ಇಸ್ರೇಲ್‌ನಲ್ಲಿ ಕಾಣಿಸಿಕೊಂಡ ಕೊರೊನಾವೈರಸ್ ಹೊಸ ರೂಪಾಂತರಿ ಜಗತ್ತಿಗೆ ಅಪಾಯಕಾರಿಯೇ?

ಜೆರುಸಲೇಂ, ಮಾರ್ಚ್ 17: ಜಗತ್ತಿನಾದ್ಯಂತ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ತಗ್ಗಿದೆ. ಇದರ ಮಧ್ಯೆ ಇಸ್ರೇಲ್‌ನಲ್ಲಿ ಕೊವಿಡ್-19 ಸೋಂಕಿನ ಹೊಸ ರೂಪಾಂತರ ಪತ್ತೆಯಾಗಿರುವುದು ಹೊಸ ಆತಂಕವನ್ನು ಸೃಷ್ಟಿ ಮಾಡಿದೆ.

ಬುಧವಾರ ಇಸ್ರೇಲ್‌ಗೆ ಆಗಮಿಸಿದ ಇಬ್ಬರು ಪ್ರಯಾಣಿಕರಲ್ಲಿ ಕೊರೊನಾವೈರಸ್ ಸೋಂಕಿನ ಹೊಸ ರೂಪಾಂತರಿ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಕೊವಿಡ್ -19 ರೂಪಾಂತರಗಳನ್ನು ಪತ್ತೆ ಮಾಡುವ ಮತ್ತು ಗೊತ್ತುಪಡಿಸುವ ವಿಶ್ವ ಆರೋಗ್ಯ ಸಂಸ್ಥೆ (WHO), ಇಸ್ರೇಲ್‌ನ ವರದಿಗಳ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

ಹೊಸ ರೂಪಾಂತರಿ ಕೋವಿಡ್-19 ರೋಗಾಣುವಿನಲ್ಲಿ ಓಮಿಕ್ರಾನ್ ಆವೃತ್ತಿಯ ಎರಡು ಉಪ-ರೋಗಾಣುಗಳ ಸಂಯೋಜನೆಯಾಗಿದೆ. BA.1 ಮತ್ತು BA.2 ಎಂದು ವರದಿಯಲ್ಲಿ ಹೇಳಲಾಗಿದೆ. ಈ ರೂಪಾಂತರದ ಬಗ್ಗೆ ಪ್ರಪಂಚದಾದ್ಯಂತ ಇನ್ನೂ ತಿಳಿದಿಲ್ಲ" ಎಂದು ಆರೋಗ್ಯ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ. ಹಾಗಿದ್ದರೆ ಇಸ್ರೇಲ್ ನೆಲದಲ್ಲಿ ಕಾಣಿಸಿಕೊಂಡ ಕೊರೊನಾವೈರಸ್ ಹೊಸ ರೂಪಾಂತರಿಯ ಲಕ್ಷಣಗಳೇನು ಎಂಬುದರ ಕುರಿತು ಈ ವರದಿಯಲ್ಲಿ ತಿಳಿಯೋಣ.

ಇಸ್ರೇಲ್‌ನಲ್ಲಿ ಕಾಣಿಸಿಕೊಂಡ ಕೊರೊನಾವೈರಸ್ ಸೋಂಕಿನ ಲಕ್ಷಣಗಳು

ಇಸ್ರೇಲ್‌ನಲ್ಲಿ ಕಾಣಿಸಿಕೊಂಡ ಕೊರೊನಾವೈರಸ್ ಸೋಂಕಿನ ಲಕ್ಷಣಗಳು

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕ ತಗ್ಗಿದರೂ ಹೊಸ ರೂಪಾಂತರಿಗಳ ಕಾಟ ಮಾತ್ರ ಕಡಿಮೆ ಆಗುತ್ತಿಲ್ಲ. ಈಗ ಇಸ್ರೇಲ್‌ನಲ್ಲಿ ಪತ್ತೆಯಾದ ಕೊವಿಡ್-19 ರೂಪಾಂತರದ ಲಕ್ಷಣಗಳು ಹೀಗಿವೆ. ಕಡಿಮೆ ಜ್ವರ, ಸ್ನಾಯು ನೋವು ಮತ್ತು ತಲೆನೋವು ಹೊಸ ಕೊವಿಡ್-19 ರೂಪಾಂತರದ ಇತರ ಸೌಮ್ಯ ಲಕ್ಷಣಗಳಾಗಿವೆ. ಈ ರೂಪಾಂತರದಿಂದ ಉಂಟಾದ ಅನಾರೋಗ್ಯಕ್ಕೆ ವಿಶೇಷ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಸಚಿವಾಲಯವನ್ನು ಉಲ್ಲೇಖಿಸಿ ಸುದ್ದಿ ವರದಿ ಮಾಡಿದೆ.

