ಇರಾನ್ ಬೆನ್ನಿಗೆ ನಿಂತ ಉತ್ತರ ಕೊರಿಯಾ ಕಡೆಯಿಂದ ಪರಮಾಣು ಬಾಂಬ್ ಸಪ್ಲೈ? Iran And Israel

ಭರ್ಜರಿಯಾಗಿ ಬಡಿದಾಡುತ್ತಿರುವ ಇಸ್ರೇಲ್ & ಇರಾನ್ ಇದೀಗ ಇಡೀ ಜಗತ್ತನ್ನು ಪೀಸ್ ಪೀಸ್ ಮಾಡುತ್ತಿದ್ದು, ಒಂದು ಕಡೆ ಅಮೆರಿಕ ಕೂಡ ಇಸ್ರೇಲ್ ಪರವಾಗಿ & ಇರಾನ್ ವಿರುದ್ಧ ಯುದ್ಧಕ್ಕೆ ಎಂಟ್ರಿಯನ್ನು ಕೊಟ್ಟು ತಲ್ಲಣ ಎಬ್ಬಿಸಿದೆ. ಇದೇ ಸಮಯದಲ್ಲಿ ಸರ್ವಾಧಿಕಾರಿಯ ನಾಡು ಉತ್ತರ ಕೊರಿಯಾ ನಿಲುವು ಮತ್ತೊಮ್ಮೆ ಅಮೆರಿಕದ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಹಾಗಾದ್ರೆ ಇಸ್ರೇಲ್ & ಇರಾನ್ ಯುದ್ಧದ ಬಗ್ಗೆ ಉತ್ತರ ಕೊರಿಯಾ ನಿಲುವು ಏನು?

ಇಸ್ರೇಲ್ & ಇರಾನ್ ನಡುವೆ ಯುದ್ಧ ಯಾಕೆ ಶುರುವಾಯ್ತು? ಅನ್ನೋ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿದೆ. ಅಮೆರಿಕ & ಇರಾನ್ ನಡುವೆ ದ್ವೇಷ ಶುರುವಾಗಿ ಹಲವು ದಶಕಗಳೇ ಕಳೆದು ಹೋಗಿವೆ. ಆದರೆ ಈ ದ್ವೇಷ ಕಡಿಮೆ ಆಗುವ ಬದಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗಿತ್ತು. ಮತ್ತೊಂದು ಕಡೆ ಯಾವಾಗ ಇದೇ ಇರಾನ್ ಪರಮಾಣು ಬಾಂಬ್ ಪರೀಕ್ಷೆ ಮಾಡಲು ಮುಂದಾಗಿತ್ತೋ ಆಗಲೇ ನೋಡಿ ಜಗಳ ಜೋರಾಗಿದ್ದು, ಬಡಿದಾಟ ಹೆಚ್ಚಾಗಿದ್ದು. ಹೀಗಿದ್ದಾಗ ಇಸ್ರೇಲ್ ಪರವಾಗಿ ಇದೀಗ ಅಮೆರಿಕ ಎಂಟ್ರಿ ಕೊಟ್ಟ ತಕ್ಷಣ ಅತ್ತ, ಜಗತ್ತಿನ ಮತ್ತೊಂದು ಪರಮಾಣು ಸಾಮರ್ಥ್ಯದ ರಾಷ್ಟ್ರ ಉತ್ತರ ಕೊರಿಯಾ ಕೂಡ ಯುದ್ಧದ ಅಕಾಡಕ್ಕೆ ಎಂಟ್ರಿ ಕೊಟ್ಟಿದೆ!

North Korea Is Showing Strong Support To Iran At Present Situation

ಇರಾನ್ ಬೆನ್ನಿಗೆ ನಿಂತ ಸರ್ವಾಧಿಕಾರಿ!

