ಸರ್ವಾಧಿಕಾರಿ ಅಧ್ಯಕ್ಷನಿಂದ ಚಿಕ್ಕಪ್ಪನ ಕ್ರೂರ ಹತ್ಯೆ!

'ಉ.ಕೊ. ಸರ್ವಾಧಿಕಾರಿ ಕಿಮ್ ಜಾಂಗ್ ಏನು ಮಾಡಿದ್ದನೆಂದರೆ ತನ್ನ ಚಿಕ್ಕಪ್ಪನನ್ನು ನಗ್ನಗೊಳಿಸಿ 120ಕ್ಕೂ ಹೆಚ್ಚು ನಾಯಿಗಳಿಂದ ತುಂಬಿದ್ದ ಬೋನಿಗೆ ಎಸೆದಿದ್ದನಂತೆ. 3 ದಿನಗಳಿಂದ ಹಸಿದಿದ್ದ ನಾಯಿಗಳು ಸುಮಾರು ಒಂದು ಗಂಟೆ ಕಾಲ 67 ವರ್ಷದ ಜಾಂಗ್ ಸಾಂಗ್ ಥೇಕ್ ಮತ್ತು ಆತನ 5 ಸಹಚರರನ್ನು ತಿಂದವಂತೆ. ಮತ್ತು ಆ ಒಂದು ಗಂಟೆಯೂ ಸ್ವತಃ ಕಿಮ್ ಜಾಂಗ್ ಇಡೀ ಪ್ರಕ್ರಿಯೆಯನ್ನು ಕಣ್ಣಾರೆ ನೋಡಿ ಅನುಭವಿಸಿದ್ದ. ಜತೆಗೆ, 300 ಅಧಿಕಾರಿಗಳು ಅವರಿಗೆ ಸಾಥ್ ನೀಡಿದ್ದರು' ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ರಾಜದ್ರೋಹದ ಶಿಕ್ಷೆಗೆ ಗುರಿಯಾದವರನ್ನು ಮಷಿನ್ ಗನ್ನಿನಿಂದ ಗುಂಡಿಕ್ಕಿ ಕೊಲ್ಲುವುದು ಉತ್ತರ ಕೊರಿಯಾದ ವಾಡಿಕೆ. ಆದರೆ ಈ ರೀತಿ ಶ್ವಾನಗಳಿಗೆ ಆಹಾರವಾಗಿ ನೀಡಿ ಬರ್ಬರ ಹತ್ಯೆ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ.
ಅಂದಹಾಗೆ, ರಾಜದ್ರೋಹ ಸೇರಿದಂತೆ ಅನೇಕ ಆರೋಪಗಳನ್ನು ಹೊರಿಸಿ ಕಳೆದ ವರ್ಷ ಡಿಸೆಂಬರ್ 12ರಂದು ಜಾಂಗ್ ಸಾಂಗ್ ಮತ್ತು ಅವರ 5 ಸಹಚರರನ್ನು ಹತ್ಯೆ ಮಾಡಲಾಗಿತ್ತು. ಅವರನ್ನು ಹೇಗೆ ಹತ್ಯೆ ಮಾಡಲಾಯಿತು ಎಂಬುದನ್ನು ಹಾಂಕಾಂಗ್ ಮೂಲದ ಚೀನಾ ಪತ್ರಿಕೆ 'the Straits Times' ವರದಿ ಮಾಡಿದೆ.












Click it and Unblock the Notifications