North Korea: ಮತ್ತೊಂದು ಮಿಸೈಲ್ ಹಾರಿಸಿದ ಸರ್ವಾಧಿಕಾರಿ!

ಪ್ಯೊಂಗ್ಯಾಂಗ್: ಅಮೆರಿಕದ ವಿರುದ್ಧ ರೊಚ್ಚಿಗೆದ್ದಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾನೆ. ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಭದ್ರತಾ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ ಮರುದಿನವೇ ಉತ್ತರ ಕೊರಿಯಾ ಶಾಕ್ ಕೊಟ್ಟಿದೆ. ಅಷ್ಟಕ್ಕೂ ಕಿಮ್ ಜಾಂಗ್ ಉನ್ ಈಗ ಪರೀಕ್ಷಿಸಿರುವ ಕ್ಷಿಪಣಿ ಎಂತಹದ್ದು ಗೊತ್ತಾ? ಬನ್ನಿ ತಿಳಿಯೋಣ.

ಉತ್ತರ ಕೊರಿಯಾ ಬಳಿ ನೂರಾರು ಕ್ಷಿಪಣಿಗಳು ಇದ್ದು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತನ್ನ ಶತ್ರುಗಳ ವಿರುದ್ಧ ತೊಡೆತಟ್ಟಿದ್ದಾನೆ. ಈಗಲೂ ಅಷ್ಟೇ ಮತ್ತೆರಡು ಮಿಸೈಲ್ ಹಾರಿಸಿ ನಡುಕ ಹುಟ್ಟಿಸಿದ್ದಾನೆ. ಇಂದು ಪೂರ್ವ ಸಮುದ್ರಕ್ಕೆ 2 ಖಂಡಾಂತರ ಕ್ಷಿಪಣಿ ಉಡಾಯಿಸಿದೆ ಉತ್ತರ ಕೊರಿಯಾ. ಯೋನ್‌ಹಾಪ್‌ ಸುದ್ದಿಸಂಸ್ಥೆ ಈ ವರದಿ ಮಾಡಿದ್ದು, ಉತ್ತರ ಕೊರಿಯಾ ರಾಜಧಾನಿ ಪ್ಯೊಂಗ್ಯಾಂಗ್ ಬಳಿಯ ಸುನಾನ್‌ನಿಂದ ಇಂದು ಬೆಳಗಿನ ಜಾವ 3.30 & 3.46ಕ್ಕೆ ಸರಿಯಾಗಿ ಈ ಕ್ಷಿಪಣಿ ಉಡಾಯಿಸಿ ಪರೀಕ್ಷೆ ನಡೆಸಲಾಗಿದೆ. ಈ ಮೂಲಕ ನಾನು ಎಲ್ಲವನ್ನ ನೋಡುತ್ತಿದ್ದೇನೆ ಎಂಬ ಸಂದೇಶ ಕೊಟ್ಟಿದ್ದಾನೆ ಸರ್ವಾಧಿಕಾರಿ.

North Korea tested 2 new missile to answer South Korea

ರೊಚ್ಚಿಗೆದ್ದ ದಕ್ಷಿಣ ಕೊರಿಯಾ!

ಸಹಜವಾಗಿ ತನ್ನ ಶತ್ರು ರಾಷ್ಟ್ರ ಹೊಸ ಮಿಸೈಲ್ ಪರೀಕ್ಷೆ ನಡೆಸಿದಾಗ ಏನು ಮಾಡಬೇಕು ಅದನ್ನೇ ದಕ್ಷಿಣ ಕೊರಿಯಾ ಮಾಡಿದೆ. ಉತ್ತರ ಕೊರಿಯಾ ನಡೆಯನ್ನ ಕಟುವಾಗಿ ಖಂಡಿಸಿದ ದಕ್ಷಿಣ ಕೊರಿಯಾ, ಇದು ಪ್ರಚೋದನೆ ಎಂದು ಕರೆದಿದೆ. ಅಲ್ಲದೆ ಉತ್ತರ ಕೊರಿಯಾದ ನಡೆ ಜಾಗತಿಕ ಮಟ್ಟದಲ್ಲಿ ಶಾಂತಿ ಕದಡುವ ಜೊತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಗಳ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿದೆ ದಕ್ಷಿಣ ಕೊರಿಯಾ. ಹಾಗೆಯೇ ಉತ್ತರ ಕೊರಿಯಾ ಪ್ರಚೋದನೆಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನ ಹೊಂದಿದ್ದೇವೆ, ಎನ್ನುವ ಮೂಲಕ ಮೊದಲೇ ಹೊತ್ತಿದ್ದ ಬೆಂಕಿಗೆ ದಕ್ಷಿಣ ಕೊರಿಯಾ ತುಪ್ಪ ಸುರಿದಿದೆ. ಅಮೆರಿಕ ಈ ವಿಚಾರವಾಗಿ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ಜಪಾನ್ ಕೂಡ ಈ ಘಟನೆಯಿಂದ ಕಸಿವಿಸಿಗೊಂಡಿದೆ.

