ಇರಾಕಿ ಉಗ್ರ ಸಂಘಟನೆ ನಾಯಕತ್ವ ವಹಿಸಿಕೊಂಡ ಅಲ್ ಸಲ್ಬಿ
ನವದೆಹಲಿ, ಜನವರಿ 22: ಸಿರಿಯಾದಲ್ಲಿ ಅಮೆರಿಕ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಇರಾಕಿ ಉಗ್ರಪಡೆ ಐಎಸ್ಐಎಸ್ ಸ್ಥಾಪಕ, ಮುಖಸ್ಥ ಅಲ್ ಬಗ್ದಾದಿ ಹತನಾದ ಬಳಿಕ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ ಉಗ್ರ ಸಂಘಟನೆಗೆ ಯಾರು ನಾಯಕ ಎಂಬುದರ ಬಗ್ಗೆ ಕುತೂಹಲ ಮೂಡಿತ್ತು. ಈಗ ಐಸೀಸ್ ನಾಯಕನಾಗಿ ಆಮೀರ್ ಮೊಹಮ್ಮದ್ ಅಬ್ದುಲ್ ರೆಹಮಾನ್ ಅಲ್ ಮಾವ್ಲಿ ಅಲ್ ಸಲ್ಬಿ ಆಯ್ಕೆಯಾಗಿದ್ದಾನೆ ಎಂಬ ಸುದ್ದಿ ಬಂದಿದೆ.
ಐಸಿಸ್ ಸಂಘಟನೆಯ ಸ್ಥಾಪಕ ಸದಸ್ಯನಾಗಿರುವ ಸಲ್ಬಿಗೆ ಈ ಹೊಣೆ ನೀಡಲಾಗಿದೆ ಎಂದು ಗಾರ್ಡಿಯನ್ ಪತ್ರಿಕೆ ಬರೆದಿದೆ. ಎನ್ಸ್ಲವೆಮೆಂಟ್ ಆಫ್ ಇರಾಕ್ ಯಜಿದಿ ಮೈನಾರಿಟಿ ಗುಂಪಿನ ನೇತೃತ್ವವನ್ನು ಈ ಮುಂಚೆ ವಹಿಸಿಕೊಂಡಿದ್ದ ಸಲ್ಬಿ ಈಗ ದೊಡ್ಡ ಉಗ್ರಪಡೆಯನ್ನು ಮುನ್ನಡೆಸುವ ಹೊಣೆ ಹೊತ್ತುಕೊಂಡಿದ್ದಾನೆ.
ತಲ್ ಅಫಾರ್ ಪಟ್ಟಣದ ಇರಾಕಿ ಟರ್ಕ್ಮೆನ್ ಕುಟುಂಬದಲ್ಲಿ ಜನಿಸಿರುವ ಸಲ್ಬಿ, ಐಸಿಸ್ ನಾಯಕತ್ವ ಪಟ್ಟಿಯಲ್ಲಿ ಕೆಲವೇ ಅರಬ್ಯೇತರ ನಾಯಕರಲ್ಲಿ ಒಬ್ಬನಾಗಿದ್ದಾನೆ. ಈತನನ್ನು ನಾಮ್ ಡೆ ಗುರ್ರೆ ಹಜಿ ಅಬ್ದುಲ್ಲಾ ಹೆಸರಿನಿಂದಲೂ ಕರೆಯಲಾಗುತ್ತದೆ

ಬಾಗ್ದಾದಿ ಸ್ಥಾನಕ್ಕೆ ಸಬು ಇಬ್ರಾಹಿಂ ಅಲ್ ಹಸಿಮಿ ಅಲ್ ಖುರೇಷಿ ಹೆಸರು ಕೂಡ ಕೇಳಿಬಂದಿತ್ತು. ಆದರೆ, ಸಂಘಟನೆಯ ಹಿರಿಯ ನಾಯಕರು ಸಲ್ಬಿಗೆ ನಾಯಕತ್ವ ಪಟ್ಟ ಕಟ್ಟಲು ಮನಸ್ಸು ಮಾಡಿದರು ಎಂದು ಗುಪ್ತಚರ ವರದಿ ತಿಳಿಸಿದೆ.












Click it and Unblock the Notifications