ಹ್ಹ.. ಹ್ಹ.. ಹ್ಹ.. ತಗೋಳಿ ಹೊಸ ಮಿಸೈಲ್ ಎಂದ ಕಿಮ್!

ಪ್ಯೊಂಗ್ಯಾಂಗ್: ರಾಮೇಶ್ವರಕ್ಕೆ ಹೋದರೂ ಶನೇಶ್ವರ ಬಿಡಲಿಲ್ಲ ಎಂಬಂತೆ ದಕ್ಷಿಣ ಕೊರಿಯಾ (south korea) ಪಾತಾಳಕ್ಕೆ ಹೋದರೂ ಕಿಮ್ ಕಾಟ ತಪ್ಪುವುದಿಲ್ಲ. ಈಗಾಗಲೇ ಶತ್ರು ನಾಶಕ್ಕೆ ಮಾರಿ ಪೂಜೆ ಮಾಡಿರುವಂತೆ ಕಾಣುತ್ತಿರುವ ಕಿಮ್ ಜಾಂಗ್ ಉನ್ (kim jong un), ಹೊಸದೊಂದು ಅಸ್ತ್ರ ಹಿಡಿದು ಬಂದು ಎಚ್ಚರಿಕೆ ನೀಡಿದ್ದಾನೆ. ಒಂದೇ ಏಟಿಗೆ ಶತ್ರುಗಳ ಸರ್ವನಾಶ ಪಕ್ಕಾ ಅನ್ನೋ ವಾರ್ನಿಂಗ್ ಕೂಡ ಸಿಕ್ಕಿದೆ.

ಉತ್ತರ ಕೊರಿಯಾ ಪ್ರತಿಕ್ಷಣ ತನ್ನಲ್ಲಿರುವ ಪರಮಾಣು ಅಸ್ತ್ರಗಳನ್ನು ಅಭಿವೃದ್ಧಿ ಮಾಡುವ ಬಗ್ಗೆಯೇ ಯೋಚಿಸುತ್ತಿದೆ. ಇದೇ ತಿಂಗಳು ಸುಮಾರು 3 ಹೊಸ ಮಾದರಿ, ಪರಮಾಣು ಸಾಮರ್ಥ್ಯದ ಕ್ಷಿಪಣಿಗಳನ್ನು ಪರೀಕ್ಷಿಸಿದೆ ಉತ್ತರ ಕೊರಿಯಾ. ಆದರೆ ಈಗ ಪರೀಕ್ಷೆ ಮಾಡಿರುವ ಖಂಡಾಂತರ ಕ್ಷಿಪಣಿ ಎಲ್ಲವನ್ನೂ ಸರ್ವನಾಶ ಮಾಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ. ಘನ-ಇಂಧನ ಬಳಸಿ ಉಡಾಯಿಸಬಲ್ಲ ಹೊಸ ಖಂಡಾಂತರ ಕ್ಷಿಪಣಿ (ICBM) ಅಮೆರಿಕ ಮಾತ್ರವಲ್ಲ ಉತ್ತರ ಕೊರಿಯಾ ಪಕ್ಕದ ಶತ್ರು ರಾಷ್ಟ್ರಗಳಾದ ದಕ್ಷಿಣ ಕೊರಿಯಾ ಮತ್ತು ಜಪಾನ್ ಬುಡಕ್ಕೂ ಬತ್ತಿ ಇಡುವುದು ಪಕ್ಕಾ.

North Koreas solid-fuel missile feared Japan and South Korea

ಅಮೆರಿಕ ಜೊತೆ ಸೇರಿ ದಕ್ಷಿಣ ಕೊರಿಯಾ ಜಂಟಿ ಸಮರಭ್ಯಾಸ ನಡೆಸಿದ ಬಳಿಕ ಕಿಮ್ ಜಾಂಗ್ ಉನ್ ಕೆರಳಿ ಕೆಂಡವಾಗಿದ್ದಾನೆ. ಇದಾದ ಮರುದಿನವೇ ದಕ್ಷಿಣ ಕೊರಿಯಾ ಜೊತೆಗೆ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಂಡಿದೆ ಉತ್ತರ ಕೊರಿಯಾ. ಈ ಮಧ್ಯೆ ಮತ್ತಷ್ಟು ಪರಮಾಣು ಕ್ಷಿಪಣಿ ಪರೀಕ್ಷೆಗೆ ಸಿದ್ಧರಾಗಿ ಎಂದು ಕಳೆದವಾರ ಕಿಮ್ ಆದೇಶ ನೀಡಿದ್ದ. ಹೀಗೆ ಕಿಮ್ ಆದೇಶ ನೀಡಿದ ಕೆಲವೇ ದಿನದಲ್ಲಿ ಒಟ್ಟು 2 ಪರಮಾಣು ಸಾಮರ್ಥ್ಯದ ಕ್ಷಿಪಣಿಗಳ ಪ್ರಯೋಗ ನಡೆದಿದೆ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಆದರೆ ಜಗತ್ತನ್ನೇ ಸರ್ವನಾಶ ಮಾಡಬಲ್ಲ ಕ್ಷಿಪಣಿ ಸಿದ್ಧಗೊಳಿಸಿದ್ದಾನೆ ಕಿಮ್.

ದಕ್ಷಿಣ ಕೊರಿಯಾ ತಪ್ಪು ಜಪಾನ್‌ಗೆ ಬರೆ!