ಇಸ್ರೇಲ್‌ನಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾವೈರಸ್ ರೂಪಾಂತರ

ಇಸ್ರೇಲ್‌ನಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾವೈರಸ್ ರೂಪಾಂತರ

ಕೊರೊನಾವೈರಸ್ ಸೋಂಕಿನ ಹೊಸ ರೂಪಾಂತರವು ಮೊದಲು ಇಸ್ರೇಲ್‌ನಲ್ಲಿ ಹುಟ್ಟಿಕೊಂಡಿರಬಹುದು ಎಂದು ಇಸ್ರೇಲ್ ಆರೋಗ್ಯ ಸಚಿವಾಲಯದ ಮಹಾನಿರ್ದೇಶಕ ನಾಚ್‌ಮನ್ ಆಶ್ ಹೇಳಿದ್ದಾರೆ. "ಇಸ್ರೇಲ್‌ನಲ್ಲಿ ವಿಮಾನ ಹತ್ತುವ ಮೊದಲು ಅವರು ಸೋಂಕಿಗೆ ಒಳಗಾಗಿರುವ ಸಾಧ್ಯತೆಯಿದೆ. ರೂಪಾಂತರವು ಇಲ್ಲಿ ಹೊರಹೊಮ್ಮಿರಬಹುದು" ಎಂದು ನಾಚ್‌ಮನ್ ಆಶ್ ಬುಧವಾರ ತಿಳಿಸಿದ್ದಾರೆ.

ಕೊರೊನಾವೈರಸ್ ಹೊಸ ರೂಪಾಂತರಿ ಅಪಾಯಕಾರಿಯೇ?

ಕೊರೊನಾವೈರಸ್ ಹೊಸ ರೂಪಾಂತರಿ ಅಪಾಯಕಾರಿಯೇ?

ಹೊಸ ರೂಪಾಂತರವು ದೇಶದಲ್ಲಿ ಕೊರೊನಾವೈರಸ್ ಹೊಸ ಅಲೆಯನ್ನು ಹುಟ್ಟು ಹಾಕುವ ನಿರೀಕ್ಷೆಯಿಲ್ಲ ಎಂದು ಇಸ್ರೇಲಿ ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. "ಸಂಯೋಜಿತ ರೂಪಾಂತರಗಳ ವಿದ್ಯಮಾನವು ಚಿರಪರಿಚಿತವಾಗಿದೆ" ಎಂದು ಅಧಿಕಾರಿಯೊಬ್ಬರು ಹೇಳಿದರು. "ಈ ಹಂತದಲ್ಲಿ, ಹೊಸ ರೂಪಾಂತರವು ಗಂಭೀರ ಪ್ರಕರಣಗಳಿಗೆ ಕಾರಣವಾಗುತ್ತದೆ ಎಂಬ ಬಗ್ಗೆ ನಾವು ಚಿಂತಿಸುವ ಅಗತ್ಯವಿಲ್ಲ," ಎಂದಿದ್ದಾರೆ.

ಇಸ್ರೇಲ್‌ನಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು

ಇಸ್ರೇಲ್‌ನಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಲೆಗಳ ಭೀತಿ ಈಗ ಅಷ್ಟಾಗಿಲ್ಲ. ಅದಾಗ್ಯೂ, ಇಸ್ರೇಲ್‌ನಲ್ಲಿ ಒಂದು ದಿನದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 4 ಸಾವಿರಕ್ಕಿಂತ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 4,766 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 6 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 5,020 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,737,352ಕ್ಕೆ ಏರಿಕೆಯಾಗಿದೆ. ಈ ಪೈಕಿ 3,686,283 ಸೋಂಕಿತರು ಗುಣಮುಖರಾಗಿದ್ದರೆ, 10,405 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 40,664 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+