ರಷ್ಯಾ-ಉಕ್ರೇನ್ ಸಂಘರ್ಷ: 24 ಗಂಟೆ ನಿರ್ಣಾಯಕ ಎಂದ ವೊಲೊಡಿಮಿರ್

ಕೀವ್, ಫೆಬ್ರವರಿ 28: ಉಕ್ರೇನ್‌ನಲ್ಲಿ ರಷ್ಯಾ ದಾಳಿ ನಡೆಸುತ್ತಿದ್ದು, ಮುಂದಿನ 24 ಗಂಟೆ ನಿರ್ಣಾಯಕ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ತಿಳಿಸಿದ್ದಾರೆ.

ಈ ಮಧ್ಯೆ ಮಾತನಾಡಿರುವ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿ ಮುಂದಿನ 24 ಗಂಟೆ ನಮಗೆ ತುಂಬಾ 'ನಿರ್ಣಾಯಕ' ಎಂದು ಘೋಷಣೆ ಮಾಡಿದ್ದಾರೆಂದು ವರದಿಯಾಗಿದೆ. ಜೊತೆಗೆ ರಷ್ಯಾ ಕೂಡಲೇ ಕದನ ವಿರಾಮ ಘೋಷಣೆ ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ.

ರಷ್ಯಾ-ಉಕ್ರೇನ್​ ನಡುವಿನ ಸಂಘರ್ಷ ಐದನೇ ದಿನಕ್ಕೆ ಕಾಲಿಟ್ಟಿದ್ದು, ಇಲ್ಲಿಯವರೆಗೆ ಉಭಯ ದೇಶಗಳ ಮಧ್ಯೆ ಯಾವುದೇ ರೀತಿಯ ರಾಜತಾಂತ್ರಿಕ ಮಾತುಕತೆ ನಡೆದಿಲ್ಲ.
ರಷ್ಯಾ ಆಕ್ರಮಣದಿಂದಾಗಿ ಉಕ್ರೇನ್​ನಲ್ಲಿ ಇಲ್ಲಿಯವರೆಗೆ 14 ಮಕ್ಕಳು ಸೇರಿದಂತೆ 352 ನಾಗರಿಕರು ಸಾವನ್ನಪ್ಪಿದ್ದು, 1,684 ಜನರು ಗಾಯಗೊಂಡಿದ್ದಾರೆಂದು ಅಲ್ಲಿನ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.

Next 24 Hours Crucial For Ukraine, Says President Zelensky; UK Assures Military Aid

ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಜೊತೆ ದೂರವಾಣಿ ಮೂಲಕ ಮಾತನಾಡಿರುವ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್,​​ ಮುಂದಿನ 24 ಗಂಟೆಗಳು ನಮಗೆ ನಿರ್ಣಾಯಕ ಎಂದು ಹೇಳಿದ್ದಾರೆಂದು ಅಲ್ಲಿನ ಸುದ್ದಿಸಂಸ್ಥೆವೊಂದು ವರದಿ ಮಾಡಿದೆ.

ಇದೇ ವೇಳೆ ಮಾತನಾಡಿರುವ ಬೋರಿಸ್​​ ಯುಕೆ ಹಾಗೂ ಮಿತ್ರರಾಷ್ಟ್ರಗಳು ಉಕ್ರೇನ್​ಗೆ ಎಲ್ಲ ರೀತಿಯಲ್ಲೂ ರಕ್ಷಣಾತ್ಮಕ ಸಹಾಯ ನೀಡಲು ಸಿದ್ಧರಾಗಿದ್ದೇವೆ ಎಂದು ಘೋಷಿಸಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಯಿಂದ ರಷ್ಯಾವನ್ನ ಪ್ರತ್ಯೇಕ ಮಾಡಲಾಗಿದ್ದು, ರಷ್ಯಾ ಅಧ್ಯಕ್ಷ ಪುಟಿನ್​ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾವು ನಿರ್ಧರಿಸಿದ್ದೇವೆ ಎಂದು ಬ್ರಿಟನ್ ಪ್ರಧಾನಿ ತಿಳಿಸಿದ್ದಾರೆ.

