ಉಗ್ರರೇನು ಸ್ವರ್ಗದಿಂದ ಉದುರುತ್ತಾರಾ?: ಪಾಕಿಗೆ ಪ್ರಣಬ್ ಪ್ರಶ್ನೆ

ಬ್ರಸೆಲ್ಸ್, ಅ.5: ನಾಡಿನ ಸಾಕ್ಷಿಪ್ರಜ್ಞೆಯಂತಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮತ್ತೊಮ್ಮೆ ಖಡಕ್ ಆಗಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕಳಂಕಿತ ಜನನಾಯಕರನ್ನು ರಕ್ಷಿಸುವ ಸಲುವಾಗಿ ಕೇಂದ್ರ ಸರಕಾರ ಸುಗ್ರೀವಾಜ್ಞೆ ತರಲು ಯತ್ನಿಸಿದ್ದಾಗ ಪ್ರಣಬ್‌ ದಾ ಅಕ್ಷರಶಃ ಅದು ಕಸದಬುಟ್ಟಿ ಸೇರುವಂತೆ ನೋಡಿಕೊಂಡಿದ್ದರು.

ಇದೀಗ ಮಗ್ಗುಲ ಮುಳ್ಳಾಗಿರುವ ಪಾಕಿಸ್ತಾನದ ಮೇಲೆ ಅವರು ಕೆಂಗಣ್ಣು ಬೀರಿದ್ದಾರೆ. ಪಾಕ್‌ ಪ್ರಾಯೋಜಿತ ಭಯೋತ್ಪಾದನೆ ಕುರಿತ ತಮ್ಮ ಅಸಮಾಧಾನವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ.

non-state-actors-aka-terrorists-not-come-from-heaven-president-pranab

ಭಾರತದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳ ಹಿಂದೆ 'ಯಾವ ದೇಶಕ್ಕೂ ಸೇರದ ವ್ಯಕ್ತಿಗಳು' ಸೇರಿದ್ದಾರೆ ಎಂಬ ಪಾಕಿಸ್ತಾನದ ವಾದವನ್ನು ತಿರಸ್ಕರಿಸಿದ ಅವರು, 'ಅವರೇನು ಸ್ವರ್ಗದಿಂದ ಇಳಿದು ಬಂದವರೇ?' ಎಂದು ಪ್ರಶ್ನಿಸಿದ್ದಾರೆ.

ಪಾಕಿಸ್ತಾನದಲ್ಲಿರುವ ಭಯೋತ್ಪಾದನಾ ಮೂಲಸೌಕರ್ಯವನ್ನು ನಾಶಪಡಿಸಬೇಕು ಎಂದು ಮುಖರ್ಜಿ ಪುನರುಚ್ಚರಿಸಿದರು. ನಾಲ್ಕು ದಿನಗಳ ಸರಕಾರಿ ಭೇಟಿಗಾಗಿ ಮುಖರ್ಜಿ ಬೆಲ್ಜಿಯಂನಲ್ಲಿದ್ದಾರೆ.

ಪಾಕಿಸ್ತಾನದೊಂದಿಗೆ ಭಾರತಕ್ಕೆ ಶಾಂತಿ ಬೇಕು ನಿಜ, ಆದರೆ ತನ್ನ ಪ್ರಾದೇಶಿಕ ಸಮಗ್ರತೆ ಬಗ್ಗೆ ಭಾರತ ಯಾವತ್ತೂ ರಾಜಿಮಾಡಿಕೊಳ್ಳುವುದಿಲ್ಲ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ ಹಾಗೂ ಗಡಿಯಾಚೆಯ ಸರಕಾರಿ ಪ್ರಾಯೋಜಿತ ಭಯೋತ್ಪಾದನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದೂ ಅವರು ಎಚ್ಚರಿಕೆ ರವಾನಿಸಿದ್ದಾರೆ.

''ಭಯೋತ್ಪಾದನಾ ಚಟುವಟಿಕೆಗಳನ್ನು ದಮನಿಸಬೇಕು. ಸರಕಾರಿ ಪ್ರಾಯೋಜಿತ ಭಯೋತ್ಪಾದನೆಯನ್ನು ಯಾವತ್ತೂ ಸ್ವೀಕರಿಸಲು ಸಾಧ್ಯವಿಲ್ಲ. ಹಾಗಾಗಿ ಪದೇ ಪದೇ ನಾವು ಹೇಳುತ್ತಿದ್ದೇವೆ- ನಿಮ್ಮ ಭೂಭಾಗದಲ್ಲಿ ಸ್ಥಾಪನೆಯಾಗಿರುವ ಭಯೋತ್ಪಾದನಾ ಶಿಬಿರಗಳನ್ನು ದಯವಿಟ್ಟು ನಾಶಪಡಿಸಿ'' ಎಂದು ರಾಷ್ಟ್ರಪತಿಯವರು Euronewsಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಭಯೋತ್ಪಾದನೆ ನಡೆಸುವವರಿಗೆ ನಾನ್- ಸ್ಟೇಟ್ ಆ್ಯಕ್ಟರ್ಸ್ (ಯಾವುದೇ ದೇಶಕ್ಕೆ ಸೇರದವರು) ಎಂಬ ಪದವನ್ನು ಮೊದಲು ಬಳಸಿದ್ದು ಪಾಕಿಸ್ತಾನ ಎಂದು ರಾಷ್ಟ್ರಪತಿ ಹೇಳಿದ್ದಾರೆ. 'ಯಾವುದೇ ದೇಶಕ್ಕೆ ಸೇರದವರು ಎಂಬ ಪದವನ್ನು ಬಳಸಿದ್ದು ಅವರು. ಆಗ, ಯಾವುದೇ ದೇಶಕ್ಕೆ ಸೇರದವರು ಸ್ವರ್ಗದಿಂದ ಬರುತ್ತಾರೆಯೇ? ಎಂದು ನಾನು ಪ್ರಶ್ನಿಸಿದೆ. ನಾನ್ ಸ್ಟೇಟ್ ಆ್ಯಕ್ಟರ್‌ಗಳು ನಿಮ್ಮ ನಿಯಂತ್ರಣದಲ್ಲಿರುವ ಸ್ಥಳದಿಂದ ಬರುತ್ತಾರೆ' ಎಂದೂ ತಿಳಿಸಿದೆ.

'ಭಾರತಕ್ಕೆ ವಿರುದ್ಧವಾಗಿರುವ ಶಕ್ತಿಗಳು ತನ್ನ ನೆಲವನ್ನು ಬಳಸಿಕೊಳ್ಳಲು ಅನುಮತಿ ನೀಡುವುದಿಲ್ಲ ಎಂಬುದಾಗಿ ಪಾಕಿಸ್ತಾನ ಈಗಲ್ಲ, 2004ರಲ್ಲೇ ಘೋಷಿಸಿತ್ತು' ಎಂದು ಪ್ರಣಬ್ ಹೇಳಿದರು. ದೇಶವನ್ನು ವಿಸ್ತರಿಸುವುದರಲ್ಲಿ ಭಾರತಕ್ಕೆ ಯಾವುದೇ ಮಹತ್ವಾಕಾಂಕ್ಷೆಯಿಲ್ಲ. ತನ್ನ ಪ್ರಾದೇಶಿಕ ಸಮಗ್ರತೆಯನ್ನು ಕಾಯ್ದುಕೊಂಡು ನೆರೆಕರೆಯವರೊಂದಿಗೆ ಅದು ಶಾಂತಿ ಬಯಸುತ್ತದೆ ಎಂದರು ಪ್ರಣಬ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+