ಸಮುದ್ರದ ನಡುವೆಯೇ 16 ಮಂದಿ ಸಹೋದ್ಯೋಗಿಯನ್ನು ಕೊಂದ ಮೀನುಗಾರರು
ಸಿಯೋಲ್, ನವೆಂಬರ್ 7: ತಮ್ಮ ಜತೆಗಾರ 16 ಮೀನುಗಾರರನ್ನು ಕೊಂದು ಪರಾರಿಯಾಗಿದ್ದ ಇಬ್ಬರನ್ನು ದಕ್ಷಿಣ ಕೊರಿಯಾ ಪೊಲೀಸರು ಉತ್ತರ ಕೊರಿಯಾಕ್ಕೆ ಮರಳಿ ಒಪ್ಪಿಸಿದ್ದಾರೆ.
ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಸಮುದ್ರ ಗಡಿಯಲ್ಲಿ ಮೀನುಗಾರರ ಹಡಗು ಸಾಗುವ ವೇಳೆ ಇಬ್ಬರು ಮೀನುಗಾರರು ಮ್ಮ 16 ಸಹೋದ್ಯೋಗಿಗಳನ್ನು ಹತ್ಯೆ ಮಾಡಿ ದಕ್ಷಿಣ ಕೊರಿಯಾಕ್ಕೆ ಪರಾರಿಯಾಗಿದ್ದರು ಎನ್ನಲಾಗಿದೆ.
ಸಾಮಾನ್ಯವಾಗಿ ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡು ಬಂದು ರಾಜಕೀಯ ಆಶ್ರಯ ಕೋರಿದವರಿಗೆ ದಕ್ಷಿಣ ಕೊರಿಯಾ ಆಶ್ರಯ ನೀಡುತ್ತದೆ. ಆದರೆ ಈ ಪ್ರಕರಣದಲ್ಲಿ ಇಬ್ಬರು ದೇಶಭ್ರಷ್ಟರಾಗಿ ತಮ್ಮ ನೆಲಕ್ಕೆ ಬಂದಿಲ್ಲ. ಅವರು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿರುವವರು. ಹೀಗಾಗಿ ಅವರನ್ನು ಅಪರಾಧಿಗಳು ಎಂದು ಪರಿಗಣಿಸಿ ಉತ್ತರ ಕೊರಿಯಾಕ್ಕೆ ಮರಳಿ ಕಳುಹಿಸಲಾಗಿದೆ ಎಂದು ದಕ್ಷಿಣ ಕೊರಿಯಾ ತಿಳಿಸಿದೆ.

ಮೀನುಗಾರಿಕೆಯ ದೋಣಿಯ ಮೂಲಕ ಗಡಿದಾಟಿ ಬಂದಿದ್ದ ಅವರನ್ನು ಎರಡು ದಿನಗಳ ಬಳಿಕ ದಕ್ಷಿಣ ಕೊರಿಯಾ ನೌಕಾಪಡೆ ವಶಕ್ಕೆ ಪಡೆದುಕೊಂಡಿತ್ತು. ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ ಕಾರಣ ತಮ್ಮ ದೋಣಿಯ ನಾಯಕನನ್ನು ಮತ್ತೊಬ್ಬನೊಂದಿಗೆ ಸೇರಿ ಕೊಲೆ ಮಾಡಿದ್ದಾಗಿ ಇಬ್ಬರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.
ಆ ಕೊಲೆಗೆ ವಿರೋಧ ವ್ಯಕ್ತಪಡಿಸಿದ ಒಬ್ಬೊಬ್ಬರನ್ನೇ ಬಳಿಕ ಕೊಲೆ ಮಾಡಿದ್ದರು. ಅವರ ದೇಹಗಳನ್ನು ಸಮುದ್ರಕ್ಕೆ ಎಸೆದಿದ್ದರು. ಮೂವರು ಕೊಲೆಗಾರರಲ್ಲಿ ಒಬ್ಬ ಆರಂಭದಲ್ಲಿಯೇ ಉತ್ತರ ಕೊರಿಯಾಕ್ಕೆ ಮರಳಿದ್ದರೆ, ಉಳಿದಿಬ್ಬರು ದಕ್ಷಿಣ ಕೊರಿಯಾಕ್ಕೆ ಪರಾರಿಯಾಗಲು ನಿರ್ಧರಿಸಿದ್ದರು.












Click it and Unblock the Notifications