ಮೊನ್ನೆ ಮೊನ್ನೆಯಷ್ಟೆ ಮಿಸೈಲ್ ಪರೀಕ್ಷೆ!

ಕಿಮ್ ಜಾಂಗ್ ಉನ್ ಮೊನ್ನೆ ಮೊನ್ನೆಯಷ್ಟೇ ಹೊಸ ಕ್ಷಿಪಣಿಯ ಪ್ರಯೋಗ ನಡೆಸಿದ್ದ. ಕ್ಷಿಪಣಿ ಹೇಗಿತ್ತು ಅಂದ್ರೆ ಅಮೆರಿಕದ ಪ್ರಮುಖ ನಗರಗಳ ಮೇಲೆಯೂ ಕ್ಷಣಮಾತ್ರದಲ್ಲಿ ದಾಳಿ ಮಾಡುವ ಸಾಮರ್ಥ್ಯ ಹೊಂದಿತ್ತು. ಯುರೋಪ್ ದೇಶಗಳಿಗೂ ಹೊಸ ಕ್ಷಿಪಣಿಯ ಭಯ ಶುರುವಾಗಿತ್ತು. ಈ ಘಟನೆ ನಡೆದು ಕೆಲವು ದಿನ ಕಳೆಯುವ ಒಳಗಾಗಿ ಮತ್ತೆ 2 ಕ್ಷಿಪಣಿ ಹಾರಿಸಿದೆ ಉತ್ತರ ಕೊರಿಯಾ. ಸಾವಿರಾರು ಕಿಲೋ ಮೀಟರ್ ದೂರದ ಗುರಿಯನ್ನ ಅತಿ ವೇಗವಾಗಿ ತಲುಪಿ ನಾಶ ಮಾಡಬಲ್ಲ ಶಕ್ತಿ ಹೊಸ ಕ್ಷಿಪಣಿಗೆ ಇದೆ. ಆದರೆ ಇದರ ಸಾಮರ್ಥ್ಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ.

North Korea tested 2 new missile to answer South Korea

ಮಿಸೈಲ್ ಸಕ್ಸಸ್, ಉಪಗ್ರಹ ಫ್ಲಾಪ್!

1 ವರ್ಷದಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಸಮುದ್ರಕ್ಕೆ ಉಡಾಯಿಸಿರುವ ಉತ್ತರ ಕೊರಿಯಾ ಸರ್ವಾಧಿಕಾರಿ, 3 ತಿಂಗಳ ಹಿಂದಷ್ಟೇ ತನ್ನ ದೇಶದ ಮೊದಲ ಮಿಲಿಟರಿ ಉಪಗ್ರಹ ಉಡಾವಣೆ ಬಗ್ಗೆ ಮಾಹಿತಿ ನೀಡಿದ್ದ. ಈ ಮೂಲಕ ತನ್ನ ಶತ್ರುಗಳಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುವ ಜೊತೆಗೆ, ತನ್ನ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ ಎಂದು ಉತ್ತರಿಸಿದ್ದ ಕಿಮ್. ಆದರೆ ಈ ಪ್ರಯೋಗ ವಿಫಲವಾಗಿ ಉತ್ತರ ಕೊರಿಯಾದ ಮಿಲಿಟರಿ ಉಪಗ್ರಹ ಸಮುದ್ರಕ್ಕೆ ಬಿದ್ದಿತ್ತು. ಈಗ ಹೊಸ ಕ್ಷಿಪಣಿ ಪ್ರಯೋಗ ಮೂಲಕ ಶತ್ರುಗಳ ವಿರುದ್ಧ ಕಿಮ್ ತೊಡೆತಟ್ಟಿದ್ದಾನೆ. ಜಸ್ಟ್ ಒಂದೇ ವಾರದಲ್ಲಿ ಬರೋಬ್ಬರಿ ಮೂರು ಕ್ಷಿಪಣಿಗಳನ್ನ ಪರೀಕ್ಷೆ ನಡೆಸಿದ್ದಾನೆ. ಈ ಮೂಲಕ ತನ್ನ ವಿರೋಧಿಗಳ ವಿರುದ್ಧ ಯುದ್ಧಕ್ಕೆ ಸನ್ನದ್ಧವಾಗಿದ್ದಾನೆ ಸರ್ವಾಧಿಕಾರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+