿಮ್ ಅವರು ಪರಸ್ಪರ ದೇಶಗಳಿಗೆ ಭೇಟಿ ನೀಡುವ ಆಹ್ವಾನಗಳನ್ನು ಒಪ್ಪಿಕೊಂಡಿದ್ದಾರೆ. ಕಿಮ್ ಅವರು ತಮಗೆ ಹೊಂದಾಣಿಕೆಯಾದ ಸಮಯದಲ್ಲಿ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಟ್ರಂಪ್ ಅವರು ಉತ್ತರ ಕೊರಿಯಾಕ್ಕೆ ಬರಲಿದ್ದಾರೆ.

ಉಭಯ ನಾಯಕರು ಪರಸ್ಪರರ ಆಮಂತ್ರಣವನ್ನು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಈ ಎರಡೂ ದೇಶಗಳ ನಡುವಣ ಸಂಬಂಧವನ್ನು ಸುಧಾರಿಸಲು ಇವು ಮತ್ತೆ ಮಹತ್ವದ ಗಳಿಗೆಯಾಗಲಿವೆ ಎಂದು ಅದು ಬಣ್ಣಿಸಿದೆ.

ಉತ್ತರ ಕೊರಿಯಾ ಹಾಗೂ ಅಮೆರಿಕದ ಪ್ರಮುಖ ಪತ್ರಿಕೆಗಳು ಟ್ರಂಪ್ ಮತ್ತು ಕಿಮ್ ಅವರ ಭೇಟಿ ಕುರಿತ ಚಿತ್ರ ಮತ್ತು ವರದಿಗಳಿಗಾಗಿ ವಿಶೇಷ ಪುಟಗಳನ್ನು ಮೀಸಲಿರಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+