Donald Trump: ರಷ್ಯಾ & ಉಕ್ರೇನ್ ಯುದ್ಧ ಅಂತ್ಯ: ಟ್ರಂಪ್ ಅಧಿಕಾರಕ್ಕೆ ಬಂದ ದಿನವೇ ಮಹತ್ವದ ಘೋಷಣೆ?
ರಷ್ಯಾ ರೊಚ್ಚಿಗೆದ್ದು ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿದ್ದರೂ, ರಷ್ಯಾ ಸೇನೆಯ ಕೋಪವೆಲ್ಲಾ ಇರುವುದು ಮಾತ್ರ ಅಮೆರಿಕ ಮೇಲೆ. ಯಾಕಂದ್ರೆ ಜೋ ಬೈಡನ್ ಅವರ ಸರ್ಕಾರ ಉಕ್ರೇನ್ ಬೆನ್ನಿಗೆ ನಿಂತು, ಶಸ್ತ್ರಾಸ್ತ್ರಗಳನ್ನು ಕೊಟ್ಟು ರಷ್ಯಾ ವಿರುದ್ಧ ಮಸಲತ್ತು ಮಾಡಿದೆ ಎಂಬ ಭಾರಿ ಗಂಭೀರ ಆರೋಪ ಕೇಳಿ ಬಂದಿತ್ತು. ಹಾಗೇ, ಜೋ ಬೈಡನ್ ಮೇಲಿನ ಸಿಟ್ಟಿಗೆ ರಷ್ಯಾ ಕೂಡ ಕೊತ ಕೊತ ಕುದಿಯುತ್ತಾ ಸೇಡಿಗಾಗಿ ಕಾದು ಕೂತಿದೆ.
ಇಷ್ಟೆಲ್ಲದರ ನಡುವೆ ಜೋ ಬೈಡನ್ ಆಡಳಿತ ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದ್ದು, ಡೊನಾಲ್ಡ್ ಟ್ರಂಪ್ ಅಮೆರಿಕದ ಹೊಸ ಅಧ್ಯಕ್ಷರಾಗಿ ಅಧಿಕಾರವನ್ನ ಸ್ವೀಕಾರ ಮಾಡಲಿದ್ದಾರೆ. ಹೀಗಿದ್ದಾಗ, ಟ್ರಂಪ್ ಅಧಿಕಾರಕ್ಕೆ ಬಂದ ಮೊದಲ ದಿನವೇ ಮಹತ್ವದ ಘೋಷಣೆ ಗ್ಯಾರಂಟಿ ಎನ್ನಲಾಗ್ತಿದೆ. ಯಾಕಂದ್ರೆ, ಡೊನಾಲ್ಡ್ ಟ್ರಂಪ್ ಅವರ ಮೊದಲ ಗುರಿಯೇ ರಷ್ಯಾ & ಉಕ್ರೇನ್ ವಾರ್ ನಿಲ್ಲಿಸುವುದಾಗಿದೆ. ಹೀಗಾಗಿ ಈಗ ಜಾಗತಿಕ ಮಟ್ಟದಲ್ಲಿ ಹೊಸ ತಲ್ಲಣ ಸೃಷ್ಟಿಯಾಗಿದೆ.

ಡೊನಾಲ್ಡ್ ಟ್ರಂಪ್ ಪ್ಲಾನ್ ಏನು?
ಜೋ ಬೈಡನ್ ಅವರಿಗೂ & ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೂ ಭಾರಿ ದೊಡ್ಡ ವ್ಯತ್ಯಾಸ ಕಾಣಬಹುದಾಗಿದೆ. ಯಾಕಂದ್ರೆ ಈ ಹಿಂದೆ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕೂಡ ಗೆದ್ದಿದ್ದ ಡೊನಾಲ್ಡ್ ಟ್ರಂಪ್ ಅವರು, 2020ರ ತನಕ ಅಮೆರಿಕದ ಆಡಳಿತ ನಡೆಸಿದ್ದರು. ಆದರೆ ಡೊನಾಲ್ಡ್ ಟ್ರಂಪ್ ವಿರುದ್ಧ ಎದ್ದಿದ್ದ ಆಡಳಿತ ವಿರೋಧಿ ಅಲೆ & ಕೊರೊನಾ ಕಂಟಕ ಟ್ರಂಪ್ ಅವರ ಹೀನಾಯ ಸೋಲಿಗೆ ಕಾರಣವಾಗಿತ್ತು.
