ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರ ಸುದ್ದಿ ತಳ್ಳಿ ಹಾಕಿದ ಸರ್ಕಾರ

ವಾಷಿಂಗ್ಟನ್, ಏಪ್ರಿಲ್ 21: ಹೃದಯ ಶಸ್ತ್ರ ಚಿಕಿತ್ಸೆ ಬಳಿಕ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎನ್ನುವ ಸುದ್ದಿಯನ್ನು ಸರ್ಕಾರ ತಳ್ಳಿ ಹಾಕಿದೆ.

ಕಿಮ್ II ಸಂಗ್​ ಉತ್ತರ ಕೊರಿಯಾ ಪಿತಾಮಹ ಮತ್ತು ಕಿಮ್​ ಜಾಂಗ್​ ಉನ್​ ಅವರ ತಾತ. ಏ.15ರಂದು ಅವರ ಜನ್ಮದಿನ. ಹೀಗಾಗಿ ಇಡೀ ದೇಶಕ್ಕೆ ಸರ್ಕಾರಿ ರಜೆ. ಅಂದು ನಡೆದ ಅಜ್ಜನ ಜನ್ಮದಿನ ಆಚರಣೆಯಲ್ಲಿ ಕಿಮ್​ ಜಾಂಗ್​ ಉನ್​ ಪಾಲ್ಗೊಂಡಿರಲಿಲ್ಲ. ಹೀಗಾಗಿ, ಕಿಮ್​ ಆರೋಗ್ಯದ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿದ್ದವು.

ಕಿಮ್​ ಜಾಂಗ್​ ಏ. 12 ರಂದು ಸರ್ಕಾರಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ಮಾಧ್ಯಮದ ಎದುರು ಬಂದಿದ್ದರು. ನಂತರ ಅವರು ಈ ವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

2011ರಲ್ಲಿ ಕಿಮ್​ ಜಾಂಗ್​ II ಮೃತಪಟ್ಟಿದ್ದರು

2011ರಲ್ಲಿ ಕಿಮ್​ ಜಾಂಗ್​ II ಮೃತಪಟ್ಟಿದ್ದರು

ಅಂದಹಾಗೆ 2008ರಲ್ಲಿ ಉತ್ತರ ಕೊರಿಯಾ ಅಂದಿನ ಅಧ್ಯಕ್ಷ ಕಿಮ್​ ಜಾಂಗ್​ IIಗೆ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಅವರಿಗೆ ಸ್ಟ್ರೋಕ್ ಉಂಟಾಗಿದೆ ಎಂದು ಅಧಿಕಾರಿಗಳು ನಂತರ ತಿಳಿಸಿದ್ದರು. ದಿನ ಕಳೆದಂತೆ ಅವರ ಆರೋಗ್ಯ ಕ್ಷೀಣಿಸಿತ್ತು. 2011ರಲ್ಲಿ ಕಿಮ್​ ಜಾಂಗ್​ II ಮೃತಪಟ್ಟಿದ್ದರು.

2014ರಲ್ಲಿ ಮೊಣಕಾಲು ಶಸ್ತ್ರ ಚಿಕಿತ್ಸೆ

2014ರಲ್ಲಿ ಮೊಣಕಾಲು ಶಸ್ತ್ರ ಚಿಕಿತ್ಸೆ

2014ರಲ್ಲಿ ಒಂದು ತಿಂಗಳು ಕಿಮ್​ ಜಾಂಗ್​ ಉನ್​ ಕಾಣೆಯಾಗಿದ್ದರು. ನಂತರ ತಿಳಿದು ಬಂದಿದ್ದೇನೆಂದರೆ ಅವರು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರಂತೆ. ಆದರೆ, ಈ ಬಗ್ಗೆ ಯಾರೊಬ್ಬರೂ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಉತ್ತರ ಕೊರಿಯಾದಿಂದ ಮಾಹಿತಿ ಕಲೆ ಹಾಕುವುದು ಅಮೆರಿಕ ಗುಪ್ತಚರ ಇಲಾಖೆಗೆ ಇರುವ ದೊಡ್ಡ ಸವಾಲು.

ಕಿಮ್ ಆರೋಗ್ಯಕ್ಕೆ ಯಾವುದೇ ಸಮಸ್ಯೆಯಾಗಿಲ್ಲ

ಕಿಮ್ ಆರೋಗ್ಯಕ್ಕೆ ಯಾವುದೇ ಸಮಸ್ಯೆಯಾಗಿಲ್ಲ

ಕಿಮ್ ಅವರ ಆರೋಗ್ಯಕ್ಕೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಸರ್ಕಾರ ಹೇಳಿದೆ. ಕಿಮ್ ಚೈನ್ ಸ್ಮೋಕರ್ ಹಾಗಾಗಿ ಅವರಿಗೆ ಆರೋಗ್ಯ ಸಮಸ್ಯೆ ಮೊದಲಿನಿಂದಲೂ ಇತ್ತು ಎಂದು ಡೈಲಿ ಎನ್‌ಕೆ ವರದಿ ಮಾಡಿತ್ತು. ಆಗಸ್ಟ್ 2019ರಿಂದಲೂ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ವರದಿ ಮಾಡಿತ್ತು.

ಹೃದಯ ಶಸ್ತ್ರಚಿಕಿತ್ಸೆ ವರದಿಯನ್ನೂ ತಳ್ಳಿ ಹಾಕಿಲ್ಲ

ಹೃದಯ ಶಸ್ತ್ರಚಿಕಿತ್ಸೆ ವರದಿಯನ್ನೂ ತಳ್ಳಿ ಹಾಕಿಲ್ಲ

ಆದರೆ ಕೊರಿಯನ್ ಅಥವಾ ಚೈನೀಸ್ ಮೂಲಗಳು ಕಿಮ್ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆ ಆಗಿರುವ ವಿಚಾರವನ್ನು ತಳ್ಳಿ ಹಾಕಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+