ನೈಜೀರಿಯಾ ನರಮೇಧ: ಸುಮಾರು 110ಕ್ಕೂ ಹೆಚ್ಚು ರೈತರ ಹತ್ಯೆ
ಅಬುಜಾ, ನವೆಂಬರ್ 30: ಈಶಾನ್ಯ ನೈಜೀರಿಯಾದಲ್ಲಿ ಘೋರ ಹತ್ಯಾಕಾಂಡ ನಡೆದಿದ್ದು, ಬಹುತೇಕ ರೈತು ಸೇರಿದಂತೆ 110 ಮಂದಿಯನ್ನು ಹತ್ಯೆಮಾಡಲಾಗಿದೆ.
'ಮೋಟಾರ್ ಸೈಕಲ್‌ಗಳಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಹೊಲಗಳನ್ನು ಕೊಯ್ಲು ಮಾಡುತ್ತಿದ್ದ ನಾಗರಿಕ ಪುರುಷರು ಮತ್ತು ಮಹಿಳೆಯರ ಮೇಲೆ ಕ್ರೂರ ದಾಳಿ ನಡೆಸಿದ್ದಾರೆ.' ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಲ್ಲದೆ, ಅನೇಕ ಮಹಿಳೆಯರನ್ನು ಅಪಹರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವರದಿ ಪ್ರಕಾರ ಸಂಘರ್ಷ ಪೀಡಿತ ಬೊರ್ನೊ ರಾಜ್ಯದ ರಾಜಧಾನಿಯಾದ ಮೈಡುಗುರಿ ಬಳಿಯ ಜೆರೆ ಸ್ಥಳೀಯ ಸರ್ಕಾರಿ ಪ್ರದೇಶದ ಕೊಶೋಬೆ ಗ್ರಾಮ ಮತ್ತು ಇತರ ಗ್ರಾಮೀಣ ಸಮುದಾಯಗಳಲ್ಲಿ ಶನಿವಾರ ಮಧ್ಯಾಹ್ನ ಈ ಹತ್ಯೆಗಳು ನಡೆದಿವೆ ಎಂದು ಅಲ್ ಜಜೀರಾ ಮಾಧ್ಯಮ ವರದಿ ಮಾಡಿದೆ.

ಸಂದರ್ಭದಲ್ಲಿ 6 ಮಂದಿ ಗಾಯಗೊಂಡಿದ್ದಾರೆ. ಜನರು ಕೆಲಸವನ್ನು ಹುಡುಕಿಕೊಂಡು ನೈಜೀರಿಯಾದ 1 ಸಾವಿರ ಕಿ.ಮೀ ದೂರದಲ್ಲಿರುವ ಸೊಕೊಟೊಗೆ ಬಂದಿದ್ದರು.
ಭತ್ತದ ಗದ್ದೆಯಲ್ಲಿದ್ದ ರೈತರುನ್ನೇ ಅವರು ಟಾರ್ಗೆಟ್ ಮಾಡಿದ್ದರು. ಸಂದರ್ಭದಲ್ಲಿ 110ಕ್ಕೂ ಹೆಚ್ಚು ಮಂದಿ ನಾಗರಿಕರು ಬಲಿಯಾಗಿದ್ದಾರೆ. ಅದರಲ್ಲಿ 30 ಮಂದಿ ತಲೆಯನ್ನು ಕತ್ತರಿಸಲಾಗಿದೆ.












Click it and Unblock the Notifications