ಅಂದಹಾಗೆ ತಪ್ಪು ಮಾಡಿರುವುದು ದಕ್ಷಿಣ ಕೊರಿಯಾ, ಆದರೆ ಪೆಟ್ಟು ಬೀಳುತ್ತಿರುವುದು ಮಾತ್ರ ಜಪಾನ್‌ಗೆ. ದಕ್ಷಿಣ ಕೊರಿಯಾ ಅಮೆರಿಕ ಜೊತೆ ಸೇರಿ ಮಿಲಿಟರಿ ಡ್ರಿಲ್ ನಡೆಸಿದ ನಂತರ ತನ್ನ ಸಿಟ್ಟನ್ನು ಮತ್ತೊಂದು ನೆರೆ ರಾಷ್ಟ್ರ ಜಪಾನ್ ಮೇಲೆ ತೋರಿಸುತ್ತಿದ್ದಾನೆ ಕಿಮ್. ಮಿಲಿಟರಿ ಸಾಮರ್ಥ್ಯದ ಮೂಲಕ ಎಚ್ಚರಿಕೆ ನೀಡುತ್ತಾ ಬಂದಿರುವ ಕಿಮ್ ಜಾಂಗ್ ಉನ್, ಇದೀಗ ಮತ್ತೊಂದು ಕ್ಷಿಪಣಿ ಪರೀಕ್ಷೆ ನಡೆಸಿ ಜಪಾನ್ ಎದೆ ನಡುಗುವಂತೆ ಮಾಡಿದ್ದ. ಕೆಲವೇ ದಿನಗಳ ಹಿಂದೆ ಕಿಮ್ ಸೇನೆ ಹಾರಿಸಿದ್ದ ಕ್ಷಿಪಣಿ ಜಪಾನ್‌ನ ದೊಡ್ಡ ನಗರವೊಂದರ ಮೇಲೆ ಬೀಳುವ ಪರಿಸ್ಥಿತಿ ನಿರ್ಮಾಣ ಆಗಿತ್ತು.

North Koreas solid-fuel missile feared Japan and South Korea

ಓಡಿ ಓಡಿ.. ಎಲ್ಲಾ ಓಡಿ!

ಕಳೆದ ವಾರ ಉತ್ತರ ಕೊರಿಯಾ ದಿಢೀರ್ ಪರಮಾಣು ಸಾಮರ್ಥ್ಯದ ಕ್ಷಿಪಣಿ ಉಡಾಯಿಸಿದ ಪರಿಣಾಮ ಜಪಾನ್ ಅಲರ್ಟ್ ಆಗಿತ್ತು. ಉ.ಕೊರಿಯಾ ಕ್ಷಿಪಣಿ ನೇರವಾಗಿ ಜಪಾನ್‌ನ ಹೊಕ್ಕೈಡೊ ಪ್ರದೇಶದ ಮೇಲೆ ಬೀಳುವ ಬಗ್ಗೆ ಮುನ್ಸೂಚನೆ ಸಿಕ್ಕಿತ್ತು. ಆಗ ಜಪಾನ್ ಸರ್ಕಾರ ತನ್ನ ಪ್ರಜೆಗಳಿಗೆ ತಕ್ಷಣ ಕಟ್ಟಡ ಅಥವಾ ಅಂಡರ್ ಪಾಸ್‌ ಒಳಗೆ ಓಡುವಂತೆ ತುರ್ತು ಸೂಚನೆ ನೀಡಿತ್ತು. ಹೀಗೆ ಜನರು ಭಯದಲ್ಲಿ ಓಡಿದ್ದರು ಕೂಡ. ಕೊನೆಗೆ ಯಾವುದೇ ಕ್ಷಿಪಣಿ ಜಪಾನ್ ಮೇಲೆ ಬಿದ್ದಿಲ್ಲ ಎನ್ನುವುದು ಕನ್ಫರ್ಮ್ ಆದ ನಂತರ ನಿಟ್ಟುಸಿರು ಬಿಟ್ಟರು. ಈ ಘಟನೆ ಜಪಾನ್ ಜನರ ಬೆವರಿಳಿಸಿದ ಬೆನ್ನಲ್ಲೇ ಮತ್ತೆ ಶಾಕ್ ಕೊಟ್ಟಿದ್ದಾನೆ ಕಿಮ್.

ಒಟ್ಟಾರೆ ಹೇಳುವುದಾದರೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಕೋಪ ತಣ್ಣಗಾಗುತ್ತಿಲ್ಲ. ಇದೇ ಹೊತ್ತಲ್ಲಿ ಬೇರೆ ಏನಾದರೂ ಕಿತಾಪತಿ ಮಾಡಿದರೆ ದಕ್ಷಿಣ ಕೊರಿಯಾಗೂ ಉಳಿಗಾಲ ಇಲ್ಲ. ಅಮೆರಿಕ ಕೂಡ ಕಿಮ್ ಪರೀಕ್ಷೆ ನಡೆಸುತ್ತಿರುವ ಪರಮಾಣು ಸಾಮರ್ಥ್ಯದ ಕ್ಷಿಪಣಿಗಳ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದೆ. ಮುಂದೆ ಈ ಎಲ್ಲಾ ಘಟನೆಗಳು ಅದೆಷ್ಟು ಘೋರ ಪರಿಸ್ಥಿತಿ ನಿರ್ಮಾಣ ಮಾಡಲಿದೆ ಎಂಬುದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+