ಇಲ್ಲಿ ಎಲ್ಲವೂ ಸೈಲೆಂಟ್ ಆಗಿತ್ತು, ಆದರೆ ಇರಾನ್ ಬಳಿ ಪರಮಾಣು ಬಾಂಬ್ ಬರುತ್ತೆ ಅಂತಾ ಯುದ್ಧ ಶುರು ಮಾಡಲಾಗಿತ್ತು. ನೋಡ ನೋಡುತ್ತಲೇ ಘೋರವಾಗಿ ಎರಡೂ ಕಡೆ ದಾಳಿಯ ನಡೆಯುತ್ತಾ ಇದೆ. ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಬಾಂಬ್ ಪಡೆಯಬಾರದು ಎಂಬ ಶಪಥ ಮಾಡಿರುವ ಅಮೆರಿಕ ತೊಡೆತಟ್ಟಿ ನಿಂತಿದೆ. ಅಲ್ಲದೆ, ಮತ್ತೊಂದು ಕಡೆ ಇವರ ನಡುವಿನ ತಿಕ್ಕಾಟ ಜೋರಾಗಿ, ಇದೀಗ ಇಸ್ರೇಲ್ ಕೂಡ ಭಾರಿ ದೊಡ್ಡ ಪ್ರಮಾಣದ ದಾಳಿ ಮಾಡಿತ್ತಿತ್ತು.

ಇಂತಹ ಸೂಕ್ಷ್ಮ & ಸಂದಿಗ್ಧ ಪರಿಸ್ಥಿತಿಯಲ್ಲಿ ಇರಾನ್ ವಿರುದ್ಧ ನೇರವಾಗಿ ದಾಳಿ ಶುರು ಮಾಡಿದೆ ಅಮೆರಿಕ ಸೇನೆ. ಇದಕ್ಕೆ ಉತ್ತರ ಕೊರಿಯಾ ಕೂಡ ರೊಚ್ಚಿಗೆದ್ದಿದ್ದು, ಇರಾನ್ ಬೆನ್ನಿಗೆ ನಿಂತು ಅಮೆರಿಕದ ವಿರುದ್ಧ ಉತ್ತರ ಕೊರಿಯಾ ತೊಡೆತಟ್ಟಿದೆ. ಇಷ್ಟೆಲ್ಲದರ ನಡುವೆ ಮತ್ತೊಂದು ಪರಮಾಣು ಯುದ್ಧಕ್ಕೆ ಜಗತ್ತಿನಾದ್ಯಂತ ಸಿದ್ಧತೆಗಳು ಸಾಗಿದಂತೆ ಕಾಣುತ್ತಿದೆ.

ಪರಮಾಣು ಬಾಂಬ್ ಕೊಡುತ್ತಾ ಉ.ಕೊರಿಯಾ?

ಹೌದು, ಉತ್ತರ ಕೊರಿಯಾ ಬಳಿ ಭಾರಿ ವಿನಾಶಕಾರಿ ಅಣ್ವಸ್ತ್ರಗಳ ರಾಶಿಯೇ ಇದೆ. ಹೀಗಾಗಿ ಅದನ್ನ ಈಗ ಇರಾನ್ ದೇಶಕ್ಕೆ ಕೊಡುತ್ತಾ ಉತ್ತರ ಕೊರಿಯಾ ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ ಇರಾನ್ ಜೊತೆಯಲ್ಲಿ ಉತ್ತಮ ಸಂಬಂಧ ಹೊಂದಿರುವ ಉತ್ತರ ಕೊರಿಯಾಗೆ ಇಸ್ರೇಲ್ & ಅಮೆರಿಕ ಕಂಡರೆ ಆಗುವುದೇ ಇಲ್ಲ. ಈ ಕಾರಣಕ್ಕೆ ಇದೀಗ ನೇರವಾಗಿ ಸಹಾಯ ಮಾಡಲು ಇರಾನ್ ಬೆನ್ನಿಗೆ ನಿಲ್ಲಲು ಉತ್ತರ ಕೊರಿಯಾ ಸಿದ್ಧವಾಗಿದೆ ಎನ್ನಲಾಗಿದೆ. ಹಾಗೇ, ಪರಮಾಣು ಬಾಂಬ್ ಸಪ್ಲೈ ಮಾಡಿದರೂ ಆಶ್ಚರ್ಯ ಇಲ್ಲ ಅಂತಿದ್ದಾರೆ ತಜ್ಞರು. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಗಾಗಿ ಕಾಯಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+