ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರಾನ್ಸ್‌ನಲ್ಲಿ ದಾಳಿ ಮಾಡಿದ್ದು ಐಎಸ್‌ಐಎಸ್?

By ವಿಕಾಸ್ ನಂಜಪ್ಪ
|
Google Oneindia Kannada News

ಪ್ಯಾರೀಸ್, ಜುಲೈ 14 : ದಕ್ಷಿಣ ಫ್ರಾನ್ಸ್‌ನ ನೀಸ್ ನಗರದಲ್ಲಿ ನಡೆದಿರುವ ಭೀಕರ ಹತ್ಯಾಕಾಂಡ ಉಗ್ರರು ನಡೆಸಿರುವುದೇ?. ಜನರು ತುಂಬಿದ್ದ ರಸ್ತೆಯಲ್ಲಿ ಲಾರಿ ಹರಿಸಿ ರಕ್ತದೋಕುಳಿ ನಡೆಸಿದ ಅಪರಿಚಿತ ವ್ಯಕ್ತಿ ಉಗ್ರನೇ? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯಾವುದೇ ಉಗ್ರ ಸಂಘಟನೆಗಳು ಇದುವರೆಗೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಐಎಸ್‌ಐಎಸ್ ನೀಸ್ ನಗರದಲ್ಲಿ ನಡೆದ ದಾಳಿಯ ಬಳಿಕ ಹಲವು ಸಂಭ್ರಮಾಚರಣೆ ಸಂದೇಶಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿದೆ. 'Keep the Eiffel Tower Dark until the ISIS conquers France' ಎಂಬುದು ಐಎಸ್‌ಐಎಸ್ ಹಾಕಿರುವ ಸಂದೇಶಗಳ ಪೈಕಿ ಒಂದು. [ಫ್ರಾನ್ಸ್ : ಲಾರಿ ಹರಿಸಿ 77 ಜನರ ಹತ್ಯೆ]

isis

ನೀಸ್ ನಗರದಲ್ಲಿ ನಡೆದಿರುವುದು ಭಯೋತ್ಪಾದಕ ದಾಳಿ ಎಂದು ಶಂಕಿಸಲಾಗಿದೆ. ಆದರೆ, ಯಾವುದೇ ಸಂಘಟನೆಗಳು ಈ ತನಕ 77 ಜನರ ಸಾವಿಗೆ ಕಾರಣವಾದ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೆ, ಐಎಸ್‌ಐಎಸ್ ಹಲವಾರು ಸಂದೇಶಗಳನ್ನು ಹಾಕುತ್ತಿದ್ದು, ದಾಳಿಯ ನಡೆಸಿದ್ದು ತಾನೇ ಎಂದು ಹೇಳಿಕೊಳ್ಳುವ ಸಾಧ್ಯತೆ ಇದೆ. [ಪ್ಯಾರಿಸಿನ ಶಾ೦ತ ಪರಿಸರದಲ್ಲಿ ಉಗ್ರವಾದದ ಬೆ೦ಕಿ: ಇದಕ್ಕೆ ಕೊನೆಯೆಂದು?]

ದಾಳಿ ನಡೆಸಿದ ಲಾರಿಯಲ್ಲಿ ಸ್ಫೋಟಗಳಿತ್ತು ಎಂದು ಭದ್ರತಾಪಡೆಗಳು ಹೇಳಿವೆ. ದಾಳಿ ನಡೆಸಿದ್ದು ನಾವೇ ಎಂದು ಹೇಳಿಕೊಳ್ಳಲು ಐಎಸ್‌ಐಎಸ್ ಟ್ವಿಟರ್ ಮತ್ತು ಇತರ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಸಂದೇಶಗಳನ್ನು ಹಾಕುತ್ತಿದೆ. 'ಫ್ರಾನ್ಸ್ಅನ್ನು ನಮ್ಮ ವಶಕ್ಕೆ ತೆಗೆದುಕೊಳ್ಳುವ ತನಕ ಐಫೆಲ್ ಟವರ್‌ ಅನ್ನು ಕತ್ತಲಲ್ಲಿಡಿ' ಎಂಬ ಸಂದೇಶ ಹಲವಾರು ಸಂಶಯಗಳನ್ನು ಹುಟ್ಟು ಹಾಕಿದೆ.

English summary
Keep the Eiffel Tower Dark until the ISIS conquers France. This is one of the many chilling messages posted by ISIS sympathisers following the deadly NICE truck attack in which nearly 77 have been killed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X