ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲೂ ಎಬೋಲಾ ಆರ್ಭಟ ಶುರುವಾಯಿತೆ?

|
Google Oneindia Kannada News

ನ್ಯೂಯಾರ್ಕ್‌, ಅ.24: ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ತನ್ನ ರುದ್ರ ರೂಪ ತೋರಿಸಿದ್ದ ಮಾರಕ ಎಬೋಲಾ ಇದೀಗ ಅಮೆರಿಕಕ್ಕೂ ಕಾಲಿಟ್ಟಿದೆ. ರೋಗಿಗಳ ಆರೈಕೆ ಮಾಡಲು ತೆರಳಿದ್ದ ವೈದ್ಯನೇ ರೋಗ ಹೊತ್ತು ಬಂದಿದ್ದಾನೆ.

ಎಬೋಲಾ ಪೀಡಿತರಿಗೆ ಚಿಕಿತ್ಸೆ ನೀಡಲು ಆಫ್ರಿಕಾದ ಗಿನಿಯಾಗೆ ತೆರಳಿದ್ದ ಅಮೆರಿಕದ ವೈದ್ಯರೊಬ್ಬರಿಗೆ ಮಾರಕ ರೋಗ ತಗುಲಿರುವುದು ಗುರುವಾರ ಪತ್ತೆಯಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ರೋಗದ ಲಕ್ಷಣ ದೃಢಪಟ್ಟಿದೆ.[ಮಹಾಮಾರಿ ಎಬೋಲಾಕ್ಕೆ ಕೆನಡಾ ಚುಚ್ಚುಮದ್ದು]

ebola

ಕ್ರೆಗ್‌ ಸ್ಪೆನ್ಸರ್‌(33) ಎಂಬ ವೈದ್ಯನಿಗೆ ನ್ಯೂಯಾರ್ಕ್‌ನ ಬೆಲ್ಲೆವ್ಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಬೋಲಾ ಪೀಡಿತರ ಆರೈಕೆಗೆ ತೆರಳಿದ್ದ ಸ್ಪೆನ್ಸರ್‌, ಅಕ್ಟೋಬರ್ 17ರಂದು ಜೆಎಫ್ ವಿಮಾನ ನಿಲ್ದಾಣದ ಮೂಲಕ ನ್ಯೂಯಾರ್ಕ್ ಗೆ ಹಿಂದಿರುಗಿದ್ದರು.[ಎಬೋಲಾ ಮಾರಿಗೆ ಅಮೆರಿಕಾದಲ್ಲಿ ಮೊದಲ ಬಲಿ]

ಆ ಸಂದರ್ಭದಲ್ಲಿ ಎಲ್ಲ ಎಬೋಲಾ ಪೀಡಿತ ದೇಶಗಳಿಂದ ಆಗಮಿಸಿದ ಪ್ರವಾಸಿಗರಿಗೆ ಮಾಡುವ ಆರೋಗ್ಯ ತಪಾಸಣೆಗಳಿಗೆ ಸ್ಪೆನ್ಸರ್ ಅವರನ್ನು ಒಳಪಡಿಸಲಾಗಿದೆ. ಆಗ ಯಾವುದೇ ಲಕ್ಷಣ ಕಂಡುಬರದಿದ್ದರೂ ಗುರುವಾರ ಆರೋಗ್ಯ ಕೈಕೊಟ್ಟಾಗ ಮತ್ತೆ ಪರೀಕ್ಷೆ ನಡೆಸಲಾಯಿತು. ಈ ವೇಳೆ ರೋಗ ತಗುಲಿರುವುದು ಪತ್ತೆಯಾಗಿದೆ.[ಎಬೋಲಾ ವೈರಾಣು ಭೀತಿ 'ಸೆಕ್ಸ್'ಗೂ ಕೊಕ್ಕೆ]

ನ್ಯೂಯಾರ್ಕ್‌ಗೆ ಹಿಂತಿರುಗಿದ ಬಳಿಕ ಸ್ಪೆನ್ಸರ್ ಸಬ್‌ವೇ ಹಾಗೂ ಬ್ರೂಕ್ಲಿನ್‌ಗೆ ಭೇಟಿ ನೀಡಿದ್ದರು. ಹಾಗಾಗಿ ಕಟ್ಟೆಚ್ಚರ ವಹಿಸಿರುವ ಅಮೆರಿಕ ಆರೋಗ್ಯ ಇಲಾಖೆ ಸಕಲ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸೂಚಿಸಿದೆ.

English summary
A doctor in New York City who recently returned from treating Ebola patients in Guinea tested positive for the Ebola virus on Thursday, becoming the city's first diagnosed case. he doctor, Craig Spencer, was rushed to Bellevue Hospital Center on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X