ಬ್ರೆಜಿಲ್ ಗೆ ತೆರಳಲು ಇನ್ನು ಭಾರತೀಯರಿಗೆ ವೀಸಾ ಅಗತ್ಯ ಇಲ್ಲ
ರಿಯೋ ಡಿ ಜನೈರೋ (ಬ್ರೆಜಿಲ್), ಅಕ್ಟೋಬರ್ 25: ದಕ್ಷಿಣ ಅಮೆರಿಕ ಖಂಡದ ಪ್ರಖ್ಯಾತ ಪ್ರವಾಸಿ ತಾಣವಾದ ಬ್ರೆಜಿಲ್ ದೇಶಕ್ಕೆ ತೆರಳಲು ಭಾರತ ಮತ್ತು ಚೀನಾದ ಪ್ರವಾಸಿಗರು, ಉದ್ಯಮಿ- ವ್ಯಾಪಾರಿಗಳು ಇನ್ನು ಮುಂದೆ ವೀಸಾ ಪಡೆಯುವ ಅಗತ್ಯ ಇಲ್ಲ. ಈ ರೀತಿ ವೀಸಾ ಪಡೆಯುವ ನಿಯಮವನ್ನು ಕೈ ಬಿಟ್ಟಿರುವುದಾಗಿ ಬ್ರೆಜಿಲ್ ನ ಅಧ್ಯಕ್ಷ ಜೈರ್ ಬೊಲ್ಸೊನಾರೋ ಗುರುವಾರ ಹೇಳಿದ್ದಾರೆ.
ಬಲಪಂಥೀಯ ವಿಚಾರಧಾರೆ ಇರುವ ಬೊಲ್ಸೊನಾರೋ ಈ ವರ್ಷದ ಆರಂಭದಲ್ಲಿ ಬ್ರೆಜಿಲ್ ನಲ್ಲಿ ಅಧಿಕಾರಕ್ಕೆ ಬಂದರು. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅನ್ವಯ ಆಗುವಂತೆ ವೀಸಾ ನಿಯಮಗಳನ್ನು ಅವರು ಸಡಿಲ ಮಾಡುತ್ತಾ ಬಂದಿದ್ದಾರೆ. ಈಗಿನ ಘೋಷಣೆಯನ್ನು ಚೀನಾದ ಅಧಿಕೃತ ಪ್ರವಾಸ ವೇಳೆ ಅವರು ಮಾಡಿದ್ದಾರೆ.

ಇದಕ್ಕೂ ಮುನ್ನ ಯುನೈಟೆಡ್ ಸ್ಟೇಟ್ಸ್, ಕೆನಡಾ, ಜಪಾನ್ ಮತ್ತು ಆಸ್ಟ್ರೇಲಿಯಾದ ಉದ್ಯಮಿಗಳು ಮತ್ತು ಪ್ರವಾಸಿಗರಿಗೆ ಇರುವ ವೀಸಾ ಅಗತ್ಯಗಳನ್ನು ಬ್ರೆಜಿಲ್ ಸರ್ಕಾರ ಕೊನೆ ಮಾಡಿತು. ಆದರೆ ಇದಕ್ಕೆ ಪ್ರತಿಯಾಗಿ ಈ ದೇಶಗಳಿಂದ ಬ್ರೆಜಿಲ್ ನಾಗರಿಕರಿಗಾಗಿ ಯಾವುದೇ ವೀಸಾ ವಿನಾಯಿತಿ ನೀಡಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು.












Click it and Unblock the Notifications