ಕಳೆದ ಐದು ದಿನಗಳಿಂದ ರಷ್ಯಾ-ಉಕ್ರೇನ್​ ಮಧ್ಯೆ ಯುದ್ಧ ನಡೆಯುತ್ತಿದ್ದು, ಇದರ ಮಧ್ಯೆ ಇಂದು ಉಭಯ ದೇಶಗಳ ಮಧ್ಯೆ ಬೆಲಾರಸ್​​ನಲ್ಲಿ ಮಹತ್ವದ ಶಾಂತಿ ಮಾತುಕತೆ ಆರಂಭಗೊಂಡಿದೆ. ಇದರಲ್ಲಿ ಖುದ್ದಾಗಿ ಉಕ್ರೇನ್​ ದೇಶದ ರಕ್ಷಣಾ ಸಚಿವರು ಭಾಗಿಯಾಗಿದ್ದಾರೆ. ನಿನ್ನೆ ಕೂಡ ಗೋಮೆಲ್ ಪ್ರದೇಶದಲ್ಲಿ ಉಭಯ ದೇಶಗಳ ಮಧ್ಯೆ ಶಾಂತಿ ಮಾತುಕತೆ ನಡೆದಿತ್ತು.

ಬೆಲಾರಸ್​​ನಲ್ಲಿ ರಷ್ಯಾ- ಉಕ್ರೇನ್​ ನಿಯೋಗದ ಮಧ್ಯೆ ಮಹತ್ವದ ಶಾಂತಿ ಮಾತುಕತೆ ಆರಂಭಗೊಂಡಿದ್ದು, ಯುದ್ಧ ಆರಂಭದ ಬಳಿಕ ನಡೆಯುತ್ತಿರುವ ಎರಡನೇ ಸುತ್ತಿನ ಮಾತುಕತೆ ಇದಾಗಿದೆ. ಇದರ ಬೆನ್ನಲ್ಲೇ ಕದನ ವಿರಾಮ ಘೋಷಣೆ ಮಾಡುವಂತೆ ಉಕ್ರೇನ್​ ಒತ್ತಾಯ ಮಾಡಿದ್ದಾಗಿ ತಿಳಿದು ಬಂದಿದೆ.

5 ಸಾವಿರ ರಷ್ಯಾ ಯೋಧರ ಹತ್ಯೆ?: ಕಳೆದ ಐದು ದಿನಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ರಷ್ಯಾದ 5 ಸಾವಿರ ಯೋಧರು ಸಾವನ್ನಪ್ಪಿದ್ದಾರೆಂದು ಉಕ್ರೇನ್ ಮಾಹಿತಿ ನೀಡಿದ್ದಾಗಿ ಬಿಬಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ. ಜೊತೆಗೆ 191 ಟ್ಯಾಂಕರ್​, 29 ಫೈಟರ್ ಜೆಟ್​, 29 ಹೆಲಿಕಾಪ್ಟರ್​​​​ ಹೊಡೆದುರುಳಿಸಿರುವುದಾಗಿ ತಿಳಿಸಿದೆ.

ಸೇನಾ ಅನುಭವ ಇರುವ ಕೈದಿಗಳ ಬಿಡುಗಡೆ ಉಕ್ರೇನ್ ನಿರ್ಧಾರ: ರಷ್ಯಾ ವಿರುದ್ಧ ಭೀಕರ ಯುದ್ಧ ಆರಂಭಗೊಂಡಿರುವ ಕಾರಣ ಇದೀಗ ಉಕ್ರೇನ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹೋರಾಟದಲ್ಲಿ ಭಾಗಿಯಾಗಲು ಸೇನಾ ಅನುಭವ ಹೊಂದಿರುವ ಕೈದಿಗಳನ್ನ ರಿಲೀಸ್ ಮಾಡಲಾಗುವುದು ಎಂದು ಅಲ್ಲಿನ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್​ಸ್ಕಿ ಹೇಳಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+