Donald Trump: ರಷ್ಯಾ & ಉಕ್ರೇನ್ ಯುದ್ಧಕ್ಕೆ ಕೊನೆಯ ಮೊಳೆ ಹೊಡೆಯಲು ಸಜ್ಜಾದ ಡೊನಾಲ್ಡ್ ಟ್ರಂಪ್!

ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಪರಿಸ್ಥಿತಿ ಗಂಭೀರವಾಗಿ, ಎರಡೂ ಕಡೆ ದಾಳಿಗೆ ಮಾರಕ ಮಿಸೈಲ್‌ಗಳನ್ನ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ ಇನ್ನೇನು ಮತ್ತೊಂದು ಮಹಾಯುದ್ಧಕ್ಕೆ ಬದಲಾಗಲಿದೆ ಎಂಬ ಆತಂಕ ಆವರಿಸಿದೆ. ಹೀಗಾಗಿ ಇಡೀ ಜಗತ್ತು ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಕಳೆದ ಎರಡು ಮುಕ್ಕಾಲು ವರ್ಷದಿಂದ ಪ್ರಯತ್ನ ಮಾಡಿ ಮಾಡಿ ಸೋತು ಹೋಗಿದೆ. ಆದರೆ ಇದೀಗ ಯುದ್ಧ ನಿಲ್ಲಿಸಲು ಡೊನಾಲ್ಡ್ ಟ್ರಂಪ್ ಅಂದ್ರೆ ಅಮೆರಿಕ ನೂತನ ಅಧ್ಯಕ್ಷ ಭರ್ಜರಿ ಐಡಿಯಾ ಒಂದನ್ನ ಸಿದ್ಧಮಾಡಿದ್ದಾರೆ!

ಡೊನಾಲ್ಡ್ ಟ್ರಂಪ್ ಪಕ್ಕಾ ಬ್ಯುಸಿನೆಸ್ ಮ್ಯಾನ್, ಹೀಗಾಗಿ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಸಾಕಷ್ಟು ಒಲವು ಅಮೆರಿಕದಲ್ಲಿ ಮೂಡಿತ್ತು. ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಅವರ ಗೆಲುವಿಗೆ ಉದ್ಯಮಿಗಳು ಕೂಡ ಒಗ್ಗಟ್ಟಾಗಿದ್ದರು. ಹೀಗೆ ಭಾರತ ಮೂಲದ ನಂಟು ಹೊಂದಿದ್ದ ಕಮಲಾ ಹ್ಯಾರಿಸ್ ಅವರ ವಿರುದ್ಧವೇ ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲುವು ಸಾಧಿಸಿದ್ದರು. ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಇನ್ನೇನು ಕೆಲವೇ ದಿನದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದು, ಹೀಗೆ ಅಧಿಕಾರ ವಹಿಸಿಕೊಂಡ ತಕ್ಷಣವೇ ರಷ್ಯಾ & ಉಕ್ರೇನ್ ಯುದ್ಧಕ್ಕೆ ಬ್ರೇಕ್ ಬೀಳುವುದು ಗ್ಯಾರಂಟಿ ಆಗಿದೆ. ಹೇಗೆ ಗೊತ್ತಾ?

New President Of America The Donald Trump Aims to End Russia-Ukraine Conflict

ರಷ್ಯಾ & ಉಕ್ರೇನ್ ಯುದ್ಧಕ್ಕೆ ಬ್ರೇಕ್!

ಡೊನಾಲ್ಡ್ ಟ್ರಂಪ್ ತಾವು ಅಧಿಕಾರಕ್ಕೆ ಬಂದ 24 ಗಂಟೆ ಒಳಗೆ ರಷ್ಯಾ & ಉಕ್ರೇನ್ ಯುದ್ಧಕ್ಕೆ ಬ್ರೇಕ್ ಹಾಕುವ ಮಾತು ನೀಡಿದ್ದಾರೆ. ಈ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ತಕ್ಷಣವೇ ರಷ್ಯಾ ಅಧ್ಯಕ್ಷರಾದ ಪುಟಿನ್ ಜೊತೆಗೆ ಮಾತುಕತೆ ನಡೆಸಿ, ಮಹತ್ವದ ಚರ್ಚೆ ಮಾಡಿದ್ದರು. ಅಲ್ಲದೆ ಉಕ್ರೇನ್ ಜೊತೆಗಿನ ಸಂಧಾನ ಪ್ರಕ್ರಿಯೆ ಬಗ್ಗೆಯೂ ಇದೇ ಸಮಯದಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ.

24 ಗಂಟೆ ಒಳಗೆ ರಷ್ಯಾ & ಉಕ್ರೇನ್...

ಅಮೆರಿಕದ ಅಧ್ಯಕ್ಷರು ಎಷ್ಟು ಪವರ್‌ಫುಲ್ ಅನ್ನೋದು ಇಡೀ ಜಗತ್ತಿಗೇ ಗೊತ್ತಿರುವ ವಿಚಾರ. ಅದು ಹೇಗೆ ಅಂದ್ರೆ ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶ ಅಮೆರಿಕ ಯಾವುದೇ ದೇಶವನ್ನ ಕೂಡ ನಿಭಾಯಿಸುವ ಶಕ್ತಿ ಹೊಂದಿದೆ. ಹಾಗೇ ತನ್ನ ಬಳಿ ಇರುವ ಹಣದ ಶಕ್ತಿ ಕಾರಣಕ್ಕೆ ಅಮೆರಿಕ ಜಾಗತಿಕ ಆರ್ಥಿಕತೆ ಮೇಲೆ ಬಿಗಿಯಾದ ಹಿಡಿತ ಹೊಂದಿದೆ. ಹೀಗಿದ್ದಾಗಲೇ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಅಧಿಕಾರ ವಹಿಸಿಕೊಂಡ 24 ಗಂಟೆ ಒಳಗೆ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವುದು ಗ್ಯಾರಂಟಿ ಎನ್ನಲಾಗಿದೆ.

ಅದು ಹೇಗೆ ಅಂದ್ರೆ, ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರವನ್ನ ವಹಿಸಿಕೊಂಡ ತಕ್ಷಣ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ & ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿಯ ಜೊತೆಗೆ ಮಾತುಕತೆ ನಡೆಸಲು ಈಗಾಗಲೇ ಚಿಂತನೆ ನಡೆಸಲಾಗಿದೆ. ಹಾಗೇ ಈ ಮೂಲಕ ಅದೇ ದಿನ ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವೂ ನಿಲ್ಲುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+