2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋತು ಸುಣ್ಣವಾಗಿದ್ದರು. ಆದ್ರೆ ಈಗ ಮತ್ತೆ 2024 ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಡೊನಾಲ್ಡ್ ಟ್ರಂಪ್ ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸೋದಕ್ಕೆ ಮಾಡಿರುವ ಪ್ಲಾನ್ ಭರ್ಜರಿಯಾಗಿದೆ. ಈಗಾಗಲೇ ಟ್ರಂಪ್ ಅವರೇ ಹೇಳಿರುವಂತೆ, ರಷ್ಯಾ & ಉಕ್ರೇನ್ ಯುದ್ಧದ ವಿಚಾರದಲ್ಲಿ ಅಮೆರಿಕ ಮಧ್ಯ ಪ್ರವೇಶ ಮಾಡುವ ಅಗತ್ಯತೆ ಇಲ್ಲ ಅಂತಿದ್ದಾರೆ. ಹೀಗಾಗಿ ಟ್ರಂಪ್ ಅಮೆರಿಕದ ಅಧಿಕಾರ ವಹಿಸಿಕೊಂಡ ತಕ್ಷಣ ಉಕ್ರೇನ್‌ಗೆ ಅಮೆರಿಕ ನೀಡುತ್ತಿರುವ ಸಹಾಯ ಕೂಡ ನಿಂತು ಹೋಗಲಿದೆ. ಹೀಗೆ ಆ ಸಹಾಯ ನಿಂತರೆ, ಉಕ್ರೇನ್ ತಾನಾಗಿ ತಾನೇ ಶಾಂತಿ ಮಾತುಕತೆ ನಡೆಸಿ, ಯುದ್ಧ ನಿಲ್ಲಿಸುವ ಸಾಧ್ಯತೆ ದಟ್ಟವಾಗಿದೆ.
ಯುದ್ಧ 3 ವರ್ಷ ಮುಗಿಸುವ ಮೊದಲೇ...
ಒಟ್ನಲ್ಲಿ ಡೊನಾಲ್ಡ್ ಟ್ರಂಪ್ ಎಂಟ್ರಿ ಕೊಡ್ತಿದ್ದಂತೆ ಅಮೆರಿಕದಲ್ಲಿ ದೊಡ್ಡ ಮಟ್ಟದ ಬದಲಾವಣೆ ಗ್ಯಾರಂಟಿ ಆಗುತ್ತಿದೆ. ಅದರಲ್ಲೂ ರಷ್ಯಾ & ಉಕ್ರೇನ್ ಯುದ್ಧ 3 ವರ್ಷ ಮುಗಿಸುವ ಮೊದಲೇ ನಿಂತು ಹೋಗುವುದು ಗ್ಯಾರಂಟಿ ಆಗಿದೆ. ಹಾಗೇ ಮಧ್ಯಪ್ರಾಚ್ಯ ಭಾಗದ ಇಸ್ರೇಲ್ & ಗಾಜಾ ಯುದ್ಧ ಕೂಡ ನಿಲ್ಲುವ ಲಕ್ಷಣ ಕಾಣುತ್ತಿದ್ದು, ಎಲ್ಲರ ಗಮನ ಟ್ರಂಪ್ ಎಂಟ್ರಿ ಮೇಲೆ ಈಗ ನೆಟ್ಟಿದೆ.












Click it and Unblock the Notifications